ಹುಬ್ಬಳ್ಳಿ : ಚುನಾವಣಾ ಯುದ್ದ ಆರಂಭವಾಗಿದ್ದು, ಯುದ್ದ ಭೂಮಿಯಲ್ಲಿ ನಮ್ಮ ಅಕ್ಕಪಕ್ಕ ಯಾರಿದ್ದಾರೆ ಎಂದು ನೋಡದೇ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವುದೊಂದೆ ನಮ್ಮ ಗುರಿಯಾಗಿದ್ದು ಅದಕ್ಕಾಗಿ ಪ್ರಹ್ಲಾದ್ ಜೋಶಿಯವರನ್ನು ಗೆಲ್ಲಿಸಬೇಕು ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ನಗರದಲ್ಲಿ ಇಂದು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಾವು ಯದ್ದಭೂಮಿಯಲ್ಲಿದ್ದೇವೆ. ಯುದ್ದ ಪ್ರಾರಂಭವಾಗಿದೆ. ಯದ್ಧಭೂಮಿಯಲ್ಲಿ ನಮಗೆ ಗುರಿ ಕಾಣಬೇಕು. ಅಕ್ಕ ಪಕ್ಕ ಇರುವವರು ಯಾರು ಅಂತಾ ನೋಡಬಾರದು. ನಮ್ಮ ಗುರಿ ಮೋದಿ‌ ಮತ್ತೆ ಪ್ರಧಾನಿಯಾಗಬೇಕು. ಹೀಗಾಗಿ ಧಾರವಾಡ ಕ್ಷೇತ್ರದಿಂದ ಪ್ರಲ್ಹಾದ್ ಜೋಶಿ ಗೆಲ್ಲಬೇಕು ಎಂದು ಹೇಳಿದರು. 


ಇದನ್ನೂ ಓದಿ:ಮೇಕೆದಾಟು ವಿಚಾರದಲ್ಲಿ ಕಾಂಗ್ರೆಸ್ ದ್ವಂದ್ವ ನಿಲುವು :ಬಸವರಾಜ ಬೊಮ್ಮಾಯಿ


ನಾನು ಲೋಕಸಭೆಗೆ ಯಾಕೆ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಹಲವು ಬಾರಿ ಹೇಳಿದ್ದೇನೆ. ಪ್ರತಿಯೊಬ್ಬರಿಗೂ ಸೂರು ಸಿಗಬೇಕೆಂದರೆ ಮೋದಿ ಪ್ರಧಾನಿ ಆಗಬೇಕು. ಜೋಶಿ ಅವರು ಅತ್ಯಂತ ದಕ್ಷತೆಯಿಂದ ಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ನಮಗೆಲ್ಲ ಜೋಶಿ ಅವರು ಹೆಸರು ತಂದಿದ್ದಾರೆ. ಯಾವ ಸಂಸದರೂ ಮಾಡದ ಕೆಲಸ ಜೋಶಿ ಮಾಡಿದ್ದಾರೆ ಎಂದು ಪ್ರಲ್ಹಾದ್ ಜೋಶಿಯನ್ನು ಮಾಜಿ ಸಿಎಂ ಬೊಮ್ಮಾಯಿ ಹೊಗಳಿದರು.


ಶಿಗ್ಗಾವಿ ಕ್ಷೇತ್ರದ ಕಾರ್ಯಕರ್ತರಿಗೆ ಇನ್ಮೇಲೆ ನಿಮಗೆ ಇಬ್ಬರು ಎಂಪಿ ಗಳು ಎಂದ ಬಸವರಾಜ್ ಬೊಮ್ಮಾಯಿ ಪರೋಕ್ಷವಾಗಿ ತಾವು ಸಂಸದರಾಗುವುದು ಖಚಿತ ಎಂದು ಹೇಳಿದರು. ನಾನು ನಿಮ್ಮನ್ನು ಬಿಟ್ಟು ಹೋಗುವುದಿಲ್ಲ. ಶಿಗ್ಗಾಂವಿಯನ್ನು ನಾನು ಬಿಡುವುದಿಲ್ಲ ಎಂದರು. 


ಇದನ್ನೂ ಓದಿ:ಸೋಲುವ ಭೀತಿಯಿಂದ ಕೇಂದ್ರ ಸರ್ಕಾರ ವಿರೋಧ ಪಕ್ಷಗಳ ವಿರುದ್ಧ ಷಡ್ಯಂತ್ರ ನಡೆಸುತ್ತಿದೆ: ಡಿಸಿಎಂ ಡಿ.ಕೆ ಶಿವಕುಮಾರ್


ಈ ಚುನಾವಣೆಯಲ್ಲಿ ಕಳೆದ ಬಾರಿಗಿಂದ ನಮಗೆ ಪ್ರತಿ ಗ್ರಾಮದಲ್ಲಿ 100 ಮತಗಳು ಹೆಚ್ಚಾಗಬೇಕು. ವಿಧಾನಸಭೆ ಚುನಾವಣೆಗೂ ಲೋಕಸಭೆ ಚುನಾವಣೆಗೂ ಬಹಳ ವ್ಯತ್ಯಾಸ ಇದೆ. ನೀವೆ ಅಭ್ಯರ್ಥಿ ಗಳಾಗಿ ಕೆಲಸ ಮಾಡಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.


ನೀವು ಶಿಗ್ಗಾಂವಿಯಿಂದ ಜೋಶಿ ಅವರಿಗೆ ಲೀಡ್ ಕೊಟ್ಟರೆ ನನಗೆ ಗೌರವ ಹೆಚ್ಚಾಗುತ್ತದೆ. ಜೋಶಿ ಅವರು ಐದು ಲಕ್ಷಗಳ ಮತರದಿಂದ ಗೆಲ್ಲುತ್ತಾರೆ ಎಂದು ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.