ನವದೆಹಲಿ: ಬೆಂಗಳೂರಿಗರ ಬಹು ದಿನಗಳ ಕನಸಾಗಿದ್ದ ಸರ್ಬಬನ್ ರೈಲ್ವೆ ಯೋಜನೆಗೆ ಒಪ್ಪಿಗೆ ಕಡೆಗೂ ಒಪ್ಪಿಗೆ ಸಿಕ್ಕಿದೆ.


COMMERCIAL BREAK
SCROLL TO CONTINUE READING

ಸೋಮವಾರ ದೆಹಲಿಯಲ್ಲಿ ರೈಲ್ವೆ ಮಂಡಳಿ ಅಧ್ಯಕ್ಷ ವಿನೋದ್ ಕುಮಾರ್ ಯಾದವ್ ಅಧ್ಯಕ್ಷತೆಯಲ್ಲಿ ನಡೆದ ರೈಲ್ವೆ ಬೋರ್ಡ್ ಎಕ್ಸ್ ಟೆಂಡೆಡ್ ಸಭೆಯಲ್ಲಿ ಬೆಂಗಳೂರಿನ ಸಬರ್ಬನ್ ರೈಲ್ವೆ ಯೋಜನೆಗೆ ಒಪ್ಪಿಗೆ ನೀಡಲಾಯಿತು.


ರಾಜ್ಯ ಸರ್ಕಾರ ಇತ್ತೀಚೆಗೆ ಸಲ್ಲಿಸಿದ್ದ ಪರಿಷ್ಕೃತ ವಿಸ್ತೃತ ಯೋಜನಾ ವರದಿಗೆ ರೈಲ್ವೆ ಮಂಡಳಿ ಒಪ್ಪಿಗೆ ನೀಡಿದ್ದು ಮಂಗಳವಾರ ಬೆಂಗಳೂರಿನಲ್ಲಿ ರಾಜ್ಯ ಸರ್ಕಾರದೊಂದಿಗೆ ಮತ್ತೊಂದು ಸಭೆ ನಡೆಸಲಿದೆ.‌ ಸಭೆಯಲ್ಲಿ ಸರ್ಬಬನ್ ರೈಲ್ವೆ ಯೋಜನೆಗೆ ರಾಜ್ಯ ಸರ್ಕಾರ ಜಮೀನು ಮತ್ತು ಹಣ ನೀಡುವ ಬಗ್ಗೆ ಚರ್ಚೆ ಮಾಡಲಾಗುತ್ತದೆ.


ಕಳೆದ ವಾರ ಬೆಂಗಳೂರು ಸೆಂಟ್ರಲ್ ಸಂಸದ ಪಿ.ಸಿ. ಮೋಹನ್ ದೆಹಲಿಗೆ ಆಗಮಿಸಿ ರೈಲ್ವೆ ಸಚಿವ ಪಿಯೂಷ್ ಗೋಯಲ್, ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ್ ಅಂಗಡಿ, ರೈಲ್ವೆ ಮಂಡಳಿ ಅಧ್ಯಕ್ಷ ವಿನೋದ್ ಕುಮಾರ್ ಯಾದವ್ ಅವರನ್ನು ಭೇಟಿ ಮಾಡಿ ಶೀಘ್ರವೇ ಬೆಂಗಳೂರು ಸಬರ್ಬನ್ ರೈಲ್ವೆ ಯೋಜನೆಗೆ ಅನುಮತಿ ನೀಡುವಂತೆ ಒತ್ತಡ ಹೇರಿದ್ದರು. ಸಂಸದ ಪಿ.ಸಿ. ಮೋಹನ್ ಒತ್ತಡದ ಹಿನ್ನೆಲೆಯಲ್ಲಿ ಸೋಮವಾರ ದೆಹಲಿಯಲ್ಲಿ ರೈಲ್ವೆ ಬೋರ್ಡ್ ಎಕ್ಸ್ ಟೆಂಡೆಂಟ್ ಸಭೆ ಮತ್ತು ಮಂಗಳವಾರ ಬೆಂಗಳೂರಿನಲ್ಲಿ ರೈಲ್ವೆ ಬೋರ್ಡ್ ಹಾಗೂ ರಾಜ್ಯ ಸರ್ಕಾರದ ಸಭೆಗಳನ್ನು ಏರ್ಪಾಟು ಮಾಡಲಾಗಿತ್ತು. ಈಗ ದೆಹಲಿಯಲ್ಲಿ ನಡೆದ ರೈಲ್ವೆ ಬೋರ್ಡ್ ಎಕ್ಸ್ ಟೆಂಡೆಂಟ್ ಸಭೆಯಲ್ಲಿ ಆರಂಭಿಕ ಒಪ್ಪಿಗೆ ನೀಡಲಾಗಿದೆ.