ಬೆಂಗಳೂರು : ಬೆಂಗಳೂರಿನಲ್ಲಿ ಹೊಸ ಫ್ಲೈ ಓವರ್ ನಿರ್ಮಿಸಲು ಬಿಬಿಎಂಪಿ ಮುಂದಾಗಿದೆ. ನಾಲ್ಕು ಹೊಸ ಮೇಲ್ಸೇತುವೆ ನಿರ್ಮಾಣಕ್ಕೆ ಸರ್ಕಾರದಿಂದ ಭರ್ಜರಿ ಅನುದಾನ ಕೂಡಾ ಸಿಕ್ಕಿದೆ. ಆದರೂ ಪಾಲಿಕೆ ಪಾಲಿಗೆ ಈ ಫ್ಲೈ ಓವರ್ ನಿರ್ಮಾಣ ಕಾರ್ಯ ಕಬ್ಬಿಣದ ಕಡಲೆಯಾಗಿ ಮಾರ್ಪಟ್ಟಿದೆ.
ಬೆಂಗಳೂರು ನಗರದ ನಾಲ್ಕು ಜಂಕ್ಷನ್ ಗಳ ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಬಿಬಿಎಂಪಿ ಹರಸಾಹಸ ಪಡುತ್ತಿದೆ. ಇದಕ್ಕಾಗಿ ನಾಲ್ಕು ಹೊಸ ಫ್ಲೈ ಓವರ್ ನಿರ್ಮಾಣಕ್ಕೆ ಬಿಬಿಎಂಪಿ ಮುಂದಾಗಿದೆ. ಆದರೆ ನಾಲ್ಕು ಫ್ಲೈ ಓವರ್ ಗಳ ಪೈಕಿ ಎರಡು ಫ್ಲೈ ಓವರ್ ಗಳ ನಿರ್ಮಾಣಕ್ಕೆ ನಮ್ಮ ಮೆಟ್ರೋ ಅಡ್ಡಿಯಾಗಿದೆ ಎನ್ನಲಾಗಿದೆ.
ಇದನ್ನೂ ಓದಿ : ರಾಜಸ್ಥಾನದಲ್ಲಿ ಐಸಿಸ್ ಮಾದರಿ ಹತ್ಯೆ: ಉಗ್ರರನ್ನು ಗಲ್ಲಿಗೇರಿಸುವಂತೆ ಬಿಜೆಪಿ ಆಗ್ರಹ
ನಮ್ಮ ಮೆಟ್ರೋದ ಮೂರನೇ ಹಂತದ ಮಾರ್ಗದ ಪಿಲ್ಲರ್ ಬರುವ ಜಾಗದಲ್ಲೇ ಫ್ಲೈ ಓವರ್ ನಿರ್ಮಾಣಕ್ಕೆ ಸ್ಕೆಚ್ ತಯಾರಿಸಲಾಗಿದೆ. ಇವೆರಡೂ 1 .2 ಕಿ.ಮೀ ಉದ್ದದ ಫ್ಲೈ ಓವರ್ ಆಗಿದ್ದು, ನಮ್ಮ ಮೆಟ್ರೋ 3ನೇ ಹಂತದ ಮಾರ್ಗ ಕೂಡಾ ಇದೇ ಜಾಗದಲ್ಲಿ ಹಾದುಹೋಗಲಿದೆ. ಸಾರಕ್ಕಿ ಜಂಕ್ಷನ್ ಹಾಗೂ ಕಾಮಾಕ್ಯ ಜಂಕ್ಷನ್ ಮೇಲ್ಸೇತುವೆ ನಿರ್ಮಾಣಕ್ಕೆ ನಮ್ಮ ಮೆಟ್ರೋ ಹೊಸ ಮಾರ್ಗ ತೊಡಕಾಗಲಿದೆ ಎಂದು ಹೇಳಲಾಗುತ್ತಿದೆ.
ಜೆ.ಪಿ ನಗರ 4ನೇ ಹಂತದಿಂದ ಹೆಬ್ಬಾಳ ಮಾರ್ಗದ ಮೂರನೇ ಹಂತದ ಕಾಮಗಾರಿಗೆ BMRCL ಕೈ ಹಾಕಿದೆ. ಈಗ ಇದೇ ಮಾರ್ಗದ ಎರಡು ಪ್ರಮುಖ ಜಂಕ್ಷನ್ ಗಳಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಪಾಲಿಕೆ ಕೂಡಾ ಮುಂದಾಗಿದೆ. ಹೀಗಿರುವಾಗ ಎರಡೂ ಕಾಮಗಾರಿಗಳು ಒಂದೊಕ್ಕೊಂದು ಹೊಂದಾಣಿಕೆಯಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಫ್ಲೈ ಓವರ್ ನಿರ್ಮಾಣ ಸಾಧ್ಯವೇ ಎನ್ನುವ ಪ್ರಶ್ನೆ ಎದ್ದಿದೆ.
ಇದನ್ನೂ ಓದಿ : ಬಿಜೆಪಿ ಎಂದರೆ ಬೆಲೆ ಏರಿಕೆ, ಬೆಲೆ ಏರಿಕೆ ಎಂದರೆ ಬಿಜೆಪಿ: ಎಚ್‌ಡಿಕೆ ಆಕ್ರೊಶ
ಇನ್ನು ಈ ಬಗ್ಗೆ ಚರ್ಚಿಸುವ ಸಲುವಾಗಿ ಸಭೆ ಕೂಡಾ ನಡೆಸಲಾಗಿದೆ. ಇಂಟಿಗ್ರೇಟೆಡ್ ಫ್ಲೈಓವರ್ ಮಾಡಲು ಇರುವ ಸಾಧ್ಯಾಸಾದ್ಯತೆಗಳ ಬಗ್ಗೆ ಪ್ಲ್ಯಾನ್ ರೂಪಿಸಲು ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಆದರೂ ಯಾವುದೇ ರೀತಿಯ ತಾರ್ಕಿಕ ಅಂತ್ಯ ಸಭೆಯಲ್ಲಿ ಕಂಡು ಬಂದಿಲ್ಲ. ಹೀಗಾಗಿ ಸರ್ಕಾರದಿಂದ ಅನುದಾನ ಸಿಕ್ಕಿದರೂ ಹೊಸ ಫ್ಲೈ ಓವರ್ ನಿರ್ಮಾಣ ಮಾಡಲು ಮಾತ್ರ ಪಾಲಿಕೆ
ಪರದಾಡುವಂತಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ