ಸಿನಿಮಾ ಪ್ರಿಯರಿಗೆ ಸದ್ಯದಲ್ಲಿಯೇ ಗುಡ್ ನ್ಯೂಸ್: ಥಿಯೇಟರ್ ಗಳ ಮೇಲೆ ಹೇರಿದ್ದ ನಿರ್ಬಂಧ ತೆರವು?!
ಸಿನಿ ಅಭಿಮಾನಿಗಳಿಗೆ ಶೀಘ್ರವೇ ಗುಡ್ ನ್ಯೂಸ್ ಸಿಗಲಿದ್ದು, ಚಿತ್ರಮಂದಿರ, ಮಲ್ಟಿಪ್ಲೆಕ್ಸ್ ಸಂಪೂರ್ಣ ಭರ್ತಿಗೆ ಸರ್ಕಾರದಿಂದ ಅನುಮತಿ ಸಿಗುವ ನಿರೀಕ್ಷೆ ಇದೆ.
ಬೆಂಗಳೂರು: ಸಿನಿಮಾ ಪ್ರಿಯರಿಗೆ ಸದ್ಯದಲ್ಲಿಯೇ ಗುಡ್ ನ್ಯೂಸ್ ಸಿಗಲಿದೆ. ಯಾವಾಗ ಚಿತ್ರಮಂದಿರಗಳು ಸಂಪೂರ್ಣವಾಗಿ ಓಪನ್(Theaters Reopening) ಆಗುತ್ತವೆ ಅಂತಾ ಕಾಯುತ್ತಿದ್ದವರಿಗೆ ಸಿಹಿಸುದ್ದಿ ಸಿಗುವ ನಿರೀಕ್ಷೆ ಇದೆ. ರಾಜ್ಯದಲ್ಲಿ ಚಿತ್ರಮಂದಿರಗಳಿಗೆ ಬಿಗ್ ರಿಲೀಫ್ ನೀಡಲು ಸರ್ಕಾರ ಪ್ಲಾನ್ ಮಾಡಿದೆ. ಥಿಯೇಟರ್ ಗಳ ಮೇಲೆ ಹೇರಿದ್ದ ನಿರ್ಬಂಧಗಳನ್ನು ತೆರವು ಮಾಡುವ ನಿಟ್ಟಿನಲ್ಲಿ ಮಾತುಕತೆ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಶೀಘ್ರದಲ್ಲಿಯೇ ಸರ್ಕಾರದಿಂದ ಈ ಬಗ್ಗೆ ಅಧಿಕೃತ ಆದೇಶ ಬರುವ ನಿರೀಕ್ಷೆ ಇದೆ.
ಕೊರೊನಾ ವೈರಸ್(Coronavirus) ಸಾಂಕ್ರಾಮಿಕದ ಪರಿಣಾಮ ಚಿತ್ರಮಂದಿರಗಳಿಗೆ ನಿರ್ಬಂಧ ವಿಧಿಸಲಾಗಿತ್ತು. ಥಿಯೇಟರ್ ನಲ್ಲಿ ಸಿನಿಮಾ ವೀಕ್ಷಿಸಲು ಶೇ.50 ಜನರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಇದೀಗ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಇಳಿಕೆಯಾಗಿರುವ ಹಿನ್ನೆಲೆ ಚಿತ್ರಮಂದಿರಗಳಿಗೆ ವಿಧಿಸಿದ್ದ 50-50 ರೂಲ್ಸ್ ರದ್ದು ಮಾಡಲು ಮಾಡಲು ಯೋಚಿಸಲಾಗಿದೆ. ಈ ನಿರ್ಬಂಧವನ್ನು ತೆರವು ಮಾಡಲು ಬಿಬಿಎಂಪಿ ಒಪ್ಪಿಕೊಂಡಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Salary Hike: ಖಾಸಗಿ ನೌಕರ ವರ್ಗದವರಿಗೊಂದು ಸಂತಸದ ಸುದ್ದಿ, ವೇತನದಲ್ಲಿ ಬಂಪರ್ ಹೆಚ್ಚಳ ಸಾಧ್ಯತೆ
ಸರ್ಕಾರ ಥಿಯೇಟರ್(Theaters) ಮತ್ತು ಮಲ್ಟಿಪ್ಲೆಕ್ಸ್ ಸಂಪೂರ್ಣ ಭರ್ತಿಗೆ ಅನುಮತಿ ನೀಡುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ. ಶೀಘ್ರವೇ ಸರ್ಕಾರ ಮತ್ತು ತಜ್ಞರ ಜೊತೆ ಬಿಬಿಎಂಪಿ(BBMP) ಚರ್ಚಿಸಿ ಈ ಬಗ್ಗೆ ಆದೇಶ ಹೊರಡಿಸುವ ಸಾಧ್ಯತೆ ಇದೆ. ಚಿತ್ರಮಂದಿರಗಳ ಜೊತೆಗೆ ಪಬ್ ಗಳಿಗೂ ಅವಕಾಶ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ. ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಈ ಬಗ್ಗೆ ಹೇಳಿಕೆ ನೀಡಿದ್ದಾರೆ.
ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಇರುವ ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್ ಗಳಲ್ಲಿ ಸಂಪೂರ್ಣ ಆಸನ ಭರ್ತಿಗೆ ರಾಜ್ಯ ಸರ್ಕಾರದಿಂದ ಅನುಮತಿ ಸಿಗುವ ನಿರೀಕ್ಷೆ ಇದೆ. ಕೋವಿಡ್(COVID-19) ಸ್ಥಿತಿಗತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ನಿರೀಕ್ಷೆ ಇದೆ. ಕೊರೊನಾ ವೈರಸ್ ಹಾವಳಿಯಿಂದ ಕರ್ನಾಟಕ ಮಾತ್ರವಲ್ಲದೆ ದೇಶದೆಲ್ಲೆಡೆ ಚಿತ್ರಮಂದಿರಗಳ ಮೇಲೆ ನಿರ್ಬಂಧ ಹೇರಲಾಗಿತ್ತು. ಕೊರೊನಾ ಮೊದಲ ಮತ್ತು 2ನೇ ಅಲೆ ವೇಳೆ ಥಿಯೇಟರ್ ಗಳಿಗೆ ಹಲವು ತಿಂಗಳು ಕಾಲ ಬೀಗ ಹಾಕಲಾಗಿತ್ತು.
ಇದನ್ನೂ ಓದಿ: Gold Silver Price Today: 6 ತಿಂಗಳಲ್ಲಿಯೇ ಕನಿಷ್ಠ ಮಟ್ಟಕ್ಕೆ ಕುಸಿದ ಚಿನ್ನದ ಬೆಲೆ; ಬೆಳ್ಳಿ ದರದಲ್ಲಿಯೂ ಇಳಿಕೆ
ಇದೀಗ ಕರ್ನಾಟಕ(Karnataka) ಸೇರಿದಂತೆ ದೇಶದೆಲ್ಲೆ ಡೆ ಕೊರೊನಾ ಪ್ರಕರಣಗಳು ಇಳಿಮುಖವಾಗುತ್ತಿರುವ ಹಿನ್ನೆಲೆ ಚಿತ್ರಮಂದಿರಗಳ ಮೇಲೆ ಹೇರಿದ್ದ ನಿರ್ಬಂಧಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಸರ್ಕಾರಗಳು ಕ್ರಮ ಕೈಗೊಳ್ಳುತ್ತಿವೆ. ಹಲವು ತಿಂಗಳುಗಳ ಕಾಲ ಥಿಯೇಟರ್ ಮುಖ ನೋಡದೆ ಬೇಸರದಲ್ಲಿದ್ದ ಸಿನಿ ಪ್ರಿಯರ ಮೊಗದಲ್ಲಿ ಮಂದಹಾಸ ಮೂಡಿದಂತಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.