ಬೆಂಗಳೂರು: ವಾರ್ಡ್ ಮರುವಿಂಗಡಣೆಯಿಂದ ಬಿಬಿಎಂಪಿಗೆ ಮತ್ತೆ ಬಹುದೊಡ್ಡ ಆರ್ಥಿಕ ಹೊರೆಯುಂಟಾಗಲಿದೆ ಅಂತಾ ಹೇಳಲಾಗಿದೆ. ವಾರ್ಡ್‍ಗಳನ್ನು 198ರಿಂದ 243ಕ್ಕೆ ಹೆಚ್ಚಳ ಮಾಡಿದ್ದು ಬಿಬಿಎಂಪಿಗೆ ಮುಳುವಾಗುತ್ತಾ ಅನ್ನೋ ಪ್ರಶ್ನೆ ಮೂಡಿದೆ. 45 ವಾರ್ಡ್‍ಗಳ ಸಂಖ್ಯೆ ಹೆಚ್ಚಳದಿಂದ ಕೋಟಿ ಕೋಟಿ ರೂ. ವಾರ್ಷಿಕ ಆರ್ಥಿಕ ಹೊರೆ ಉಂಟಾಗಲಿದೆ ಎನ್ನಲಾಗುತ್ತಿದೆ.


COMMERCIAL BREAK
SCROLL TO CONTINUE READING

ಸ್ವತಃ ಬಿಬಿಎಂಪಿಯೇ ವಾರ್ಷಿಕ ಆರ್ಥಿಕ ಹೊರೆಯ ಅಸಲಿ ಚಿತ್ರಣವನ್ನು ಬಿಚ್ಚಿಟ್ಟಿದೆ. ಹೊಸ 45 ವಾರ್ಡ್‍ಗಳಿಗೆ ಎಷ್ಟು ಸಿಬ್ಬಂದಿ ಅವಶ್ಯಕತೆ ಇದೆ ಗೊತ್ತಾ..? ಯಾವ್ಯಾವ ವಿಭಾಗಕ್ಕೆ ಅಗತ್ಯವಿರೋ ಅಧಿಕಾರಿಗಳ ಸಂಖ್ಯೆ ಎಷ್ಟು? ಯಾವ ಯಾವ ವಿಭಾಗಕ್ಕೆ ವಾರ್ಷಿಕ ಉಂಟಾಗುವ ವೆಚ್ಚವೆಷ್ಟು..? ಈ ರೀತಿ ಅನೇಕ ಪ್ರಶ್ನೆಗಳು ಮೂಡಿವೆ.


ಇದನ್ನೂ ಓದಿ: Crime News: ರೈಲಿಗೆ ತಲೆ ಕೊಟ್ಟು ಪ್ರೇಮಿಗಳಿಬ್ಬರು ಸೂಸೈಡ್!


ಕೇವಲ ಸಿಬ್ಬಂದಿ ವೇತನಕ್ಕೆ ವಾರ್ಷಿಕವಾಗಿ ನೂರಾರು ಕೋಟಿ ರೂ. ಬೇಕಾಗಿದೆ. ಸಿಬ್ಬಂದಿ ವೇತನ ಬಿಟ್ಟು ಕಚೇರಿ ಮತ್ತು ಇತರೆ ವೆಚ್ಚ ಸೇರಿ ತಿಂಗಳಿಗೆ 10 ರಿಂದ 15 ಕೋಟಿ ರೂ. ಬೇಕಾಗುತ್ತದೆ ಎನ್ನಲಾಗುತ್ತಿದೆ. ಹೆಚ್ಚು ಹುದ್ದೆ ಸೃಷ್ಟಿಸಿದ್ರೆ ಅದಕ್ಕೆ ಬಿಬಿಎಂಪಿಯೇ ವೇತನ ನೀಡ್ಬೇಕು. ಮೊದಲೇ ಆರ್ಥಿಕ ಸಂಕಷ್ಟದಲ್ಲಿರೋ ಪಾಲಿಕೆಗೆ ಇದು ಸಾಧ್ಯವಾಗುತ್ತಾ? ಅನ್ನೋ ಪ್ರಶ್ನೆ ಮೂಡಿದೆ.


ಜಲಮಂಡಳಿಗೆ ಪ್ರತಿ ತಿಂಗಳು ಬಾಡಿಗೆ ನೀಡಬೇಕು

  • ಅಧಿಕಾರಿಗಳಿಗೆ ಕಾರು, ಪೆಟ್ರೋಲ್ ಗೆ ಲಕ್ಷಾಂತರ ರೂ. ವೆಚ್ಚವಾಗಲಿದೆ


  • ಇದನ್ನೂ ಓದಿ: ಕ್ಷುಲ್ಲಕ ಕಾರಣಕ್ಕೆ ಜಗಳ: ಕ್ರಿಕೆಟ್ ಆಡುತ್ತಿದ್ದ ಇಬ್ಬರು ಯುವಕರ ಬರ್ಬರ ಹತ್ಯೆ!


    https://bit.ly/3AClgDd
    Apple Link - https://apple.co/3wPoNgr
    ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.