ಬೆಂಗಳೂರು: ಇತ್ತೀಚಿಗೆ ನಾಯಿಯನ್ನು ಸಾಕಲು ಪರವಾನಿಗೆಯನ್ನು ಹೊಂದಿರಬೇಕು ಎನ್ನುವ ಆದೇಶವನ್ನು ಜಾರಿಗೆ ತಂದಿತ್ತು.ಆದರೆ ಈ ನಿಯಮವನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿಯನ್ನು ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ವೇಳೆ ನಾಯಿ ಸಾಕಲು ಪರವಾನಗಿ ಹೊಂದಿರಬೇಕು ಎಂಬ ನಿಯಮವನ್ನು  ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಾಪಸು ಪಡೆದಿದೆ. 


COMMERCIAL BREAK
SCROLL TO CONTINUE READING

ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಬರುವ ಎಲ್ಲ ಮನೆಗಳಲ್ಲಿ ನಾಯಿಯನ್ನು ಸಾಕಲು ಬಿಬಿಎಂಪಿಯಿಂದ 250 ರೂ.ನ ಪರವಾನಗಿ ಪಡೆಯಬೇಕು. ಅಲ್ಲದೆ ಅಪಾರ್ಟ್ ಮೆಂಟ್ ನ ನಿವಾಸಿಗಳ್ಯಾರು ಸಹಿತ ದೊಡ್ಡ ನಾಯಿ ಮತ್ತು ಒಂದಕ್ಕಿಂತ ಹೆಚ್ಚು ನಾಯಿಗಳನ್ನು ಸಾಕುವಂತಿಲ್ಲ ಎನ್ನುವ ನಿಯಮವನ್ನು ಬಿಬಿಎಂಪಿ ರೂಪಿಸಿತ್ತು. ಆದರೆ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿ ಈ ಸಂಗತಿ ಹೈಕೋರ್ಟ್ ವರೆಗೂ ತಲುಪಿತ್ತು. 


 ಇಂದು ಕೋರ್ಟ್ ನಲ್ಲಿ  ಮುಖ್ಯನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಬಳಿ ಹಾಜರಾದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್.ಪೊನ್ನಣ್ಣ ಅವರು ಈ ಅಧಿಸೂಚನೆಯನ್ನು ಮರುಪರಿಶೀಲನೆ ಮಾಡಲಾಗುವುದು ಎಂದು ನ್ಯಾಯಾಲಯಕ್ಕೆ ತಿಳಿಸಿದರು.