Bengaluru Crime : ತೀಟೆ ತೀರದ ತಾತನ ಕಥೆ ಕೇಳಿ ಥಂಡಾ ಹೊಡೆದ ಪೊಲೀಸರು!

ಆರೋಪಿ ರಮೇಶ್(Ramesh) ಎರಡು ಮದುವೆ, ಮೂರು ಮಕ್ಕಳಾಗಿದ್ದರು ಆಸೆ ಕಡಿಮೆಯಾಗಿಲ್ಲ. ಆರೋಪಿ ಮೂಲತಃ ಚಿಕ್ಕಮಗಳೂರಿನವ, ತನ್ನ ಚಟಕ್ಕೆ ಮನೆಯಲ್ಲಿ ಹಣ ಕೊಡಲಿಲ್ಲ ಎಂದು ಮನೆ ಕಳ್ಳತನ ಮಾಡಲು ಆರಂಭಿಸಿದ್ದ.

Written by - Zee Kannada News Desk | Last Updated : Mar 4, 2022, 03:20 PM IST
  • ಹೆಣ್ಣು ಮಕ್ಕಳ ಚಟಕ್ಕೆ ಬಿದ್ದು ಕಳ್ಳತನ ಮಾಡುತ್ತಿದ್ದ ವೃದ್ಧ
  • ವೃದ್ಧನನ್ನ ಬಂಧಿಸಿದ ಸುದ್ದುಗುಂಟೆ ಪೊಲೀಸರು
  • ಎರಡು ಮದುವೆ, ಮೂರು ಮಕ್ಕಳಾಗಿದ್ದರು ಕಡಿಮೆಯಾಗಿಲ್ಲ ವೃದ್ಧನ ಆಸೆ
Bengaluru Crime : ತೀಟೆ ತೀರದ ತಾತನ ಕಥೆ ಕೇಳಿ ಥಂಡಾ ಹೊಡೆದ ಪೊಲೀಸರು! title=

ಬೆಂಗಳೂರು : ಹೆಣ್ಣು ಮಕ್ಕಳ ಚಟಕ್ಕೆ ಬಿದ್ದು ಕಳ್ಳತನ ಮಾಡುತ್ತಿದ್ದ ವೃದ್ಧನನ್ನ ಸುದ್ದುಗುಂಟೆ ಪೊಲೀಸರು ಬಂಧಿಸಿದ್ದಾರೆ. 70 ವರ್ಷದ ರಮೇಶ್ ಬಂಧಿತ ಆರೋಪಿ ಎಂದು ಆಗ್ನೇಯ ವಿಭಾಗ ಡಿಸಿಪಿ ಶ್ರೀನಾಥ್ ಜೋಶಿ ತಿಳಿಸಿದ್ದಾರೆ.

ಸಿಸಿಟಿವಿ ಆಧರಿಸಿ ಮನೆಗಳ್ಳತನ ಪ್ರಕರಣಗಳ ಸಂಬಂಧಗಳ ತನಿಖೆಯ ವಿಚಾರಣೆ ವೇಳೆ ಆರೋಪಿ ರಮೇಶ್ ಗೆ ಹೆಣ್ಣು ಮಕ್ಕಳ ಚಟ ಇರುವ ಬಗ್ಗೆ ಬಯಲಿಗೆ ಬಂದಿದೆ. ಆರೋಪಿ ರಮೇಶ್(Ramesh) ಎರಡು ಮದುವೆ, ಮೂರು ಮಕ್ಕಳಾಗಿದ್ದರು ಆಸೆ ಕಡಿಮೆಯಾಗಿಲ್ಲ. ಆರೋಪಿ ಮೂಲತಃ ಚಿಕ್ಕಮಗಳೂರಿನವ, ತನ್ನ ಚಟಕ್ಕೆ ಮನೆಯಲ್ಲಿ ಹಣ ಕೊಡಲಿಲ್ಲ ಎಂದು ಮನೆ ಕಳ್ಳತನ ಮಾಡಲು ಆರಂಭಿಸಿದ್ದ.

ಇದನ್ನೂ ಓದಿ : Karnataka Crime : ಗುಂಡ್ಲುಪೇಟೆಯಲ್ಲಿ‌‌‌ ಕಲ್ಲು ಕ್ವಾರಿ ಕುಸಿತ ; ಲಾರಿಗಳೆಲ್ಲಾ ಪಲ್ಟಿ, 6 ಜನ ಸಿಲುಕಿರುವ ಶಂಕೆ

ಆರೋಪಿ ರಮೇಶ್ ಕಳೆದ 12 ವರ್ಷಗಳ ಹಿಂದೆ ಮನೆ ತೊರೆದು ತಮಿಳುನಾಡಿಗೆ(Tamilunadu) ತೆರಳಿದ್ದ. ಅಲ್ಲಿ ಸಣ್ಣಪುಟ್ಟ ಕಳ್ಳತನ ಮಾಡಿಕೊಂಡು ಬಂದ ಹಣದಲ್ಲಿ ವ್ಯಾಮೊಹ ತೀರಿಸಿಕೊಳ್ಳುತಿದ್ದ. ಆದ್ರೆ ಯಾವಾಗ ತಮಿಳುನಾಡು ಪೊಲೀಸರು ಬಂಧಿಸಿದ್ರೊ ಬಿಡುಗಡೆಯಾದ ಬಳಿಕ ಬೆಂಗಳೂರಿಗೆ ಶಿಫ್ಟ್ ಆಗಿದ್ದ. ಎರಡು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಮನೆಗಳ್ಳತನ ಮಾಡಲು ಆರಂಭಿಸಿದ್ದ. ಸಧ್ಯ ಸುದ್ದುಗುಂಟೆ ಪಾಳ್ಯ ಹಾಗೂ ಮೈಕೊಲೇಔಟ್ ಠಾಣೆಗಳ ಅಡಿಯಲ್ಲಿ ಆರೋಪಿ ರಮೇಶ್ ವಿರುದ್ಧ ಪ್ರಕರಣ ದಾಖಲಾಗಿವೆ. ಸುದ್ದುಗುಂಟೆ ಪೊಲೀಸರು ಸಿಸಿಟಿವಿ ಆಧರಿಸಿ ಆರೋಪಿ ಬಂಧಿಸಿದ್ದಾರೆ. ಬಂಧಿತನಿಂದ 170 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ : Karnataka Budget 2022 : ಸಿಎಂ ಬೊಮ್ಮಾಯಿ‌ ಚೊಚ್ಚಲ ಬಜೆಟ್ ನ ಒಟ್ಟು ಮೌಲ್ಯ ಎಷ್ಟು ಸಾವಿರ ಕೋಟಿ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News