Virat Kohli As Captain: ಭಾರತೀಯ ಕ್ರಿಕೆಟ್ ಇತಿಹಾಸ ಕಂಡ ಅತ್ಯಂತ ಯಶಸ್ವಿ ನಾಯಕರಲ್ಲಿ ವಿರಾಟ್ ಕೊಹ್ಲಿ ಕೂಡ ಒಬ್ಬರು. ಕೊಹ್ಲಿ ನಾಯಕತ್ವದಲ್ಲಿ ಭಾರತ ಟೆಸ್ಟ್ ತಂಡ ಅನೇಕ ಶ್ರೇಷ್ಠ ಸಾಧನೆಗಳನ್ನು ಮಾಡಿದೆ. ಇನ್ನು ಕೊಹ್ಲಿ ಬೌಲರ್’ಗಳನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳುವ ಸಾಮಾರ್ಥ್ಯ ಹೊಂದಿದ್ದ ನಾಯಕ. ಈ ಬಗ್ಗೆ ಭಾರತದ ವೇಗದ ಬೌಲರ್ ಇಶಾಂತ್ ಶರ್ಮಾ ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: ಬುಧ ವಕ್ರಿ : ಈ ರಾಶಿಯವರ ಬದುಕೇ ಬದಲಾಗುವುದು, ಹಣದ ಮಳೆ.. ಉದ್ಯೋಗದಲ್ಲಿ ಪ್ರಗತಿ !
ಕೊಹ್ಲಿ ಬಗ್ಗೆ ಮಾತನಾಡಿದ ಇಶಾಂತ್ ಶರ್ಮಾ, "ನಾನು ಆಡಿದ ನಾಯಕರಲ್ಲಿ ವಿರಾಟ್ ಅತ್ಯುತ್ತಮ ನಾಯಕ" ಎಂದು ಹೇಳಿದ್ದಾರೆ. ಇಶಾಂತ್ ಶರ್ಮಾ ಅವರು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ನಾಯಕತ್ವದಲ್ಲಿ ಭಾರತಕ್ಕಾಗಿ ಆಡಿದ್ದರೂ ಸಹ ವಿರಾಟ್ ಕೊಹ್ಲಿಯನ್ನು ಅತ್ಯುತ್ತಮ ನಾಯಕ ಎಂದು ತಿಳಿಸಿದ್ದಾರೆ.
ಟೆಸ್ಟ್’ನಲ್ಲಿ ನಾಯಕನಾಗಿ ಕೊಹ್ಲಿ ಅಂಕಿಅಂಶಗಳು:
ಕೊಹ್ಲಿ 2014 ರಿಂದ 2022 ರವರೆಗೆ ಭಾರತದ ಟೆಸ್ಟ್ ತಂಡವನ್ನು ಮುನ್ನಡೆಸಿದ್ದರು. ಈ ಅವಧಿಯಲ್ಲಿ ಭಾರತ 68 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಭಾರತ 40 ಪಂದ್ಯಗಳನ್ನು ಗೆದ್ದಿದೆ. ಕೇವಲ 17 ಪಂದ್ಯಗಳಲ್ಲಿ ಸೋತಿದೆ. ಇವಷ್ಟೇ ಅಲ್ಲದೆ, 68 ಪಂದ್ಯಗಳ 113 ಇನ್ನಿಂಗ್ಸ್’ಗಳಲ್ಲಿ 54.80 ಸರಾಸರಿಯಲ್ಲಿ 5864 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ 20 ಶತಕಗಳು ಮತ್ತು 18 ಅರ್ಧ ಶತಕಗಳನ್ನೂ ಸಹ ಕಲೆಹಾಕಿದ್ದಾರೆ. ಇದರಲ್ಲಿ ಅತ್ಯುತ್ತ, ಸ್ಕೋರ್ 254* ರನ್ ಆಗಿದೆ
ಇದಲ್ಲದೆ ಕೊಹ್ಲಿ 95 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ. 65 ಪಂದ್ಯದಲ್ಲಿ ಗೆಲುವು ಕಂಡರೆ, 27 ಪಂದ್ಯಗಳಲ್ಲಿ ಸೋತಿದೆ. ಆದರೆ ಕೊಹ್ಲಿ ನಾಯಕತ್ವದಲ್ಲಿ ಭಾರತ 50 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಇದರಲ್ಲಿ ತಂಡ 32 ಗೆಲುವು ಕಂಡರೆ 16ರಲ್ಲಿ ಸೋತಿದೆ.
ಇದನ್ನೂ ಓದಿ: ಪಾಕಿಸ್ತಾನಿ ಸಿನಿಮಾಗಳಲ್ಲಿ ನಟಿಸಿದ ಭಾರತದ ಖ್ಯಾತ ತಾರೆಯರು ಇವರು
ಇನ್ನು ಕೊಹ್ಲಿ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ 111 ಟೆಸ್ಟ್, 275 ODI ಮತ್ತು 115 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‌ನ 187 ಇನ್ನಿಂಗ್ಸ್’ಗಳಲ್ಲಿ 8676 ರನ್, 265 ODI ಇನ್ನಿಂಗ್ಸ್’ಗಳಲ್ಲಿ 12898 ರನ್ ಮತ್ತು T20 ಅಂತರಾಷ್ಟ್ರೀಯ 107 ಇನ್ನಿಂಗ್ಸ್’ಗಳಲ್ಲಿ 4008 ರನ್’ಗಳನ್ನು ಗಳಿಸಿದ್ದಾರೆ. ಎಲ್ಲಾ ಮೂರು ಮಾದರಿಗಳಲ್ಲಿ 76 ಶತಕ ಮತ್ತು 131 ಅರ್ಧ ಶತಕಗಳನ್ನು ಗಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ