Loksabha Election 2024 : ಬೆಂಗಳೂರಿನಲ್ಲಿ 20ನೇ ಬಾರಿ ಮತ ಚಲಾಯಿಸಿದ 86 ವೃದ್ಧ

Bangalore : ಬೆಂಗಳೂರಿನಲ್ಲಿ 86ನೇ ವಯಸ್ಸಿನ ವೃದ್ಧ 20ನೇ ಬಾರಿ ಮತಗಟ್ಟೆಗೆ ಬಂದು ಮತದಾನ ಮಾಡುವ ಮೂಲಕ ತಮ್ಮ ಉತ್ಸಾಹವನ್ನು ಮೆರೆದಿದ್ದಾರೆ.

Written by - Zee Kannada News Desk | Last Updated : Apr 26, 2024, 02:25 PM IST
  • ಬೆಂಗಳೂರಿನಲ್ಲಿ 86ನೇ ವಯಸ್ಸಿನ ವೃದ್ಧ 20ನೇ ಬಾರಿ ಮತಗಟ್ಟೆಗೆ ಬಂದು ಮತದಾನ ಮಾಡುವ ಮೂಲಕ ತಮ್ಮ ಉತ್ಸಾಹವನ್ನು ಮೆರೆದಿದ್ದಾರೆ.
  • ಇಂದು ಡಿಆರ್ ಡಿಒ ಕೇಂದ್ರೀಯ ವಿದ್ಯಾಲಯದ ಮತಗಟ್ಟೆಗೆ ಬಂದು ಮತ ಚಲಾಯಿಸಿದರು.
  • ಮತದಾನ ಮಾಡುವ ಹುಮ್ಮಸ್ಸು ಮತಗಟ್ಟೆಯಲ್ಲಿ ದೊರೆಯುವುದು ಎಂದು ಶಿವರಾಮಕೃಷ್ಣ ಶಾಸ್ತ್ರಿ ಹೇಳಿದರು.
Loksabha Election 2024 : ಬೆಂಗಳೂರಿನಲ್ಲಿ 20ನೇ ಬಾರಿ ಮತ ಚಲಾಯಿಸಿದ 86 ವೃದ್ಧ title=

 86 year oldman voted in booth : ದೇಶಾದ್ಯಂತ ಎರಡನೇ ಹಂತದ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಒಟ್ಟು 13 ರಾಜ್ಯಗಳ 89 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಕರ್ನಾಟಕದಲ್ಲಿ ಇಂದು ಮೊದಲ ಹಂತದ ಮತದಾನ ನಡೆಯುತ್ತಿದೆ. 

ಇದನ್ನು ಓದಿ : Diabetes Tips: ಸಕ್ಕರೆ ರೋಗಿಗಳು ಬೆಲ್ಲ ಸೇವಿಸಬಹುದೇ? ಆಹಾರ ತಜ್ಞರು ಹೇಳುವುದೇನು?  

ಬೆಂಗಳೂರಿನ ನಾಲ್ಕು ಕ್ಷೇತ್ರಗಳು ಜೊತೆಗೆ ಮಂಡ್ಯ, ಮೈಸೂರು, ತುಮಕೂರು, ಹಾಸನ, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು, ಚಿತ್ರದುರ್ಗ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಕಾಂಗ್ರೆಸ್‌ನ 14, ಬಿಜೆಪಿಯ 11, ಜೆಡಿಎಸ್‌ನ ಮೂವರು ಸೇರಿದಂತೆ 247 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 

ಬೆಂಗಳೂರಿನ ಸಿವಿ ರಾಮನ್ ನಗರದ ನಿವಾಸಿ ಶಿವರಾಮಕೃಷ್ಣ ಶಾಸ್ತ್ರಿ ಎಂಬ 86ನೇ ವಯಸ್ಸಿನ ವೃದ್ಧ 20ನೇ ಬಾರಿ ಮತ ಚಲಾಯಿಸುವ ಮೂಲಕ ಉತ್ಸಾಹವನ್ನು ಮೆರೆದಿದ್ದಾರೆ.

ಹಿರಿಯ ನಾಗರಿಕರಿಗೆ ಮನೆಯಿಂದಲೇ ಮತದಾನ ಮಾಡುವ ಅವಕಾಶವಿತ್ತು. ಆದರೆ ಶಿವರಾಮಕೃಷ್ಣ ಶಾಸ್ತ್ರಿ ಮತಗಟ್ಟೆಯಲ್ಲಿ ಮತ ಚಲಾಯಿಸಬೇಕೆಂದು ನಿರ್ಧಾರ ಮಾಡಿ ಇಂದು ಡಿಆರ್ ಡಿಒ ಕೇಂದ್ರೀಯ ವಿದ್ಯಾಲಯದ ಮತಗಟ್ಟೆಗೆ ಬಂದು ಮತ ಚಲಾಯಿಸಿದರು.

ಇದನ್ನು ಓದಿ : Loksabha Electon 2024 : ಮೈಸೂರಿನಲ್ಲಿ ಮತದಾನ‌ ಮಾಡಿ ಬಂದ ವೃದ್ದೆ ಸಾವು 

ಖುದ್ದಾಗಿ ಬಂದು ಮತಗಟ್ಟೆಯಲ್ಲಿ ಮತ ಚಲಾಯಿಸಿದರೆ ಮನಸ್ಸಿಗೆ ಖುಷಿ ಸಿಗುತ್ತದೆ. ಮನೆಯಲ್ಲಿ ಮತದಾನ ಮಾಡಿದರೆ ಮತದಾನದ ಮಹತ್ವ ತಿಳಿಯುವುದಿಲ್ಲ  ಮತ್ತು ಮತದಾನ ಮಾಡುವ ಹುಮ್ಮಸ್ಸು ಮತಗಟ್ಟೆಯಲ್ಲಿ ದೊರೆಯುವುದು ಎಂದು ಶಿವರಾಮಕೃಷ್ಣ ಶಾಸ್ತ್ರಿ ಹೇಳಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News