ಬೆಂಗಳೂರು: ಇಲ್ಲಿನ ಡಿ.ಜೆ. ಹಳ್ಳಿ ಹಾಗೂ ಕೆ.ಜಿ. ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾತ್ರಿ ಪೂರ್ತಿ ಕಾರ್ಯಾಚರಣೆ ನಡೆಸಿ 20ಕ್ಕೂ ಹೆಚ್ಚು ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಡಿ.ಜೆ.ಹಳ್ಳಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಕೇಶವಮೂರ್ತಿ ನೇತೃತ್ವದಲ್ಲಿ ರಾತ್ರಿ ಪೂರ್ತಿ ಕಾರ್ಯಾಚರಣೆ ನಡೆಸಿರುವ ತನಿಖಾ ತಂಡ ಗಲಭೆ ದಿನದ ವಿಡಿಯೋ ಮತ್ತು ಸಿಸಿಟಿವಿ ಆಧರಿಸಿ 20 ಜನಕ್ಕೂ ಹೆಚ್ಚಯ ಮಂದಿ ಆರೋಪಿಗಳನ್ನು ಅರೆಸ್ಟ್ ಮಾಡಿದೆ ಎಂದು ತಿಳಿದುಬಂದಿದೆ.
ಡಿ.ಜೆ. ಹಳ್ಳಿ - ಕೆ.ಜಿ. ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಪ್ರಮುಖ ಆರೋಪಿ ಅರೆಸ್ಟ್
ನಿನ್ನೆ ರಾತ್ರಿ ಕಾರ್ಯಚರಣೆ ವೇಳೆ 20ಕ್ಕೂ ಹೆಚ್ಚು ಅರೋಪಿಗಳನ್ನು ಬಂಧಿಸಲಾಗಿದೆ. ಇದಲ್ಲದೆ ಈವರೆಗೆ ಡಿ.ಜೆ. ಹಳ್ಳಿ ಹಾಗೂ ಕೆ.ಜಿ. ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ 300ಕ್ಕೂ ಹೆಚ್ಚು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಅಲ್ಲದೆ ಡಿ.ಜೆ. ಹಳ್ಳಿ ಠಾಣೆಯಲ್ಲಿ 49 ಹಾಗೂ ಕೆ.ಜಿ. ಹಳ್ಳಿ ಪೊಲೀಸ್ ಠಾಣೆ ಯಲ್ಲಿ 16, ಒಟ್ಟು 65 ಎಫ್ ಐ ಅರ್ ದಾಖಲು ಮಾಡಿಕೊಳ್ಳಲಾಗಿದೆ. ಸದ್ಯ ಬಂಧಿತ ಆರೋಪಿಗಳು ನೀಡುತ್ತಿರುವ ಮಾಹಿತಿಗಳನ್ನು ಆಧರಿಸಿ ಮುಂದಿನ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಡಿ.ಜೆ. ಹಳ್ಳಿ ಹಾಗೂ ಕೆ.ಜಿ. ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಪ್ರಮುಖ ಅರೋಪಿ ಕರ್ನಾಟಕ ಟಿಪ್ಪು ಟೈಗರ್ ಅಲ್ಫತ್ ಟ್ರಸ್ಟ್ ಅಧ್ಯಕ್ಷ ಕೆ. ವಾಜಿದ್ ಪಾಷ ಅವರನ್ನು ಬಂಧಿಸಲಾಗಿದೆ. ಈತ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದು ಕೆಲ ದಿನಗಳ ಹಿಂದೆ 'ಶಾಸಕ ಅಖಂಡ ಶ್ರೀನಿವಾಸ್ ಕಾಣೆಯಾಗಿದ್ದಾನೆ' ಎಂದು ಪೋಸ್ಟ್ ಹಾಕಿದ್ದ. ಆಗ ಅಖಂಡ ಶ್ರೀನಿವಾಸ್ ಬೆಂಬಲಿಗರು ವಾಜಿದ್ ಪಾಷ ವಿರುದ್ದ ದೂರು ನೀಡಿದ್ದರು. ಬಳಿಕ ಪೊಲೀಸ್ ಠಾಣೆಯಲ್ಲಿ ರಾಜಿ ಮಾಡಿಸಿ ವಿವಾದ ಬಗೆಹರಿಸಲಾಗಿತ್ತು.
ಬೆಂಗಳೂರು ಗಲಭೆ ಬಗ್ಗೆ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡ ಆರೋಪಿ ನವೀನ್
ಈಗ ಪ್ರವಾದಿ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಮತ್ತು ಆ ಮೂಲಕ ಡಿ.ಜೆ. ಹಳ್ಳಿ ಹಾಗೂ ಕೆ.ಜಿ. ಹಳ್ಳಿ ಗಲಭೆಗೆ ಕಾರಣನಾಗಿದ್ದ ನವೀನ್ ವಿರುದ್ದ ದೂರು ನೀಡುವ ತಂಡದಲ್ಲೂ ವಾಜೀದ್ ಪಾಷಾ ಕಾಣಿಸಿಕೊಂಡಿದ್ದರು. ದೂರು ನೀಡುವ ಸಮಯದಲ್ಲಿ ನವೀನ್ ಅರೆಸ್ಟ್ ಮಾಡಲು ಪೊಲೀಸರು ಎರಡು ಗಂಟೆಗಳ ಕಾಲ ಸಮಯ ಕೇಳಿದಾಗ ತಕ್ಷಣವೇ ಬಂಧಿಸುವಂತೆ ಒತ್ತಾಯಿಸಿದ್ದರು.
ಗೋಲಿಬಾರ್ ನಿಂದ ಮೃತಪಟ್ಟ ಯುವಕರ ತಾಯಿ, ತಂಗಿಗೆ ಯಾರು ದಿಕ್ಕು: ಜಮೀರ್ ಅಹಮದ್ ಖಾನ್
ಹಿಂದೆ ಅಖಂಡ ಶ್ರೀನಿವಾಸ್ ವಿರುದ್ಧ ಮತ್ತು ಈಗ ನವೀನ್ ವಿರುದ್ಧ ಕಿಡಿಕಾರುತ್ತಿದ್ದ ವಾಜಿದ್ ಗಲಭೆಯ ಹಿಂದೆ ಇರಬಹುದು ಎಂಬ ಅನುಮಾನದ ಮೇಲೆ ಬಂಧಿಸಲಾಗಿದೆ. ಡಿ.ಜೆ. ಹಳ್ಳಿ ಪೊಲೀಸ್ ಠಾಣೆ ದ್ವಂಸದ ಹಿಂದೆ ವಾಜಿದ್ ಬೆಂಬಲಿಗರು ಇರಬಹುದು ಎಂಬ ಶಂಕೆ ಕೂಡ ಇದೆ. ಸದ್ಯ ವಾಜಿದ್ ಅವರನ್ನು ಸಿಸಿಬಿ ಹಾಗೂ ಡಿ.ಜೆ. ಹಳ್ಳಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.