ಕಾರವಾರ: ವೀಕೆಂಡ್ ಬಂದ್ರೆ ಸಾಕು ನಾನಾ ಭಾಗಗಳ ಜನರು ಉತ್ತರ ಕನ್ನಡ ಜಿಲ್ಲೆಯ ಹತ್ತಾರು ಪ್ರವಾಸಿ ತಾಣಗಳಿಗೆ ಮುಗಿಬೀಳುತ್ತಾರೆ. ಅದರಲ್ಲೂ ಪಶ್ಚಿಮಘಟ್ಟ ಪ್ರದೇಶದಲ್ಲಿ ಬರುವ ದಾಂಡೇಲಿ ಹಾಗೂ ಜೋಯಿಡಾಕ್ಕೆ ಜಲ ಸಾಹಸ ಕ್ರೀಡೆಗಳನ್ನು ಆಡೋದಕ್ಕೆ ಅಂತಾನೇ ಪ್ರವಾಸಿಗರು ಆಗಮಿಸುತ್ತಾರೆ.


COMMERCIAL BREAK
SCROLL TO CONTINUE READING

ದಟ್ಟ ಅರಣ್ಯದ ನಡುವೆ ಹರಿಯುವ ಸುಂದರ ನದಿ ಪ್ರದೇಶದಲ್ಲಿ ರಾಫ್ಟಿಂಗ್, ಕಯಾಕಿಂಗ್‌ನಂತಹ ಜಲ ಸಾಹಸ ಕ್ರೀಡೆಗಳನ್ನು ಆಡಿ ಮೈ ಮರೆಯುತ್ತಾರೆ. ಹೀಗಾಗಿ ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮಘಟ್ಟದ ತಪ್ಪಲಿನಲ್ಲಿರುವ ದಾಂಡೇಲಿ, ಜೋಯಿಡಾ ವ್ಯಾಪ್ತಿಯಲ್ಲಿ ಹರಿಯುವ ಕಾಳಿ ನದಿಯಲ್ಲಿ ಇಂತಹ ಜಲ ಸಾಹಸ ಕ್ರೀಡೆಗಳನ್ನು ಆಡಿ ಎಂಜಾಯ್ ಮಾಡೋದಕ್ಕೆ ಅಂತಾನೇ ಪ್ರವಾಸಿಗರು ಇಲ್ಲಿನ ರೆಸಾರ್ಟ್‌ಗಳಿಗೆ ಮುಗಿಬೀಳುತ್ತಾರೆ.


Shocking: ಪತ್ನಿಯ ಮೇಲೆ ಸಂದೇಹ, ಪತಿನಿಷ್ಠೆ ಪರೀಕ್ಷಿಸಲು ಅಗ್ನಿ ಪರೀಕ್ಷೆ ನಡೆಸಿದ ಪತಿ ಮಹಾಶಯ


ಕಠಿಣ ಮಾರ್ಗಸೂಚಿ ಬಿಡುಗಡೆ ಮಾಡಿದ ಜಿಲ್ಲಾಡಳಿತ


ರಾಫ್ಟಿಂಗ್ ಅವಘಡ ಆದ ನಂತರ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಕಾಳಿ ನದಿ ಪ್ರದೇಶದಲ್ಲಿ ನಡೆಯುವ ಜಲಕ್ರೀಡೆ ನಡೆಸಲು ಕೆಲ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತು. ಪ್ರವಾಸಿಗರ ಸುರಕ್ಷತಾ ದೃಷ್ಟಿಯಿಂದ ಮಾರ್ಗಸೂಚಿ ಬಿಡುಗಡೆ ಮಾಡಿದ ಜಿಲ್ಲಾಡಳಿತ ರಾಫ್ಟಿಂಗ್, ಕಯಾಕಿಂಗ್‌ನಂತಹ ಜಲ ಸಾಹಸ ಕ್ರೀಡೆಗಳಲ್ಲಿ ನಿರ್ದಿಷ್ಟ ಜನರನ್ನು ಮಾತ್ರ ಹತ್ತಿಸಿಕೊಂಡು ಹೋಗುವ ಬಗ್ಗೆ, ಪ್ರತಿಯೊಬ್ಬರಿಗೂ ಲೈಪ್‌ ಜಾಕೆಟ್‌ ನೀಡುವುದರ ಬಗ್ಗೆ ಹಾಗೂ ಪರಿಣಿತಿ ಹೊಂದಿದ ಈಜುಗಾರರಿಂದ ಮಾತ್ರ ಜಲಕ್ರೀಡೆ ಆಡುವುದರ ಬಗ್ಗೆ ಮಾರ್ಗಸೂಚಿ ಹೊರಡಿಸಿದೆ. ಇದರ ಜೊತೆಗೆ ಯಾವುದೇ ಜಲಕ್ರೀಡೆ ಆಯೋಜನೆ ಮಾಡುವ ರೆಸಾರ್ಟ್‌ ಮಾಲೀಕರು ಅಥವಾ ಸಂಸ್ಥೆ ಜಿಲ್ಲಾಡಳಿತದಿಂದ ಲೈಸನ್ಸ್‌ ಪಡೆಯುವುದು ಕಡ್ಡಾಯ ಮಾಡಿದೆ.


ಜಿಲ್ಲಾಡಳಿತದ ಕ್ರಮಕ್ಕೆ ಆಯೋಜಕರ ತೀವ್ರ ವಿರೋಧ..!


ಸುರಕ್ಷತೆ ದೃಷ್ಟಿಯಿಂದ ಜಿಲ್ಲಾಡಳಿತ ಕೆಲ ಮಾರ್ಗಸೂಚಿ ಹೊರಡಿಸಿದೆ. ಆದ್ರೆ ಇದು ಪ್ರವಾಸೋದ್ಯಮವನ್ನು ಹತ್ತಿಕ್ಕುವ ಕೆಲಸ ಎಂದು ಜಲಸಾಹಸ ಕ್ರೀಡಾ ಆಯೋಜಕರು ವಿರೋಧ ಮಾಡುತ್ತಿದ್ದಾರೆ. ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಲು ನಾವು ಬದ್ಧರಾಗಿದ್ದೇವೆ. ಆದ್ರೆ ಕೆಲ ಸಂದರ್ಭಗಳಲ್ಲಿ ಸಣ್ಣಪುಟ್ಟ ತಪ್ಪುಗಳು ನಡೆಯುವುದು ಸಹಜ. ಅದಕ್ಕೆ ದೊಡ್ಡ ಪ್ರಮಾಣದ ದಂಡ ಅಥವಾ ಹೆಚ್ಚಿನ ಹಣ ವಸೂಲಿ ಮಾಡಿದ್ರೆ ಇದನ್ನೇ ನಂಬಿ ಜೀವನ ನಡೆಸುತ್ತಿರುವ ನಮಗೆ ಕಷ್ಟ ಆಗುತ್ತದೆ ಎನ್ನುತ್ತಿದ್ದಾರೆ. ಈ ಸಂಬಂಧ ಸ್ಪಷ್ಟನೆ ನೀಡಿರುವ ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಪರವಾನಗಿ ಪಡೆದು ಜಲ ಸಾಹಸ ಕ್ರೀಡೆ ನಡೆಸುತ್ತಿದ್ದವರಿಗೆ ಯಾವುದೇ ನಿರ್ಬಂಧವಿಲ್ಲ. ಪರವಾನಗಿ ಇಲ್ಲದವರು ನೋಂದಾಯಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.


ಉರ್ದು ಭಾಷೆ ಸಿದ್ದರಾಮನಹುಂಡಿಯಲ್ಲಿ ಹುಟ್ಟಿದ್ದೇ?: ಸಿದ್ದರಾಮಯ್ಯಗೆ ಬಿಜೆಪಿ ಪ್ರಶ್ನೆ


ಉತ್ತರಾಖಂಡ್‌ ಮಾದರಿಯಲ್ಲಿ ಜಲಕ್ರೀಡೆ ಆಯೋಜನೆ..!


ಸದ್ಯ ಬೇಸಿಗೆ ರಜಾ ದಿನಗಳ ಅವಧಿಯಾಗಿದ್ದು, ವಿವಿಧೆಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಪ್ರತಿನಿತ್ಯ ದಾಂಡೇಲಿ, ಜೋಯಿಡಾ ಭಾಗದ ರೆಸಾರ್ಟ್‌, ಹೋಂ ಸ್ಟೇಗಳಿಗೆ ಆಗಮಿಸುತ್ತಾರೆ. ಆದ್ರೆ ಇಲ್ಲಿ ಜಲ ಸಾಹಸ ಕ್ರೀಡೆ ನಡೆಸುತ್ತಿರುವ ಸಾಕಷ್ಟು ಮಂದಿ ಆಯೋಜಕರ ಬಳಿ ಪರವಾನಗಿಯೇ ಇಲ್ಲವಾಗಿದ್ದು, ಪ್ರವಾಸಿಗರ ಸುರಕ್ಷತಾ ಕ್ರಮಗಳನ್ನು ಸಹ ಅನುಸರಿಸುತ್ತಿಲ್ಲ. ಈ ನಿಟ್ಟಿನಲ್ಲಿ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಉತ್ತರಾಖಂಡ್‌ ಹಾಗೂ ರಾಜ್ಯದ ಕೊಡಗು ಮಾದರಿಯಲ್ಲಿ ರಾಫ್ಟಿಂಗ್, ಕಯಾಕಿಂಗ್‌ನಂತಹ ಜಲ ಸಾಹಸ ಕ್ರೀಡೆಗಳನ್ನು ಸುರಕ್ಷಿತ ರೀತಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.