ಬೆಂಗಳೂರು: ಬೆಂಗಳೂರು ವಿಶ್ವದಲ್ಲೇ ಅತ್ಯಂತ ಅಗ್ಗದ ಏಷ್ಯನ್ ನಗರವಾಗಿದೆ ಆದರೆ ಸಿಂಗಾಪುರ್ ಅತ್ಯಂತ ದುಬಾರಿ ನಗರವಾಗಿದೆ ಎಂದು ಸಮೀಕ್ಷೆಯೊಂದು ವರದಿ ಮಾಡಿದೆ. 133 ದೇಶಗಳ ಪಟ್ಟಿಯಲ್ಲಿ ಮುಂಬೈ, ನವದೆಹಲಿ ಮತ್ತು ಚೆನ್ನೈ ನಗರಗಳು ಕ್ರಮವಾಗಿ 121, 124 ಮತ್ತು 126ನೇ ಸ್ಥಾನದಲ್ಲಿವೆ.


COMMERCIAL BREAK
SCROLL TO CONTINUE READING

ದಿ ಇಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ನ ವರ್ಲ್ಡ್ವೈಡ್ ಕಾಸ್ಟ್ ಆಫ್ ಲಿವಿಂಗ್ ಸರ್ವೆ 2018 ಪ್ರಕಾರ, ಸಿರಿಯಾದ ಡಮಾಸ್ಕಸ್, ವೆನೆಜುವೆಲಾ ರಾಜಧಾನಿ ಕಾರಾಕಾಸ್, ಕಝಾಕಿಸ್ತಾನದ ಅಲ್ಮಾಟಿ ಮತ್ತು ನೈಜೀರಿಯದ ಲಾಗೊಸ್ಗಳು ಬೆಂಗಳೂರಿಗಿಂತ ಅಗ್ಗದ ನಗರಗಳಾಗಿದ್ದು, 
129 ನೇ ಸ್ಥಾನದಲ್ಲಿವೆ.


ಈ ತಿಂಗಳ ಆರಂಭದಲ್ಲಿ ಈ ವರದಿಯನ್ನು ಬಿಡುಗಡೆ ಮಾಡಲಾಗಿದೆ ಮತ್ತು ಸಮೀಕ್ಷೆಯು 150 ಉತ್ಪನ್ನಗಳ ಮತ್ತು 400 ಕ್ಕಿಂತ ಹೆಚ್ಚು ಪ್ರತ್ಯೇಕ ಸೇವೆಗಳನ್ನು ಒಳಗೊಂಡಂತೆ ಬೆಲೆಗಳನ್ನು ಹೋಲಿಸಿ ಆಧರಿಸಿದೆ.


ಸಮೀಕ್ಷೆಯ ಪ್ರಕಾರ ಡಮಾಸ್ಕಸ್ ಮತ್ತು ಕ್ಯಾರಕಸ್ ನಗರಗಳು ಅಲ್ಲಿನ ರಾಜಕೀಯ ಪರಿಸ್ಥಿತಿಯಿಂದಾಗಿ ಅಗ್ಗವಾಗಿದೆ, ಪಟ್ಟಿಯಲ್ಲಿ ಹೆಸರಿಸಲಾದ ಬೆಂಗಳೂರು ಮತ್ತು ಇತರ ಏಷ್ಯನ್ ನಗರಗಳು ರಚನಾತ್ಮಕವಾಗಿ ಅಗ್ಗವಾಗಿವೆ.


ಏಷ್ಯಾವು ಅತ್ಯಂತ ದುಬಾರಿ ಮತ್ತು ಅಗ್ಗದ ನಗರಗಳಿಗೆ ನೆಲೆಯಾಗಿದೆ, ಇದು ಹಣಕ್ಕಾಗಿ ಉತ್ತಮ ಮೌಲ್ಯವನ್ನು ಒದಗಿಸುತ್ತಿದೆ ಎಂದು ಸಹ ಸಮೀಕ್ಷೆಯಲ್ಲಿ ಸೇರಿಸಲಾಗಿದೆ.