ಬೆಂಗಳೂರು- ಬಿಬಿಎಂಪಿಯ ದಾಸಪ್ಪ ಹೆರಿಗೆ ಆಸ್ಪತ್ರೆಯನ್ನು 40 ಲಕ್ಷ ರೂ. ವೆಚ್ಚದಲ್ಲಿ ನವೀಕರಣ ಕಾರ್ಯ ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿ ಬಳಿಕ 24 ಗಂಟೆಯೂ ಆಸ್ಪತ್ರೆ ತೆರೆದಿರಲಿದೆ. ಕಾಮಗಾರಿ ಮುಗಿದ ಬಳಿಕ  ಆಸ್ಪತ್ರೆಯಲ್ಲಿ 24 ಹಾಸಿಗೆ ಸಾಮರ್ಥ್ಯದ ಜೊತೆಗೆ ಪಾಲಿ ಕ್ಲಿನಿಕ್ ವ್ಯವಸ್ಥೆಯಿದೆ. ನುರಿತ ತಜ್ಞ ವೈದ್ಯರಿಂದ ಎಲ್ಲಾ ರೀತಿಯ ಚಿಕಿತ್ಸೆಗಳನ್ನು ಪರಿಶೀಲಿಸಲಾಗುವುದು. ಒಂದು ತಿಂಗಳಲ್ಲಿ ಬಾಕಿ ಕಾಮಗಾರಿಯನ್ನು ಪೂರ್ಣಗೊಳಿಸಿ ನಾಗರಿಕರ ಸೇವೆಗೆ ಒದಗಿಸಲು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ದಕ್ಷಿಣ ವಲಯದ ಪರಿಶೀಲನೆ ವೇಳೆ ಸೂಚನೆ ನೀಡಿದರು.


COMMERCIAL BREAK
SCROLL TO CONTINUE READING

ಆಸ್ಪತ್ರೆಯ ಆವರಣದಲ್ಲಿ ಕಟ್ಟಡದ ಭಗ್ನಾವಶೇಷಗಳಿರುವುದನ್ನು ನೋಡಿ ಕೂಡಲೆ ತೆರವುಗೊಳಿಸಲು ಸೂಚನೆ ನೀಡಿದ ಅವರು, ಆಸ್ಪತ್ರೆ ಆವರಣದಲ್ಲಿರುವ ಇತರೆ ಕಛೇರಿಗಳನ್ನು ಪರಿಶೀಲನೆ ನಡೆಸಿದರು. ಬಳಿಕ ದಾಸಪ್ಪ ಆಸ್ಪತ್ರೆಯ ಮುಂಭಾಗದ ಪಾದಚಾರಿ ಮಾರ್ಗದಲ್ಲಿ ಡಕ್ಟ್ ಅಳವಡಿಕೆಗಾಗಿ ನಡೆಯುತ್ತಿರುವ ಕಾಮಗಾರಿಯನ್ನು ಪರಿಶೀಲಿಸಿ,  ಕಾಮಗಾರಿಯನ್ನು ಪೂರ್ಣಗೊಳಿಸಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ತಿಳಿಸಿದರು. ಅದಲ್ಲದೇ ಅದೇ ಸ್ಥಳದಲ್ಲಿ ಬಸ್ ತಂಗುದಾಣದ ಬಳಿ ಮಳೆ ನೀರು ನಿಂತಿರುವುದನ್ನು ಕಂಡು ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗದುಕೊಂಡು ಇನ್ನು ಮುಂದೆ ಸ್ಥಳದಲ್ಲಿ ನೀರು ನಿಲ್ಲದಂತೆ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು. 


ಇದನ್ನೂ ಓದಿ- ರಾಜ್ಯದಲ್ಲಿ ಬಿಜೆಪಿ ಸರ್ಕಾರ ಜೀವಂತವಾಗಿದೆಯೇ?: ಸಿದ್ದರಾಮಯ್ಯ ಟೀಕಾಪ್ರಹಾರ


ಇನ್ನು ವಿಜಯನಗರ ವಾರ್ಡ್ ಮನುವನದ ಬಳಿ ಮಳೆಯಾದರೆ ರಾಜಕಾಲುವೆಯಲ್ಲಿ ನೀರು ತುಂಬಿ ಹರಿಯುತ್ತದೆ. ಈ ಸಂಬಂಧ ವೃಷಭಾವತಿ ವ್ಯಾಲಿಯ ಬಿ-116 ರಾಜಕಾಲುವೆಯ ಕಾಮಗಾರಿ ಪ್ರಗತಿಯಲ್ಲಿದ್ದು, ರಾಜಕಾಲುವೆ ಸೇತುವೆಯ ಕೆಳಗಿರುವ ಪೈಪ್ ಅನ್ನು ಬದಲಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕು ಎಂದರು.


ಇದನ್ನೂ ಓದಿ- Gadag: ನೀರು ಕುಡಿಯಲು ಹೋಗಿ ಮೂವರು ಬಾಲಕಿಯರು ನೀರುಪಾಲು


ಗಣೇಶ ಮಂದಿರ ವಾರ್ಡ್ ಬಿಬಿಎಂಪಿಯ ಅನುದಾನ 12 ಕೊಟಿ ರೂ. ಹಾಗೂ ನಗರೋತ್ಥಾನ ಅನುದಾನ 12 ಕೋಟಿ ರೂ. ಕೋಟಿ ರೂ. ವೆಚ್ಚದಲ್ಲಿ 1 ಲಕ್ಷ 20 ಸಾವಿರ ಚ.ಅಡಿಯಲ್ಲಿ ತಳಮಹಡಿ, ಜಿ + ಮೂರು ಅಂತಸ್ತಿನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದ್ದು, ಈ ಆಸ್ಪತ್ರೆಯಲ್ಲಿ 100 ಹಾಸಿಗೆಗಳ ಸಾಮರ್ಥ್ಯವಿದ್ದು, ಡಾಯಾಲಿಸಿಸ್ ಸೆಂಟರ್, ಡೆಂಟಲ್ ಕ್ಲೀನಿಕ್ ಸೇರಿದಂತೆ ಇನ್ನಿತರೆ ಸೌಲಭ್ಯಗಳು ಲಭ್ಯ ಇರಲಿವೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.