e-Sahamati App : ರೈತ ಸಮುದಾಯಕ್ಕೆ ರಾಜ್ಯ ಸರ್ಕಾರದಿಂದ 'ಗುಡ್ ನ್ಯೂಸ್'!

ಕೃಷಿ ಉತ್ಪನ್ನ ಮಾರಾಟಕ್ಕೆ ಅನುಕೂಲವಾಗುವಂತೆ ಇ-ಸಹಮತಿ ಆ್ಯಪ್

Last Updated : Jun 16, 2021, 10:24 AM IST
  • ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಮತ್ತೊಂದು ಸಿಹಿಸುದ್ದಿ
  • ಕೃಷಿ ಉತ್ಪನ್ನ ಮಾರಾಟಕ್ಕೆ ಅನುಕೂಲವಾಗುವಂತೆ ಇ-ಸಹಮತಿ ಆ್ಯಪ್
  • ಶೀಘ್ರವೇ ಈ ಆ್ಯಪ್ ಲೋಕಾರ್ಪಣೆಗೊಳ್ಳಲಿದೆ
e-Sahamati App : ರೈತ ಸಮುದಾಯಕ್ಕೆ ರಾಜ್ಯ ಸರ್ಕಾರದಿಂದ 'ಗುಡ್ ನ್ಯೂಸ್'! title=

ಬೆಂಗಳೂರು : ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಕೃಷಿ ಉತ್ಪನ್ನ ಮಾರಾಟಕ್ಕೆ ಅನುಕೂಲವಾಗುವಂತೆ ಇ-ಸಹಮತಿ ಆ್ಯಪ್ ಸಿದ್ಧಪಡಿಸಿದ್ದು, ಶೀಘ್ರವೇ ಈ ಆ್ಯಪ್ ಲೋಕಾರ್ಪಣೆಗೊಳ್ಳಲಿದೆ.

ಇ-ಆಡಳಿತ ಇಲಾಖೆ ಎನ್ ಐಸಿ ಮೂಲಕ ಇ-ಸಹಮತಿ ಆ್ಯಪ್(e-Sahamati App) ಸಿದ್ಧಪಡಿಸಲಾಗಿದ್ದು, ರೈತರು ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ಎಲ್ಲಿಯಾದರೂ ಮಾರಾಟ ಮಾಡಲು ಮತ್ತು ಖಾಸಗಿ ಕಂಪನಿಗಳ ಜೊತೆಗೆ ಸಂಪರ್ಕ ಸಾಧಿಸಲು ಅನುಕೂಲವಾಗಲಿದೆ. ಊರಿನಲ್ಲಿಯೇ ಆ್ಯಪ್ ಬಳಸಿಕೊಂಡು ತಮ್ಮ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಬಹುದು.

ಇದನ್ನೂ ಓದಿ : Heavy Rain in Karnataka : ಮುಂಗಾರು ಆರ್ಭಟಕ್ಕೆ ರಾಜ್ಯ ತತ್ತರ : ಜೂ.18 ರವರೆಗೂ ಭಾರೀ ಮಳೆ! 

ಇ-ಸಹಮತಿ ಆ್ಯಪ್ ನಲ್ಲಿ ರೈತರು(Farmers) ಮತ್ತು ಅವರು ಬೆಳೆದ ಬೆಳಗಳ ಸಂಪೂರ್ಣ ಮಾಹಿತಿ ಇರಲಿದ್ದು, ನಿರ್ವಹಣೆಗೆ ಕನ್ವೆಂಟ್ ಮ್ಯಾನೇಜರ್ ಮೂಲಕ ಖಾಸಗಿ ಕಂಪನಿಗಳು ರೈತರನ್ನು ಸಂಪರ್ಕಿಸಬಹುದು. ಬೆಳೆಗಳ ಖರೀದಿಗೆ ಮುಂದೆ ಬರುವ ಕಂಪನಿಗಳು ಕನ್ವೆಂಟ್ ಮ್ಯಾನೇಜರ್ ಸಂಪರ್ಕಿಸಿದರೆ ರೈತರ ಒಪ್ಪಿಗೆ ಪಡೆದು ಕಂಪನಿಗೆ ತಿಳಿಸಿ, ಕಂಪನಿ ರೈತರನ್ನು ಸಂಪರ್ಕಿಸಿ ರೈತರ ಬೆಳೆಗಳನ್ನು ಖರೀದಿಸಬಹುದಾಗಿದೆ. ಈ ಮೂಲಕ ಮಧ್ಯವರ್ತಿಗಳ ಹಾವಳಿಗೆ ಬ್ರೇಕ್ ಬೀಳಲಿದೆ.

ಇದನ್ನೂ ಓದಿ : Second PUC Result 2021 : ದ್ವಿತೀಯ PUC ಫಲಿತಾಂಶಕ್ಕೆ 'ರಾಜ್ಯ ಹೈಕೋರ್ಟ್' ತಡೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News