ಬೆಂಗಳೂರು: ಈಗೆನಿದ್ರೂ ಫಾಸ್ಟ್ ದುನಿಯಾ ಕಣ್ರೀ.. ಬ್ಯಾಂಕ್ ಅಕೌಂಟ್ ಇಲ್ಲ  ಅಂದ್ರು ಇನ್ಸ್ಟಾಗ್ರಾಮ್ ಅಕೌಂಟ್ ಇಟ್ಕೊಂಡು ರೀಲ್ಸ್ ಮಾಡೋದ್ರಲ್ಲಿ ಎಲ್ಲರು ಬ್ಯುಸಿ ಇರ್ತಾರೆ.. ಇನ್ನು ರೀಲ್ಸ್ ಗೀಳಿಗೆ ಬೀಳೋರಲ್ಲಿ ಯುವತಿಯರಿಗಿಂತ ಆಂಟಿಯರೇ ಹೆಚ್ಚು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಭಾರತದಲ್ಲಿರುವ ವಿಶ್ವ ಪರಂಪರೆ ತಾಣಗಳಿವು..ಒಮ್ಮೆ ಬೇಟಿ ನೀಡಿ..!  


ಹೀಗೆ ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಮಾಡುವ ಸುಂದರ ಆಂಟಿಯರನ್ನ ಟಾರ್ಗೆಟ್ ಮಾಡಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಮೆಸೇಜ್ ನಲ್ಲೇ ಆಂಟಿಯರನ್ನ ಪಟಾಯಿಸ್ತಿದ್ದ ಕಿಲಾಡಿಯೊಬ್ಬ ಅಂದರ್ ಆಗಿದ್ದಾನೆ. ಹುಡುಗಿಯರ ಅಕೌಂಟ್ ಕಡೆ ತಿರುಗಿ ನೋಡದ ಈ ಭೂಪ  ಆಂಟಿ ಪ್ರೊಫೈಲ್ ಕಂಡ್ರೆ ಬಿಡ್ತಿರ್ಲಿಲ್ಲ. ಸದ್ಯ‌ ಹೆಚ್ ಎಸ್ ಆರ್ ಪೊಲೀಸರು ಹೆಂಗಸರ ಹಿಂದೆ ಬಿದ್ದಿದ್ದ ಕಾಮುಕ ಟೆಕ್ಕಿಯನ್ನು ಅರೆಸ್ಟ್ ಮಾಡಿದ್ದಾರೆ. ಅಸ್ಸಾಂ ಮೂಲದ ಫೈಸಲ್ ಎಂಬಾತನೇ ಬಂಧನಕ್ಕೊಳಗಾದ ಖದೀಮ.


ಇನ್ಸ್ಟಾಗ್ರಾಮ್ ನಲ್ಲಿ  ಸುಂದರ ಆಂಟಿಯರ ಪ್ರೊಫೈಲ್ ಹುಡುಕಿ ರಿಕ್ವೆಸ್ಟ್ ಕಳಿಸ್ತಿದ್ದ ಫೈಸಲ್, ರಿಕ್ವೆಸ್ಟ್ ಅಕ್ಸೆಪ್ಟ್ ಆಗುತ್ತಿದ್ದಂತೆ ಕಲರ್ ಕಲರ್ ಡೈಲಾಗ್ ಹೊಡೆದು ಆಂಟಿಯರಿಗೆ ಕಾಳ್ ಹಾಕ್ತಿದ್ದ. ಎಮೋಷನಲ್ ಡೈಲಾಗ್ ಹೊಡೆದು ಸಾಚ ತರ ಪೋಸ್ ಕೊಟ್ಟು, ಹೆಣ್ಣುಮಕ್ಕಳ ಫ್ರೀಡಂ, ಅಂಕಲ್ ಗಳ ವೀಕ್ನೆಸ್ ಬಗ್ಗೆ ಮಾತಾಡಿ ತನಗೆ ಹತ್ತಿರ ಮಾಡಿಕೊಳ್ಳುತ್ತಿದ್ದ.


ನಂತರ ಚಾಟಿಂಗ್ ಆ ಮೇಲೆ ಮೀಟಿಂಗ್ ಶುರು ಮಾಡಿ ದೈಹಿಕ ಸಂಪರ್ಕಕ್ಕೆ ಅಂತಾ ಖಾಸಗಿ ಜಾಗಕ್ಕೆ ಕರೆದು ಮಹಿಳೆಯರ ಜೊತೆ ಪಲ್ಲಂಗದಾಟ ಆಡುತ್ತಿದ್ದ. ಈ ವೇಳೆ ಖಾಸಗಿ ಕ್ಷಣಗಳನ್ನ ರೆಕಾರ್ಡ್ ಮಾಡಿಕೊಂಡು ನಂತರ ಲಕ್ಷ ಲಕ್ಷ ಹಣ ಕೇಳುತ್ತಿದ್ದ. ಹಣ ಕೊಡದಿದ್ರೆ ನಿನ್ನ ಗಂಡನಿಗೆ ವಿಡಿಯೋ ಕಳಿಸೋದಾಗಿ ಬೆದರಿಸಿ ಮಹಿಳೆಯೊಬ್ಬರಿಗೆ ಬ್ಲಾಕ್ ಮೇಲ್ ಮಾಡಿ ಚೆನ್ನೈಗೆ ಕರೆದಿದ್ದ.


ಇದನ್ನೂ ಓದಿ: “ಧೋನಿ ಅಲ್ಲ, ಈತನೇ ನನ್ನ ವೃತ್ತಿಜೀವನದ ಫೇವರಿಟ್ ಕ್ಯಾಪ್ಟನ್”: ವೇಗಿ ಇಶಾಂತ್ ಶರ್ಮಾ


ಈ ಬಗ್ಗೆ  ನೊಂದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು. ದೂರಿನನ್ವಯ ಕಾರ್ಯಾಚರಣೆ ನಡೆಸಿದ ಹೆಚ್ ಎಸ್ ಆರ್ ಪೊಲೀಸರು ಫೈಸಲ್ ನನ್ನು ಚೆನ್ನೈನಲ್ಲಿ ಅರೆಸ್ಟ್ ಮಾಡಿದ್ದಾರೆ. ಈತ ಇನ್ಸ್ಟಾದಲ್ಲಿ ಇದೇ ರೀತಿ ಹಲವರಿಗೆ ವಂಚಿಸಿರೋ ಶಂಕೆಯಿದ್ದು ಮೊಬೈಲ್ ವಶಕ್ಕೆ ಪಡೆದು ಪೊಲೀಸರು ಪರಿಶೀಲನೆ ನಡೆಸ್ತಿದ್ದಾರೆ‌.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ