ಬೆಂಗಳೂರು : ಈ ಬಾರಿ ಅವಧಿಗೂ ಮುನ್ನವೇ ಬೇಸಿಗೆ ಕಾಲಿಟ್ಟಿದೆ. ಮಾರ್ಚ್ ನಲ್ಲಿಯೇ ಸೂರ್ಯ ನೆತ್ತಿ ಸುಡುತ್ತಿದ್ದಾನೆ. ಬಿಸಿಲ ಝಳಕ್ಕೆ ಬೆಂಗಳೂರಿನ ಬೋರ್ ವೆಲ್ ಗಳು ಬತ್ತಿ ಹೋಗುತ್ತಿವೆ. ಬೋರ್ ನೀರನ್ನೇ  ನಂಬಿಕೊಂಡವರಿಗೆ ಈ ಬೇಸಿಗೆಯಲ್ಲಿ ಭಾರಿ ಸಂಕಷ್ಟ ಎದುರಾಗಲಿದೆ. 


COMMERCIAL BREAK
SCROLL TO CONTINUE READING

ದಿನೇ ದಿನೇ ಬಿಸಿಲು ಜಾಸ್ತಿಯಾಗುತ್ತಿದೆ. ಈ ಬಾರಿ ಬೇಸಿಗೆ ತುಸು ಬೇಗನೇ ಆರಂಭವಾಗಿದೆ. ಈ ಮಧ್ಯೆ, ಬೆಂಗಳೂರಲ್ಲಿ ಬೋರ್ ವೆಲ್ ಗಳು ಬತ್ತಿ ಹೋಗುತ್ತಿವೆ ಎನ್ನುವ ಮಾಹಿತಿ ಹೊರ ಬಿದ್ದಿದೆ. ಹಾಗೆ ನೋಡಿದರೆ ಕಳೆದ ವರ್ಷ ಅತ್ಯಧಿಕ ಪ್ರಮಾಣದಲ್ಲಿ ಮಳೆಯಾಗಿತ್ತು. ಆದರೂ ಈ ಬಾರಿ  ಬೋರ್ ವೆಲ್ ಗಳು ಬತ್ತಿ ಹೋಗುತ್ತಿವೆ ಎನ್ನಲಾಗಿದೆ. ಹೀಗಾಗಿ ಬೋರ್ ನೀರು ನಂಬಿಕೊಂಡವರಿಗೆ ಬೇಸಿಗೆಯಲ್ಲಿ ಭಾರೀ ಸಂಕಷ್ಟ ಎದುರಾಗಲಿದೆ ಎನ್ನುವ ಮಾತು ಕೇಳಿ ಬಂದಿದೆ. 


ಇದನ್ನೂ ಓದಿ : ವಿದ್ಯಾರ್ಥಿನಿಯರ ಜೊತೆ ಅಸಭ್ಯ ವರ್ತನೆ : ಕಾಮುಕ ಶಿಕ್ಷಕ ಅಮಾನತು


ನಗರದಲ್ಲಿ ಕಾಂಕ್ರಿಟೀಕರಣ ಹೆಚ್ಚಾಗುತ್ತಿದೆ. ವೈಟ್ ಟಾಪಿಂಗ್ ರಸ್ತೆ, ಬಾಕ್ಸ್ ಸ್ಯಾನಿಟರಿ ಲೈನ್  ಗಳ ಕಾರಣದಿಂದ ನೀರು ಭೂಮಿಯಲ್ಲಿ ಇಂಗುತ್ತಿಲ್ಲ ಎನ್ನಲಾಗಿದೆ. ಹೀಗಾಗಿ ಕಳೆದ ಬಾರಿ ಅತ್ಯಧಿಕ ಮಳೆಯಾಗಿದ್ದರೂ ಬೋರ್ ಗಳಲ್ಲಿ ನೀರಿನ ಅಭಾವ ಕಾಡಲಿದೆ. ಮಾರ್ಚ್ ತಿಂಗಳಲ್ಲಿಯೇ ಬೋರ್ ನೀರು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಏಪ್ರಿಲ್,ಮೇ ತಿಂಗಳ ಕತೆ ಏನು ಎನ್ನುವ ಆತಂಕ ಇದೀಗ ಕಾಡತೊಡಗಿದೆ. 


ಇನ್ನು ಬೆಂಗಳೂರಿನ ಬಹುತೇಕ ಅಪಾರ್ಟ್ಮೆಂಟ್ ಗಳು ಬೋರ್ ನೀರನ್ನೇ  ನೆಚ್ಚಿಕೊಂಡಿವೆ. ಇಂಥಾ ಅಪಾರ್ಟ್ಮೆಂಟ್ ನಿವಾಸಿಗಳಿಗೆ ನೀರಿನ ಕೊರತೆ ಎದುರಾಗಲಿದೆ. 


ಇದನ್ನೂ ಓದಿ : ಬಂಜಾರ ಪ್ರತಿಭಟನೆಗೆ ಕಾಂಗ್ರೆಸ್ ಪ್ರಚೋದನೆ: ಮುಖ್ಯಮಂತ್ರಿ


ಈ ಮಧ್ಯೆ, ಕಾವೇರಿ ನೀರಿನ ಕೊರತೆ ಇಲ್ಲ ಎನ್ನುವುದನ್ನು ಕೂಡಾ  ಜಲಮಂಡಳಿ ಸ್ಪಷ್ಟಪಡಿಸಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಸಾಕಷ್ಟು ಮಳೆಯಾಗಿದೆ. ಈ ಹಿನ್ನೆಲೆಯಲ್ಲಿ ನೀರಿನ ಸ್ಟಾಕ್ ಸಹ ಸಾಕಷ್ಟು ಪ್ರಮಾಣದಲ್ಲಿದೆ. ಹೀಗಾಗಿ ಒಂದು ಎಲ್ಲೆಯೇ ನೀರಿನ ಸಮಸ್ಯೆ ಎದುರಾದರೂ ನೀರು ಪೂರೈಕೆ ಮಾಡುತ್ತೇವೆ  ಎನ್ನುತ್ತದೆ ಜಲಮಂಡಳಿ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.