ಬೆಂಗಳೂರು:  ಮೂವರು ಕಾರ್ಪೊರೇಟರ್ ಗಳು ನೀಡಿದ ಕುಮ್ಕಕ್ಕಿನಿಂದ ಡಿ.ಜೆ. ಹಳ್ಳಿ (DJ Halli) ಮತ್ತು ಕೆ.ಜಿ. ಹಳ್ಳಿ ಗಲಭೆ ಪ್ರಕರಣ ನಡೆದಿರುವುದಾಗಿ ಪುಲಕೇಶಿ ನಗರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ (Akhanda Srinivas Murthy) ಪೊಲೀಸ್ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆಂದು ತಿಳಿದುಬಂದಿದೆ.


COMMERCIAL BREAK
SCROLL TO CONTINUE READING

ಡಿ.ಜೆ. ಹಳ್ಳಿ - ಕೆ.ಜಿ. ಹಳ್ಳಿ ಗಲಭೆ ಪ್ರಕರಣ: ಕತ್ತಲಲ್ಲಿ ಕಾರ್ಯಾಚರಣೆ ನಡೆಸಿ 20 ಮಂದಿ ಅರೆಸ್ಟ್


ಮಾಜಿ‌ ಮೇಯರ್ ಸಂಪತ್ ರಾಜ್, ಕಾರ್ಪೋರೇಟರ್ ಝಾಕಿರ್ ಹಾಗೂ ಇರ್ಷಾದ್ ಬೇಗಂ ಅವರೇ ಅಖಂಡ ಶ್ರೀನಿವಾಸಮೂರ್ತಿ ವಿಚಾರಣೆ ವೇಳೆ ತಿಳಿಸಿರುವ ಹೆಸರುಗಳು.‌ ಬೆಂಗಳೂರು ಗಲಭೆ (Bangalore Violence) ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಡಿಸಿಪಿ ರವಿಕುಮಾರ್ ಮುಂದೆ ಶಾಸಕ ಅಖಂಡ ಶ್ರೀನಿವಾಸ್ ಹೇಳಿಕೆ ದಾಖಲಿಸಿದ್ದಾರೆ.


ಡಿ.ಜೆ. ಹಳ್ಳಿ - ಕೆ.ಜಿ. ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಪ್ರಮುಖ ಆರೋಪಿ ಅರೆಸ್ಟ್


ಬುಧವಾರ ಸಿಸಿಬಿ ಕಚೇರಿಯಲ್ಲಿ ನಡೆದ ವಿಚಾರಣೆ ವೇಳೆ ಶಾಸಕ ಅಖಂಡ ಶ್ರೀನಿವಾಸ್ ಹೇಳಿಕೆ ದಾಖಲಿಸಿದ್ದಾರೆ. ಮಾಜಿ ಮೇಯರ್ ಸಂಪತ್ ರಾಜ್ ನಾನು ಪ್ರತಿನಿಧಿಸುವ ಪುಲಕೇಶಿ ನಗರ ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ‌. 2018ರಲ್ಲಿ ಪುಲಿಕೇಶಿನಗರದಿಂದ ಟಿಕೆಟ್ ಕೇಳಿದ್ದರು. ಆದರೆ ಕಾಂಗ್ರೆಸ್‌ ಪಕ್ಷ ಅವರಿಗೆ ಟಿಕೆಟ್ ಕೊಡಲಿಲ್ಲ. ಬದಲಿಗೆ ಜೆಡಿಎಸ್ ಪಕ್ಷದಿಂದ ಬಂದಿದ್ದ, ಹಾಲಿ ಶಾಸಕನಾಗಿದ್ದ ನನಗೆ ಟಿಕೇಟ್ ಕೊಟ್ಟಿತ್ತು. ಅಂದಿನಿಂದಲೂ ನನ್ನ ವಿರುದ್ಧ ಷಡ್ಯಂತ್ರ ರೂಪಿಸಲು ಅವಕಾಶಕ್ಕಾಗಿ ಕಾಯುತ್ತಿದ್ದರು. ನನ್ನ‌ ಸಂಬಂಧಿ ನವೀನ್ ಫೇಸ್ ಬುಕ್ ನಲ್ಲಿ ಹಾಕಿದ ಪೋಸ್ಟ್ ಅನ್ನು ಇಟ್ಟುಕೊಂಡು ಈ ರೀತಿ ಗಲಭೆ ಸೃಷ್ಟಿಸಿದ್ದಾರೆ ಎಂದು ಹೇಳಿಕೆ ನೀಡಿರುವುದಾಗಿ ತಿಳಿದುಬಂದಿದೆ.


ಬೆಂಗಳೂರು ಗಲಭೆ ಬಗ್ಗೆ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡ ಆರೋಪಿ ನವೀನ್


ನೇರವಾಗಿ ಈ ಗಲಭೆ ಪ್ರಕರಣದ ಹಿಂದೆ ಮೂವರು ಕಾರ್ಪೋರೇಟರ್ ಗಳ ಕೈವಾಡ ಇರಬಹುದು. ನಮ್ಮ‌ ಪಕ್ಷದಲ್ಲಿ ಇದ್ದುಕೊಂಡೆ ಇವರೆಲ್ಲಾ ಹೀಗೆ ಮಾಡುತ್ತಾರೆ ಎಂಬ ಅಂದಾಜು ಇರಲಿಲ್ಲ ಎಂದು ಅಖಂಡ ಹೇಳಿಕೆ ನೀಡಿರುವುದರಿಂದ ಗುರುವಾರ ಇದೇ ಹೇಳಿಕೆಗಳನ್ನು ಆಧರಿಸಿ ಸಂಪತ್ ರಾಜ್ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಮೊನ್ನೆ ಒಂದು ಸುತ್ತು ವಿಚಾರಣೆ ನಡೆಸಲಾಗಿದ್ದು ಇಂದು ಮತ್ತೆ ಸಿಸಿಬಿಗೆ ಕಚೇರಿಗೆ ಬರುವಂತೆ ಅವರಿಗೆ ತಿಳಿಸಲಾಗಿದೆ. ಬಳಿಕ ಝಾಕಿರ್ ಹಾಗೂ ಇರ್ಷಾದ್ ಬೇಗಂ ವಿಚಾರಣೆ ಕೂಡ ನಡೆಯಲಿದೆ.