ಬೆಂಗಳೂರು : ಸಿಎಂ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್ ಬಹಳ ಬೇಸರ ಹಾಗೂ ನೀರಸವಾಗಿದೆ ಎಂದು ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್ ಬೇಸರ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷ ಪಿ.ಸಿ ರಾವ್(PC Rao), ನಮ್ಮ ಪ್ರೊಫೆಷನಲ್ ಟ್ಯಾಕ್ಸ್ ಕಡಿತ ಮಾಡುವ ನಿರೀಕ್ಷೆ ಇತ್ತು. ರಾಜ್ಯ ಬಜೆಟ್ ನಮಗೆ ಬೇಸರ ತರಿಸಿದೆ. ಪಿಎಫ್ ನೆಪದಲ್ಲಿ ಕಡಿಮೆ ವೇತನ ಪಡೆಯುವವರಿಗೆ 200 ರೂ. ತೆರಿಗೆ ಕಡಿತ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದರು. ಈ ತೀರ್ಮಾನವನ್ನ ಕೂಡಲೇ  ಹಿಂಪಡೆಯುವಂತೆ ಆಗ್ರಹಿಸಿದರು. 


ಇದನ್ನೂ ಓದಿ : Karnataka Budget 2022: ಗುಣಮಟ್ಟದ ಶಿಕ್ಷಣಕ್ಕೆ ಬೊಮ್ಮಾಯಿ ಬಜೆಟ್ ಕೊಡುಗೆ ಏನು?


ಕರೋನಾ(Corona)ದಿಂದ ಹೊಟೇಲ್, ಪ್ರವಾಸೋದ್ಯಮ ವಲಯ ಕೆಳಮಟ್ಟಕ್ಕೆ ಕುಸಿದಿದೆ. ಈ ಬಗ್ಗೆ ಯಾವುದೇ ವಿಚಾರ ಪ್ರಸ್ತಾಪ ಮಾಡದೆ ಇರುವುದು ಬೇಸರದ ಸಂಗತಿ. ಲೈಸನ್ಸ್ ಪಡೆಯುವ ವಿಚಾರದಲ್ಲಿ ತೊಂದರೆ ಆಗ್ತಿರೋದನ್ನ ಬಗೆಹರಿಸೋ ನಿಟ್ಟಿನಲ್ಲಿ ಕ್ರಮ ಕೈಗೊಂಡಿಲ್ಲ. ಹೋಟೆಲ್ ಉದ್ಯಮದಲ್ಲಿ ಅಲ್ಲೋಲ ಕಲ್ಲೋಲವಾಗಿದೆ. ನಾವು ಲಾಕ್ ಡೌನ್ ಹಾಗೂ ಕೊರೋನಾ ಸಮಯದಲ್ಲಿ ಬಹಳ ಸಂಕಷ್ಟ ಎದುರಾಗಿತ್ತು. ಟ್ರೇಡ್ ಲೈಸೆನ್ಸ್ ಅನ್ನು ಕೈ ಬಿಡಿಬೇಕು ಅಂತ ಕೇಳಿಕೊಂಡಿದ್ವಿ. ಜಿಎಸ್ ಟಿ ಲೈಸೆನ್ಸ್ ರೀತಿಯಲ್ಲಿ ಹಲವು ಲೈಸೆನ್ಸ್ ಇದೆ. ಇದರ ಜೊತೆಗೆ ಟ್ರೇಡ್ ಲೈಸೆನ್ಸ್ ಕೂಡ ಇದೆ.  ಹೋಟೆಲ್ ಕಾರ್ಮಿಕರ ವಿಶೇಷ ಪ್ಯಾಕೇಜ್ ಘೋಷಣೆಯಾಗ ಬೇಕಿತ್ತು. ಹೀಗಾಗಿ ನಮ್ಮ ಬೇಡಿಕೆಗಳನ್ನು ಮತ್ತೆ ಸಿಎಂ ಮುಂದೆ ಇಡುತ್ತೇವೆ ಎಂದು ತಿಳಿಸಿದ್ದಾರೆ.


ಇದನ್ನೂ ಓದಿ : Bengaluru Crime : ತೀಟೆ ತೀರದ ತಾತನ ಕಥೆ ಕೇಳಿ ಥಂಡಾ ಹೊಡೆದ ಪೊಲೀಸರು!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.