ಬೆಂಗಳೂರು : ಸದ್ಯ ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿವೆ. ಹೀಗಾಗಿ ಜೂ.​ 14ರಿಂದ ಬೆಂಗಳೂರು ಸೇರಿ 19 ಜಿಲ್ಲೆಗಳಲ್ಲಿ ಮೊದಲನೇ ಹಂತದ ಅನ್​ಲಾಕ್​ ಜಾರಿಗೊಳಿಸಲಾಗಿದ್ದು, ಕೆಲವು ಕ್ಷೇತ್ರಗಳಿಗೆ ವಿನಾಯಿತಿ ನೀಡಲಾಗಿದೆ. ಜೂನ್ 21ರಿಂದ 2ನೇ ಹಂತದ ಅನ್​ಲಾಕ್​ ಪ್ರಕ್ರಿಯೆ ಆರಂಭವಾಗಲಿದೆ. ಲಾಕ್​ಡೌನ್​ ಕಾರಣದಿಂದ ಸಂಚಾರ ಸ್ಥಗಿತಗೊಳಿಸಿದ್ದ ಬಿಎಂಟಿಸಿ ಬಸ್​ಗಳು ಜೂ.​ 21ರಿಂದ ಸಂಚಾರ ಆರಂಭಿಸಲಿವೆ ಎನ್ನಲಾಗುತ್ತಿದೆ.


COMMERCIAL BREAK
SCROLL TO CONTINUE READING

ಜೂ.​​ 21ರಿಂದ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್(BMTC Bus)​ಗಳು ಸಂಚಾರ ಆರಂಭಿಸಲಿವೆ. ಸದ್ಯ ನಗರದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಜೊತೆಗೆ ಮೊದಲ ಹಂತದ ಅನ್​ಲಾಕ್​ ಕೂಡ ಮಾಡಲಾಗಿದೆ. ಇದೇ ಸೋಮವಾರ(ಜೂ.​​ 21)ದಿಂದ ಎರಡನೇ ಹಂತದ ಅನ್​ಲಾಕ್​ ಪ್ರಕ್ರಿಯೆ ಆರಂಭವಾಗಲಿದೆ. ಅಂದಿನಿಂದ ಸಾರ್ವಜನಿಕ ಸಾರಿಗೆಗೆ ಅನುಮತಿ ನೀಡಲು ಬಿಬಿಎಂಪಿ ನಿರ್ಧಾರ ಮಾಡಿದೆ.


ಇದನ್ನೂ ಓದಿ : 2nd PUC Result 2021 : ದ್ವಿತೀಯ PU ವಿದ್ಯಾರ್ಥಿಗಳಿಗೆ ಮತ್ತೆ ಶಾಕ್ ನೀಡಿದ ಹೈಕೋರ್ಟ್!


ಬಸ್​ಗಳಿಗೆ ಅನುಮತಿ ನೀಡಿದ್ರೆ ಏನೆಲ್ಲಾ ಷರತ್ತುಗಳನ್ನ ವಿಧಿಸಬೇಕು ಎಂಬ ಬಗ್ಗೆ ಮುಖ್ಯ ಆಯುಕ್ತ ಗೌರವ್​ ಗುಪ್ತಾ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆದಿದೆ. ಅಧಿಕಾರಿಗಳ ಅಭಿಪ್ರಾಯ ಪಡೆದು ಷರತ್ತುಬದ್ಧ ಅನುಮತಿ ನೀಡಲು ಬಿಬಿಎಂಪಿ(BBMP) ಒಪ್ಪಿಗೆ ಕೊಟ್ಟಿದೆ. ಈ ವಿಚಾರವಾಗಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್​ ಗುಪ್ತಾ ಬಿಎಂಟಿಸಿ ಎಂಡಿ ಜತೆ ಮಾತುಕತೆ ನಡೆದಿದೆ. ಜತೆಗೆ ಗೌರವ್​ ಗುಪ್ತಾ ಅವರು ನಗರ ಪೊಲೀಸ್​ ಕಮಿಷನರ್​, ಆರೋಗ್ಯ ಇಲಾಖೆ ಅಧಿಕಾರಿಗಳ ಜತೆಯೂ ಚರ್ಚಿಸಿದ್ದಾರೆ.


ಇದನ್ನೂ ಓದಿ : Karnataka Heavy Rain : ರಾಜ್ಯದಲ್ಲಿ ಇನ್ನೂ ಎರಡು ದಿನ ಭಾರೀ ಮಳೆ : ಈ ಜಿಲ್ಲೆಗಳಲ್ಲಿ 'ಆರೆಂಜ್' ಅಲರ್ಟ್'


ಯಾವ ಷರತ್ತುಗಳೊಂದಿಗೆ BMTC ಗೆ ಅನುಮತಿ ನೀಡಲಿದೆ BBMP :


- ಶೇಕಡಾ 50ರಷ್ಟು ಬಸ್ಸುಗಳನ್ನ ಮಾತ್ರ ರಸ್ತೆಗಿಳಿಸಲು ಅನುಮತಿ.


- ಬಸ್ಸುಗಳಲ್ಲಿ ಶೇಕಡಾ 50ರಷ್ಟು ಪ್ರಯಾಣಿಕರಿಗೆ(Travelers) ಸಂಚಾರಕ್ಕೆ ಅನುಮತಿ.


ಇದನ್ನೂ ಓದಿ : SSLC exam 2021 : SSLC ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಯ 'ಪ್ರಶ್ನೆಪತ್ರಿಕೆ' ಪ್ರಕಟ : ಇಲ್ಲಿದೆ ಡೌನ್ ಲೋಡ್ ಮಾಡುವ ವಿಧಾನ!


- ಮಾಸ್ಕ್,‌ ಸಾಮಾಜಿಕ ಅಂತರ(Social Distancing) ಕಡ್ಡಾಯ.


- ಬಸ್ಸುಗಳಲ್ಲಿ ಒಂದು ಆಸನ ಬಿಟ್ಟು ಒಂದು ಆಸನದಲ್ಲಿ ಕುಳಿತು ಪ್ರಯಾಣಿಸಲು ಅವಕಾಶ.


- ನಿಂತುಕೊಂಡು ಪ್ರಯಾಣಿಸೋದಕ್ಕೆ ಅವಕಾಶ ಇಲ್ಲ.


ಇದನ್ನೂ ಓದಿ : e-Sahamati App : ರೈತ ಸಮುದಾಯಕ್ಕೆ ರಾಜ್ಯ ಸರ್ಕಾರದಿಂದ 'ಗುಡ್ ನ್ಯೂಸ್'!


- ಬಸ್​​ ನಿಲ್ದಾಣಗಳಲ್ಲಿ ಜನಸಂದಣಿ ಆಗದಂತೆ ನೋಡಿಕೊಳ್ಳುವ ಜವಬ್ದಾರಿ ಪೊಲೀಸ್​ ಇಲಾಖೆ(Police Department) ಮತ್ತು ಬಿಎಂಟಿಸಿ ಅಧಿಕಾರಿಗಳಿಗೆ.


- ಮೆಜೆಸ್ಟಿಕ್, ಟರ್ಮಿನಲ್ಸ್, ಪ್ರಮುಖ ಬಸ್​ ನಿಲ್ದಾಣಗಳಲ್ಲಿ ಕೋವಿಡ್​ ಟೆಸ್ಟ್​ ಕಡ್ಡಾಯ.


- ನೈಟ್ ಕರ್ಫ್ಯೂ ಆರಂಭಕ್ಕೂ ಮುನ್ನ 7 ಗಂಟೆ ಒಳಗೆ ಬಸ್​ ಸಂಚಾರ ನಿಲ್ಲಿಸಬೇಕು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.