ಬೆಂಗಳೂರು: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ದ್ವಿಚಕ್ರ ವಾಹನಗಳು, ಆಟೋಗಳು, ಟ್ರ್ಯಾಕ್ಟರ್‌ಗಳು, ಮೋಟಾರು ರಹಿತ ವಾಹನಗಳು, ಮಲ್ಟಿ ಆಕ್ಸಲ್ ಹೈಡ್ರಾಲಿಕ್ ಟ್ರೇಲರ್ ವಾಹನಗಳು ಮತ್ತು ಕ್ವಾಡ್ರಿಸೈಕಲ್‌ಗಳನ್ನು ಬೆಂಗಳೂರು-ಮೈಸೂರು ಹೆದ್ದಾರಿಗಳಲ್ಲಿ ನಿಷೇಧಿಸಿ ಸುಮಾರು ಒಂದು ವರ್ಷವಾಗಿದೆ. ನಿಷೇಧಾಜ್ಞೆ ನಡುವೆಯೂ ಹೆದ್ದಾರಿಯಲ್ಲಿ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳ ಓಡಾಟ ಮುಂದುವರಿದಿದೆ.


COMMERCIAL BREAK
SCROLL TO CONTINUE READING

ಪೊಲೀಸರು ಅಥವಾ ಹೆದ್ದಾರಿ ಗಸ್ತು ವಾಹನದ ಅಧಿಕಾರಿಗಳು ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು ಹೆದ್ದಾರಿಗೆ ಪ್ರವೇಶಿಸದಂತೆ ತಡೆಯದೆ ಅಥವಾ ನಿಗಾ ವಹಿಸದೆ ಇತರರಿಗೆ ಅಪಾಯವನ್ನುಂಟು ಮಾಡುತ್ತಿದ್ದಾರೆ ಎಂದು ಇತರ ವಾಹನ ಬಳಕೆದಾರರು ಆರೋಪಿಸುತ್ತಿದ್ದಾರೆ.


ಇದನ್ನೂ ಓದಿ: ಬ್ರ್ಯಾಂಡ್ ಬೆಂಗಳೂರು ಅಲ್ಲ, ಲೂಟಿ ಬೆಂಗಳೂರು; ಕಾಂಗ್ರೆಸ್ ಸರಕಾರದ ವಿರುದ್ಧ ಜೆಡಿಎಸ್-ಬಿಜೆಪಿ ನಾಯಕರ ವಾಗ್ದಾಳಿ


ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣಿಸುವ ಹೆದ್ದಾರಿಯಲ್ಲಿ ನಿತ್ಯ ಪ್ರಯಾಣಿಸುವ ವಿಜಯ್ ಕುಮಾರ್, ಪ್ರತಿದಿನ ಈ ರಸ್ತೆಯಲ್ಲಿ ನಿಷೇಧಿತ ವಾಹನಗಳನ್ನು ನೋಡುತ್ತಿದ್ದಾರೆ ಎಂದು ಹೇಳಿದರು. ಬೆಳಗ್ಗೆ ಹೆಚ್ಚಾಗಿ ಆಟೋಗಳು ಕಾಣುತ್ತವೆ. ಈ ಆಟೋಗಳು ನೈಸ್ ರಸ್ತೆಯ ನಂತರ ಫ್ಲೈಓವರ್ ಅನ್ನು ಬಳಸುತ್ತವೆ. ಇದು ನಾಲ್ಕು ಚಕ್ರಗಳು ಮತ್ತು ಇತರ ದೊಡ್ಡ ವಾಹನಗಳಿಗೆ ಅಪಾಯವನ್ನುಂಟು ಮಾಡುತ್ತದೆ .ಏಕೆಂದರೆ ಹೆದ್ದಾರಿಯಲ್ಲಿ ನಿಧಾನವಾಗಿ ಚಲಿಸುವ ಆಟೋಗಳ ಉಪಸ್ಥಿತಿಯು ದೊಡ್ಡ ಅಪಘಾತಗಳಿಗೆ ಕಾರಣವಾಗಬಹುದು. ಎನ್‌ಎಚ್‌ಎಐ ಅಂತಹ ವಾಹನಗಳಿಗೆ ದಂಡ ವಿಧಿಸಬೇಕು. ಮುಖ್ಯ ಕ್ಯಾರೇಜ್‌ವೇಗೆ ಪ್ರವೇಶಿಸುವುದನ್ನು ತಡೆಯಲು ಮೇಲ್ವಿಚಾರಣೆ ಮಾಡಬೇಕಾಗುತ್ತದೆ ಎಂದು ಹೇಳಿದರು.


ಆಗಸ್ಟ್ 1, 2023 ರಂದು, NHAI ಹೆದ್ದಾರಿಯಲ್ಲಿ ಕೆಲವು ವಾಹನಗಳ ಚಲನೆಯನ್ನು ನಿಷೇಧಿಸುವ ಅಧಿಸೂಚನೆಯನ್ನು ಹೊರಡಿಸಿತು. ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನು ನಿಷೇಧಿಸುವ ನಿಯಮದ ಆರಂಭಿಕ ಜಾರಿ ಸಮಯದಲ್ಲಿ, ಅಂತಹ ವಾಹನಗಳ ಅಕ್ರಮ ಪ್ರವೇಶವನ್ನು ತಡೆಗಟ್ಟಲು ಮತ್ತು ದಂಡವನ್ನು ವಿಧಿಸಲು ಪೊಲೀಸ್ ಅಧಿಕಾರಿಗಳನ್ನು ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಇರಿಸಲಾಗಿತ್ತು. ಆದರೆ ಈಗ ಇಂತಹ ಮೇಲ್ವಿಚಾರಣೆ ನಡೆಯುತ್ತಿಲ್ಲ ಎಂದು ಪ್ರಯಾಣಿಕರು ತಿಳಿಸಿದ್ದಾರೆ.


ಇದನ್ನೂ ಓದಿ: ಮಾಲ್, ಗೇಮ್ ಜೋನ್, ಮನರಂಜನಾ ಕೇಂದ್ರಗಳ ಸುರಕ್ಷತಾ ಕ್ರಮಗಳ ಪರಿಶೀಲನೆಗೆ ಡಿಸಿಎಂ ಸೂಚನೆ


ಬೆಂಗಳೂರು ಮತ್ತು ಮೈಸೂರು ನಡುವೆ ನಿಯಮಿತವಾಗಿ ಪ್ರಯಾಣಿಸುವ ರೋಷನ್ ಮ್ಯಾಥ್ಯೂ, ಕಳೆದ ವರ್ಷದ ಆರಂಭಿಕ ದಿನಗಳಲ್ಲಿ ಹಲವಾರು ಎನ್‌ಎಚ್‌ಎಐ ಮತ್ತು ಪೊಲೀಸ್ ಸಿಬ್ಬಂದಿ ನಿಧಾನವಾಗಿ ಚಲಿಸುವ ವಾಹನಗಳನ್ನು ಸರ್ವಿಸ್ ರಸ್ತೆಗೆ ತಿರುಗಿಸುತ್ತಿದ್ದರು ಮತ್ತು ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸುತ್ತಿದ್ದರು. ಆದರೆ ಇತ್ತೀಚೆಗೆ ಅಧಿಕಾರಿಗಳು ಕ್ರಮಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ.


ಹೆದ್ದಾರಿ ಪ್ರಾರಂಭವಾಗುವ ಅಂಚೆಪಾಳ್ಯ ಬಳಿ ಹೆದ್ದಾರಿ ಗಸ್ತು ವಾಹನದಲ್ಲಿ ನಿಂತಿದ್ದ ಪೊಲೀಸ್ ಅಧಿಕಾರಿಯೊಬ್ಬರು, ನಾವು ನಿಧಾನವಾಗಿ ಚಲಿಸುವ ವಾಹನಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಅವು ಮುಖ್ಯ ಕ್ಯಾರೇಜ್‌ ವೇ ಗೆ ಪ್ರವೇಶಿಸದಂತೆ ನಿಗಾವಹಸುತ್ತಿದ್ದೇವೆ. ನಿಧಾನವಾಗಿ ಚಲಿಸುವ ವಾಹನಗಳು ಹೆದ್ದಾರಿಗೆ ಪ್ರವೇಶಿಸಲು ಪ್ರಯತ್ನಿಸಿದರೆ ₹ 500 ದಂಡವನ್ನು ವಿಧಿಸುತ್ತೇವೆ. ಅಂತಹ ವಾಹನಗಳು ಹೆದ್ದಾರಿಗೆ ಪ್ರವೇಶಿಸದಂತೆ ಎಚ್ಚರಿಕೆ ನೀಡುವ ಫಲಕಗಳನ್ನು ಸಹ ಅಳವಡಿಸಿದ್ದೇವೆ ಎಂದು ಹೇಳಿದ್ದಾರೆ. 


ಹೆದ್ದಾರಿಯ ಬೆಂಗಳೂರು-ನಿಡಘಟ್ಟ ಮತ್ತು ನಿಡಘಟ್ಟ-ಮೈಸೂರು ವಿಭಾಗಗಳೆರಡರಲ್ಲೂ ಆಯಕಟ್ಟಿನ ಸ್ಥಳಗಳಲ್ಲಿ AI ಚಾಲಿತ ಟ್ರಾಫಿಕ್ ಎನ್‌ಫೋರ್ಸ್‌ಮೆಂಟ್ ಕ್ಯಾಮೆರಾಗಳನ್ನು ನಿಯೋಜಿಸಲಾಗಿದೆ ಎಂದು ಎನ್‌ಎಚ್‌ಎಐ ಅಧಿಕಾರಿಗಳು ತಿಳಿಸಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.