Namma Metro Timings Extended On TCS Marathon: ಬೆಂಗಳೂರಿನಲ್ಲಿ ನಾಳೆ ಮೆಟ್ರೋ ಸಂಚಾರವನ್ನು ಬೆಳಗ್ಗೆ ಬಹಳ ಬೇಗನೇ ಪ್ರಾರಂಭಿಸುತ್ತದೆ. ನಮ್ಮ ಮೆಟ್ರೋ ಸಂಚಾರ ಸಿಲಿಕಾನ್‌ ಸಿಟಿಯಲ್ಲಿ ವಿಶೇಷ ದಿನಗಳಂದು ಬೇಗನೆ ಆರಂಭವಾಗುತ್ತದೆ. ಅದರಂತೆ ಮಹಾನಗರಿ ಬೆಂಗಳೂರಿನಲ್ಲಿ  ಏಪ್ರಿಲ್ 28 ಭಾನುವಾರದಂದು ಬೆಳಗ್ಗೆ ಟಿಸಿಎಸ್ ವರ್ಲ್ಡ್ 10ಕೆ ರನ್ ಮ್ಯಾರಥಾನ್ ಓಟದ ಸ್ಪರ್ಧೆಯ ಹಿನ್ನೆಲೆ ಮೆಟ್ರೋ ಸಂಚಾರವನ್ನು ಬೇಗನೆ ಶೂರುವಾಗಲಿದೆ.


COMMERCIAL BREAK
SCROLL TO CONTINUE READING

ನಮ್ಮ ಮೆಟ್ರೋ ಸಂಚಾರ ಏಪ್ರಿಲ್ 28ರ ಭಾನುವಾರ ಬೆಳಗ್ಗೆ 3.35ರಿಂದ ಆರಂಭವಾಗುತ್ತಿದ್ದು, ಪ್ರತಿ ಹತ್ತು ನಿಮಿಷಕೊಮ್ಮೆ ಮೆಟ್ರೋ ರೈಲು ಸೇವೆ ಸಿಗಲಿದೆ. ಮೆಟ್ರೋ ಸಂಚಾರ ನಾಗಸಂದ್ರ, ಚಲ್ಲಘಟ್ಟ, ಸಿಲ್ಕ್ ಬೋರ್ಡ್, ವೈಟ್ ಫೀಲ್ಡ್ ಮೆಟ್ರೋ ನಿಲ್ದಾಣಗಳಿಂದ ಆರಂಭವಾಗುತ್ತಿದ್ದು, 10 ನಿಮಿಷಕೊಮ್ಮೆ ಮೆಟ್ರೋ ರೈಲು ಬರಲಿದೆ. ಇನ್ನೂ ಸಿಲಿಕಾನ್‌ ಸಿಟಿಯ ಮಧ್ಯ ಭಾಗವಾದ ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ ಮೊದಲ ರೈಲು ಬೆಳಗ್ಗೆ 4.10ಕ್ಕೆ ಸಂಚಾರ ಮಾಡಲಿದೆ.


ಇದನ್ನೂ ಓದಿ: Loksabha Election 2024 : ಬೆಂಗಳೂರಿನಲ್ಲಿ 20ನೇ ಬಾರಿ ಮತ ಚಲಾಯಿಸಿದ 86 ವೃದ್ಧ


ಮೆಟ್ರೋ ಓಡಾಟ ಬೆಳಗ್ಗೆ 5 ಗಂಟೆಯವರೆಗೆ 10 ನಿಮಿಷಕ್ಕೊಂದು ನಡೆಸಲಿದೆ. ಜನರ ದಟ್ಟಣೆಯ ಆಧಾರದ ಮೇಲೆ ಮೆಟ್ರೋ ರೈಲ್ವೆ ಸೇವೆ ಮುಂದುವರಿಯಲಿದ್ದು, ಪ್ರಯಾಣಿಕರು ಅತಿ ಹೆಚ್ಚು ಆದರೆ  ಸಂಚಾರವನ್ನು ಮುಂದುವರಿಸಲು ನಿರ್ಧಾರವನ್ನು ಮಾಡಲಾಗಿದೆ.  ಟಿಸಿಎಸ್ ವರ್ಲ್ಡ್ 10kನಲ್ಲಿ ಭಾಗವಹಿಸುವವರು ಮೆಟ್ರೋ ಸೇವೆಯನ್ನು ಬಳಸಿಕೊಳ್ಳುಬಹುದು. ನಾಳೆಗೆ ನಗದು ರಹಿತ ಪಾವತಿ ಹಾಗೂ ಕ್ಯೂಆರ್ ಆಧಾರಿತ ಟಿಕೆಟ್ ಖರೀದಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.


ಟಿಸಿಎಸ್ ವರ್ಲ್ಡ್ 10k ಮ್ಯಾರಥಾನ್  ನಾಳೆ ಬೆಳಗ್ಗೆ ಮಾಣಿಕ್ ಶಾ ಪೆರೇಡ್ ಗ್ರೌಂಡ್‌ನಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು ಯುವಕರು-ಯುವತಿಯರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಈ ಓಟದ ಸ್ಪರ್ಧೆ ತುಂಬಾನೆ ವಿಶೇಷತೆಯಿಂದ ಕೂಡಿದ್ದು, ಇದರಲ್ಲಿ ಭಾಗವಹಿಸುವವರು 10 ಕಿಲೋ ಮೀಟರ್ ಓಡಬೇಕಾಗಿದೆ. ಬೆಂಗಳೂರಿನಲ್ಲಿ ನಡೆಯಲಿರುವ ಈ ಕಾರ್ಯಕ್ರಮ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಿದೆ. ಇದರಲ್ಲಿ ಭಾಗವಹಿಸುವವರು ಜಾಗೃತಿ ಮೂಡಿಸುವ ಬರಹವಿರುವ ಬೋರ್ಡ್ ಹಿಡಿದುಕೊಂಡು ಒಡಲಿದ್ದು, ಗೆದ್ದ  ಸ್ಪರ್ಧಿಗಳಿಗೆ ಮೆಡಲ್ ನೀಡಲಾಗುತ್ತದೆ. ಇತರೆ ಸ್ಪರ್ಧಿಗಳಿಗೆ ಪ್ರಮಾಣ ಪತ್ರವನ್ನು ಕೊಡಲಾಗುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.