ಹೆಲ್ಮೆಟ್ ಹಾಕದೇ ಬೈಕ್ ಬಳಸಿ ರೀಲ್ಸ್: ಟಿಕ್‍ಟಾಕ್ ಸ್ಟಾರ್‍ಗೆ ಬಿತ್ತು ಭಾರಿ ದಂಡ..!
ನಿಯಮ ಮೀರಿದರೆ ಕ್ರಮ ಫಿಕ್ಸ್ ಎಂದು ಟ್ರಾಫಿಕ್ ಕಮಿಷನರ್ ಡಾ.ಬಿ.ಆರ್.ರವಿಕಾಂತೇಗೌಡರ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು: ಇನ್ನುಮುಂದೆ ರೀಲ್ಸ್‍ನಲ್ಲಿ ಬೈಕ್ ವೀಲಿಂಗ್ ಮಾಡುವವರು ಎಚ್ಚರವಾಗಿರಬೇಕು. ಇಲ್ಲದಿದ್ರೆ ನೀವೂ ಸಹ ದೊಡ್ಡ ಮೊತ್ತದ ದಂಡ ತೆರಬೇಕಾಗುತ್ತದೆ. ಹೆಲ್ಮೆಟ್ ಹಾಕದೇ ಬೈಕ್ ಬಳಸಿ ರೀಲ್ಸ್ ಶೋಕಿ ಮಾಡುವವರಿಗೆ ಬೆಂಗಳೂರಿನ ಖಾಕಿಪಡೆ ಬಿಸಿಮುಟ್ಟಿಸಿದೆ.
ಇದನ್ನೂ ಓದಿ: ಅನುದಾನ ಸಿಕ್ಕರೂ ಹೊಸ ಫ್ಲೈ ಓವರ್ ನಿರ್ಮಾಣಕ್ಕೆ ಪಾಲಿಕೆ ಪರದಾಟ ..!
ಹೌದು, ಹೆಲ್ಮೆಟ್ ಹಾಕದೇ ಬೈಕ್ ಬಳಸಿ ರೀಲ್ಸ್ ಮಾಡಿದ್ರೆ ನಿಮಗೆ ದೊಡ್ಡ ಮೊತ್ತದ ಫೈನ್ ಬೀಳುತ್ತದೆ. ಹೆಲ್ಮೆಟ್ ಬಳಸದೆ ಬೈಕ್ ಓಡಿಸಿ ರೀಲ್ಸ್ ಮಾಡಿದ ಟಿಕ್‍ಟಾಕ್ ಸ್ಟಾರ್‍ಗೆ ಪೊಲೀಸರು ಬರೋಬ್ಬರಿ 17,500 ರೂ. ದಂಡ ಹಾಕಿದ್ದಾರೆ.
ಇದನ್ನೂ ಓದಿ: ಒಮ್ಮೆ ದಕ್ಷಿಣ, ಮತ್ತೊಮ್ಮೆ ಉತ್ತರ! ಇದು ಸಿದ್ದು ಟೂರಿಂಗ್ ಟಾಕೀಸ್: ಬಿಜೆಪಿ
ಸಂಚಾರಿ ಪೋಲೀಸರ ಸೋಶಿಯಲ್ ಮೀಡಿಯಾ ಸೆಲ್ ಮಾನಿಟರಿಂಗ್ ಮಾಡುತ್ತಿರುತ್ತದೆ. ಕಳೆದ ವರ್ಷ ಸೋಶಿಯಲ್ ಮೀಡಿಯಾದಲ್ಲಿ ನಿಯಮ ಮೀರಿ ರೀಲ್ಸ್ ಮಾಡಿದವರ ವಿರುದ್ಧ 44 ಪ್ರಕರಣಗಳನ್ನು ದಾಖಲಿಸಲಾಗಿದೆ. ಕಳೆದ ವಾರ 40 ವೀಲಿಂಗ್ ಕೇಸ್ ದಾಖಲಿಸಲಾಗಿದೆ. ನಿಯಮ ಮೀರಿದರೆ ಕ್ರಮ ಫಿಕ್ಸ್ ಎಂದು ಟ್ರಾಫಿಕ್ ಕಮಿಷನರ್ ಡಾ.ಬಿ.ಆರ್.ರವಿಕಾಂತೇಗೌಡರ ಎಚ್ಚರಿಕೆ ನೀಡಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ