ಬೆಂಗಳೂರು : ಹೊಸ ವರ್ಷದ ಸಂಭ್ರಮಾಚರಣೆ ನೆಪದಲ್ಲಿ ಕುಡಿದು ವಾಹನ ಚಲಾಯಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಟ್ರಾಫಿಕ್ ಸ್ಪಷಲ್ ಕಮಿಷನರ್ ಡಾ. ಎಂ.ಎ ಸಲೀಂ ಎಚ್ಚರಿಕೆ ನೀಡಿದ್ದಾರೆ. ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮತನಾಡಿದ ಅವರು, ನ್ಯೂ ಇಯರ್ ಸಲೆಬ್ರೇಷನ್ ಮಾಡಿ ಜನರು ಸೇಫ್ ಆಗಿ ಮನೆಗೆ ತೆರಳಬೇಕು.


COMMERCIAL BREAK
SCROLL TO CONTINUE READING

ಹೆಚ್ಚು ಜನ ಸೇರುವ ಕಾರಣ ಪಬ್ಲಿಕ್ ಟ್ರಾನ್ಸ್ ಪೋರ್ಟ್‌ಗಳನ್ನು ಬಳಸಬೇಕು. ಹೊಸ ವರ್ಷದ ದಿನ ರಾತ್ರಿ 2 ಗಂಟೆ ತನಕ ಮೆಟ್ರೋ ಹಾಗೂ ಬಿಎಂಟಿಸಿ ಬಸ್ ಸೇವೆ ಇರಲಿದೆ. ಡ್ರಂಕ್ ಅಂಡ್ ಡ್ರೈವ್, ಡ್ರಾಗ್ ರೇಸ್ ಮತ್ತು ವೀಲ್ಹಿಂಗ್ ಮಾಡುವವರ ವಿರುದ್ಧ ಮುಲಾಜಿಲ್ಲದೇ ಕಠಿಣ ಕ್ರಮ ಕೈಗೊಳ್ಳಲಾಗುವುದು. 31 ರಾತ್ರಿ ಏರ್ಪೋರ್ಟ್ ಫ್ಲೈ ಓವರ್ ಒಂದನ್ನು ಬಿಟ್ಟು ಉಳಿದ ಎಲ್ಲಾ ಫ್ಲೈ ಓವರ್‌ಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗವುದು. ಪ್ರಮುಖವಾಗಿ ಎಂಜಿ ರೋಡ್ ಬ್ರಿಗೇಡ್ ರೋಡ್, ಕೋರಮಂಗಲ, ಇಂದಿರಾನಗರ ಸೇರಿದಂತೆ ಹೆಚ್ಚು ಜನ ಸೇರುವ ಕಡೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಇನ್ನೂ ನೈಸ್ ರಸ್ತೆಯಲ್ಲಿ ಸಹ ರಾತ್ರಿ ಒಂಬತ್ತು ಗಂಟೆ ಬಳಿಕ ದ್ವಿಚಕ್ರ ವಾಹನಗಳ ಸಂಚಾರ ಬಂದ್ ಮಾಡಲಾಗುತ್ತದೆ ಎಂದಿದ್ದಾರೆ.


ಇದನ್ನೂ ಓದಿ: PGCET Results : ಇಂದು ಪಿಜಿಸಿಇಟಿ ಫಲಿತಾಂಶ ಬಿಡುಗಡೆ..!


ಎಲ್ಲಿ ಸಾರ್ವಜನಿಕ ವಾಹನಗಳ ಪ್ರವೇಶ ನಿಷೇಧ


  1. ಎಂ.ಜಿ.ರಸ್ತೆ, ಅನಿಲ್ ಕುಂಬ್ಳೆ ವೃತ್ತದಿಂದ ಮೆಯೋ ಹಾಲ್ ಬಳಿಯ ರೆಸಿಡೆನ್ಸಿ ರಸ್ತೆ ಜಂಕ್ಷನ್ ವರೆಗೆ 

  2. ಬ್ರಿಗೇಡ್ ರಸ್ತೆಯಲ್ಲಿ, ಕಾವೇರಿ ಎಂಪೋರಿಯಂ ಜಂಕ್ಷನ್ ನಿಂದ ಅಪೇರಾ ಜಂಕ್ಷನ್ ವರೆಗೆ

  3. ಚರ್ಚ್ ಸ್ಟ್ರೀಟ್ ರಲ್ಲಿ, ಬ್ರಿಗೇಡ್ ರಸ್ತೆ ಜಂಕ್ಷನ್‌ನಿಂದ ಮ್ಯೂಸಿಯಂ ರಸ್ತೆ ಜಂಕ್ಷನ್ ವರೆಗೆ 

  4. ಮ್ಯೂಸಿಯಂ ರಸ್ತೆಯಲ್ಲಿ, ಎಂ.ಜಿ.ರಸ್ತೆ ಜಂಕ್ಷನ್‌ನಿಂದ ಹಳೇ ಮದ್ರಾಸ್ ಬ್ಯಾಂಕ್ ರಸ್ತೆ (ಎಸ್.ಬಿ.ಐ.) ವೃತ್ತದ ವರೆ 2) ರೆಸ್ಟ್ ಹೌಸ್ ರಸ್ತೆಯಲ್ಲಿ, ಮ್ಯೂಸಿಯಂ ರಸ್ತೆ ಜಂಕ್ಷನ್ ನಿಂದ ಬ್ರಿಗೇಡ್ ರಸ್ತೆ ಜಂಕ್ಷನ್ ವರೆಗೆ

  5. ರೆಸಿಡೆನ್ಸಿ ಕ್ರಾಸ್ ರಸ್ತೆಯಲ್ಲಿ, ರೆಸಿಡೆನ್ಸಿ ರಸ್ತೆ ಜಂಕ್ಷನ್‌ನಿಂದ ಎಂ.ಜಿ.ರಸ್ತೆ ಜಂಕ್ಷನ್ ವರೆಗೆ (ಶಂಕರ್‌ನಾಗ್ ಚಿತ್ರ ಮಂದಿರ) ಈ ರಸ್ತೆಗಳಲ್ಲಿ ದಿನಾಂಕ:31 ರಂದು ರಾತ್ರಿ 10 ಗಂಟೆಯಿಂದ 01 ರ 01:00 ಗಂಟೆಯವರೆಗೆ ಅಗತ್ಯ ಸೇವೆ  ಹೊರತುಪಡಿಸಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.


ಎಲ್ಲಿ ಪಾರ್ಕಿಂಗ್ ನಿಷೇಧ


  1. ಎಂ.ಜಿ.ರಸ್ತೆಯಲ್ಲಿ, ಅನಿಲ್ ಕುಂಬ್ಳೆ ವೃತ್ತದಿಂದ ಟ್ರಿನಿಟಿ ವೃತ್ತದವರೆಗೆ

  2. ಬ್ರಿಗೇಡ್ ರಸ್ತೆಯಲ್ಲಿ, ಆರ್ಟ್ಸ್ & ಕ್ರಾಫ್ಟ್ ಜಂಕ್ಷನ್‌ನಿಂದ ಅಪೇರಾ ಜಂಕ್ಷನ್‌ ವರೆಗೆ

  3. ಚರ್ಚ್ ಸ್ಟ್ರೀಟ್ ರಲ್ಲಿ, ಬ್ರಿಗೇಡ್ ರಸ್ತೆ ಜಂಕ್ಷನ್‌ನಿಂದ ಸೆಂಟ್ ಮಾರ್ಕ್ಸ್ ರಸ್ತೆ ಜಂಕ್ಷನ್ ವರೆಗೆ

  4. ರೆಸ್ಟ್ ಹೌಸ್ ರಸ್ತೆಯಲ್ಲಿ, ಬ್ರಿಗೇಡ್ ರಸ್ತೆ ಜಂಕ್ಷನ್‌ ನಿಂದ ಮ್ಯೂಸಿಯಂ ರಸ್ತೆ ಜಂಕ್ಷನ್‌ವರೆಗೆ

  5. ಮ್ಯೂಸಿಯಂ ರಸ್ತೆಯಲ್ಲಿ, ಎಂ.ಜಿ.ರಸ್ತೆ ಜಂಕ್ಷನ್‌ನಿಂದ ಹಳೇ ಮದ್ರಾಸ್‌ ಬ್ಯಾಂಕ್ ರಸ್ತೆ (ಎಸ್.ಬಿ.ಐ.) ವೃತ್ತದ ವರೆಗೆ 


ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ. ತಪ್ಪಿದ್ದಲ್ಲಿ ಅಂತವರಿಗೆ ದಂಡ ವಿಧಿಸಲಾಗುತ್ತದೆ‌.


ಇನ್ನೂ ಕಂಡಿಕೆ 2 ರಲ್ಲಿನ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ರಸ್ಟ್ ಹೌಸ್ ರಸ್ತೆ, ಚರ್ಚ್ ಸ್ಟ್ರೀರ್ಟ್, ರೆಸಿಡೆನ್ಸಿ ರಸ್ತೆ & ಸೆಂಟ್ ಮಾರ್ಕ್ಸ್ ರಸ್ತೆಗಳಲ್ಲಿ ನಿಲ್ಲಿಸಿದಂತಹ ವಾಹನಗಳ ಚಾಲಕರುಮಾಲೀಕರು ತಮ್ಮ ವಾಹನಗಳನ್ನು ಹೊಸ ವರ್ಷದ ಆಚರಣೆ ಒಳಗಾಗಿ  ಗಂಟೆಯೊಳಗಾಗಿ ತೆರವುಗೊಳಿಸಬೇಕು ತಪ್ಪಿದಲ್ಲಿ ದಂಡ ವಿಧಿಸಲಾಗುವುದು.
ಇನ್ನೂ ಎಂ.ಜಿ.ರಸ್ತೆ, ಕ್ವೀನ್ಸ್ ವೃತ್ತದ ಕಡೆಯಿಂದ ಹಲಸೂರು ಹಾಗೂ ಇನ್ನೂ ಮುಂದಕ್ಕೆ ಹೋಗುವಂತಹ ವಾಹನ ಚಾಲಕರು ಅನಿಲ್‌ ಕುಂಬ್ಳೆ ವೃತ್ತದಲ್ಲಿ ಎಡ ತಿರುವು ಪಡೆದು, ಸೆಂಟ್ರಲ್ ಸ್ಟ್ರೀಟ್-ಬಿ.ಆರ್.ವಿ. ಜಂಕ್ಷನ್-ಬಲ ತಿರುವು- ಕಬ್ಬನ್‌ರಸ್ತೆ ಮೂಲಕ ಸಂಚರಿಸಿ ವೆಬ್ ಜಂಕ್ಷನ್ ಬಳಿ ಎಂ.ಜಿ.ರಸ್ತೆಯನ್ನು ಸೇರಿ ಮುಂದೆ ಸಾಗಬಹುದಾಗಿದೆ.


  • ಹಲಸೂರು ಕಡೆಯಿಂದ ಕಂಟೊನ್ಮೆಂಟ್ ಕಡೆಗಳಿಗೆ ಹೋಗುವಂತಹ ವಾಹನಗಳು, ಟ್ರಿನಿಟಿ ವೃತ್ತದಲ್ಲಿ ಬಲ ತಿರುವು ಪಡೆದುಕೊಂಡು ಹಲಸೂರು ರಸ್ತೆ - ಡಿಕನ್ಸನ್ ರಸ್ತೆ ಮಾರ್ಗವಾಗಿ ಸಂಚರಿಸಿ ಕಬ್ಬನ್‌ ರಸ್ತೆ ಸೇರಿ ಮುಂದೆ ಸಾಗುವುದು.

  • ಕಾಮರಾಜ ರಸ್ತೆಯಲ್ಲಿ, ಕಬ್ಬನ್‌ ರಸ್ತೆ ಜಂಕ್ಷನ್‌ನಿಂದ ಕಮರ್ಷಿಯಲ್ ಸ್ಟ್ರೀಟ್ ಜಂಕ್ಷನ್ ವರೆಗೆ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.

  • ಸಾರ್ವಜನಿಕರು ತಮ್ಮ ವಾಹನಗಳನ್ನು ಶಿವಾಜಿನಗರ ಎಂ.ಟಿ.ಸಿ. ಶಾಪಿಂಗ್ ಕಾಂಪ್ಲೆಕ್ಸ್‌ 1ನೇ ಮಹಡಿಯ ವಾಹನ ನಿಲುಗಡೆ ಸ್ಥಳದಲ್ಲಿ ಸಹ ನಿಲುಗಡೆ ಮಾಡಬಹುದಾಗಿದೆ.


ಪ್ರಮಖವಾಗಿ ಪಾದಚಾರಿಗಳು ಬ್ರಿಗೇಡ್ ರಸ್ತೆಯಲ್ಲಿ, ಎಂ.ಜಿ.ರಸ್ತೆ ಜಂಕ್ಷನ್ ನಿಂದ ಅಪೇರಾ ಜಂಕ್ಷನ್ ಕಡೆಗೆ ಕಾಲ್ನಡಿಗೆಯಲ್ಲಿ ಮಾತ್ರ ಹೋಗುಬಹುದು. ವಿರುದ್ಧ ದಿಕ್ಕಿನಲ್ಲಿ ಹೋಗುವುದನ್ನು ನಿಷೇಧಿಸಲಾಗಿದೆ. ಬರಬೇಕಾದಲ್ಲಿ ರೆಸಿಡೆನ್ಸಿ ರಸ್ತೆ ಮುನ್ನ ಎಂ.ಜಿ.ರಸ್ತೆಗೆ ರೆಸಿಡೆನ್ಸಿ ರಸ್ತೆ ಕ್ರಾಸ್ (ಶಂಕರ್ ನಾಗ್ ಚಿತ್ರಮಂದಿರ) ಮಾರ್ಗವಾಗಿ
ಬರಬಹುದಾಗಿದೆ. ಇನ್ನೂ ಸಾರ್ವಜನಿಕರು ಸಹ ಈ ಎಲ್ಲಾ ನಿಯಮಗಳನ್ನು ಪಾಲಿಸಿ ಪೊಲೀಸ್ ಇಲಾಖೆ ಜೊತೆ ಸಹಕರಿಸಬೇಕು ಎಂದು ಪೊಲೀಸರು ಮನವಿ‌ ಮಾಡಲಾಗಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.