Crime News: ರೈಲಿಗೆ ತಲೆ ಕೊಟ್ಟು ಪ್ರೇಮಿಗಳಿಬ್ಬರು ಸೂಸೈಡ್!

Lovers suicide Case: ಶಿವಕುಮಾರ್ ಮತ್ತು ಅನಿತಾ ಪ್ರೀತಿಸುತ್ತಿದ್ದರು. ಆದರೆ ಇವರ ಪ್ರೀತಿಗೆ ಕುಟುಂಬಸ್ಥರ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ರೈಲಿಗೆ ತಲೆಕೊಟ್ಟು ಇಬ್ಬರೂ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ.

Written by - Zee Kannada News Desk | Last Updated : Dec 26, 2022, 11:46 PM IST
  • ಪ್ರೀತಿಗೆ ಮನೆಯವರ ವಿರೋಧ ಹಿನ್ನೆಲೆ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣು
  • ರೈಲಿಗೆ ತಲೆ ಕೊಟ್ಟು ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ
  • ರಾಯಚೂರು-ತೆಲಂಗಾಣ ಗಡಿ ಭಾಗದ ಕೃಷ್ಣ ರೈಲ್ವೆ ನಿಲ್ದಾಣ ಬಳಿ ಘಟನೆ
Crime News: ರೈಲಿಗೆ ತಲೆ ಕೊಟ್ಟು ಪ್ರೇಮಿಗಳಿಬ್ಬರು ಸೂಸೈಡ್! title=
ಮಿಗಳಿಬ್ಬರು ಆತ್ಮಹತ್ಯೆಗೆ ಶರಣು!

ರಾಯಚೂರು: ರೈಲಿಗೆ ತಲೆ ಕೊಟ್ಟು ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಯಚೂರು-ತೆಲಂಗಾಣ ಗಡಿ ಭಾಗದ ಕೃಷ್ಣ ರೈಲ್ವೆ ನಿಲ್ದಾಣ ಬಳಿ ಈ ಘಟನೆ ನಡೆದಿದೆ.

ಆಂಧ್ರಪ್ರದೇಶ ಮೂಲದ ಪ್ರೇಮಿಗಳು ರೈಲಿಗೆ ತಲೆ ಕೊಟ್ಟು ಪ್ರಾಣಬಿಟ್ಟಿದ್ದಾರೆ. ಕರ್ನೂಲ್ ಮೂಲದ ಶಿವಕುಮಾರ್ (26) ಮತ್ತು ಅನಿತಾ (19) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು.

ಇದನ್ನೂ ಓದಿ: ಐಷಾರಾಮಿ ಕಾರು ಮಾರಿಸಿ ಕೊಡುವುದಾಗಿ ಪಡೆದು ವಂಚನೆ: ಖತರ್ನಾಕ್ ಕಿಲಾಡಿಯ ಬಂಧನ

ಶಿವಕುಮಾರ್ ಮತ್ತು ಅನಿತಾ ಪ್ರೀತಿಸುತ್ತಿದ್ದರು. ಆದರೆ ಇವರ ಪ್ರೀತಿಗೆ ಕುಟುಂಬಸ್ಥರ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ರೈಲಿಗೆ ತಲೆಕೊಟ್ಟು ಇಬ್ಬರೂ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ.

ಸ್ಥಳಕ್ಕೆ ತೆಲಂಗಾಣದ ನಾರಾಯಣಪೇಟೆ ಜಿಲ್ಲೆಯ ಮೆಹಬೂಬನಗರ ರೈಲ್ವೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಕುಟಂಬಸ್ಥರಿಂದ ಪ್ರೀತಿಗೆ ಅಡ್ಡಿ ಹಿನ್ನೆಲೆ ಪ್ರೇಮಿಗಳು ಸೂಸೈಡ್ ಮಾಡಿಕೊಂಡಿದ್ದಾರೆನ್ನಲಾಗಿದೆ.

ಇದನ್ನೂ ಓದಿ: ರಾಜ್ಯಕ್ಕೆ ಮತ್ತೆ ಸೈಕ್ಲೋನ್ ಎಫೆಕ್ಟ್- ಇನ್ನೂ ಎರಡು ಮೂರು ದಿನ ಮಳೆ ಸಾಧ್ಯತೆ

ರೈಲು ಬರುವ ಸಮಯಕ್ಕೆ ಟ್ರ್ಯಾಕ್ ‌ಮೇಲೆ ಪ್ರೇಮಿಗಳಿಬ್ಬರೂ ಮಲಗಿದ್ದರು. ಹೀಗಾಗಿ ಇಬ್ಬರ ಮೇಲೆ ಟ್ರೈನ್ ಹರಿದು ರುಂಡ-ಮುಂಡ ಪ್ರತ್ಯೇಕವಾಗಿದೆ. ಈ ಬಗ್ಗೆ ರಾಯಚೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News