ಚೀನಾದಿಂದ ಸಿಲಿಕಾನ್ ಸಿಟಿಗೆ ಬಂತು ಚಾಲಕರಹಿತ ಮೆಟ್ರೋ ರೈಲು ಭೋಗಿ
Driverless metro : ಸಿಲಿಕಾನ್ ಸಿಟಿ ಬೆಂಗಳೂರಿಗೆ ಚೀನಾದಿಂದ ಚಾಲಕರಹಿತ ಮೆಟ್ರೋ ಬೋಗಿ ಬಂದಿದೆ. ಇದು ನಗರದ ಮೊದಲ ಚಾಲಕ ರಹಿತ ಮೆಟ್ರೋ ಇದಾಗಿದೆ.
Driverless metro China to Silicon City : ನಗರದ ಮೊದಲ ಚಾಲಕ ರಹಿತ ಮೆಟ್ರೋ ರೈಲು ಬೋಗಿ ಚೀನಾದಿಂದ ಬೆಂಗಳೂರಿಗೆ ಆಗಮಿಸಿದೆ. ಬಿಎಂಆರ್‌ಸಿಎಲ್ ನಮ್ಮ ಮೆಟ್ರೋ ಹಳದಿ ಮಾರ್ಗವಾದ ಆರ್. ವಿ.ರಸ್ತೆ ಯಿಂದ ಬೊಮ್ಮಸಂದ್ರ ನಡುವೆ ಈ ರೈಲನ್ನು ಓಡಿಸಲು ಯೋಜನೆ ರೂಪಿಸಿದೆ.
ಚಾಲಕ ರಹಿತ ನಮ್ಮ ಮೆಟ್ರೋ ಬೋಗಿಗಳನ್ನು ತಯಾರು ಮಾಡಲು ಚೀನಾ ಮೂಲದ CRRC Nanjing Puzhen Co Ltd. T ಟೆಂಡರ್ ಪಡೆದಿತ್ತು. ಈ ಬೋಗಿಗಳು ತಯಾರಾದ ಬಳಿಕ ಬಿಎಂಆರ್‌ಸಿಎಲ್ ಅಧಿಕಾರಿಗಳು ಚೀನಾಕ್ಕೆ ತೆರಳಿ, ಅವುಗಳನ್ನು ಪರಿಶೀಲಿಸಿದ್ದರು. ನಂತರ ಭಾರತಕ್ಕೆ ತರುವ ಪ್ರಕ್ರಿಯೆ ಆರಂಭವಾಯಿತು.
ನಮ್ಮ ಮೆಟ್ರೋದ ಮೊದಲ ಚಾಲಕ ರಹಿತ ರೈಲು ಬೋಗಿ ಚೀನಾದಿಂದ ಕಳೆದ ವಾರ ಚೆನ್ನೈ ಬಂದರಿಗೆ ಬಂದು ತಲುಪಿತ್ತು. ಕಸ್ಟಮ್ಸ್ ಸೇರಿದಂತೆ ವಿವಿಧ ಪ್ರಕ್ರಿಯೆ ಪೂರ್ಣಗೊಳಿಸಿಕೊಂಡು ರಸ್ತೆ ಮಾರ್ಗವಾಗಿ ರೈಲು ಬೋಗಿಗಳನ್ನು ಬೆಂಗಳೂರಿಗೆ ತರುವ ಪ್ರಕ್ರಿಯೆ ಆರಂಭವಾಗಿತ್ತು. ಒಟ್ಟು ಮೂರು ಲಾರಿಗಳಲ್ಲಿ 6 ಚಾಲಕ ರಹಿತ ನಮ್ಮ ಮೆಟ್ರೋ ಬೋಗಿಗಳು ಇಂದು (ಫೆ 14ರಂದು) ಮುಂಜಾನೆ 3.30ಕ್ಕೆ ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ಬಂದು ತಲುಪಿವೆ.
ಇದನ್ನು ಓದಿ :ತಿಳಿ ಗುಲಾಬಿ ಬಣ್ಣದ ಮೂಲಕ ಎಲ್ಲರಿಗೂ ವ್ಯಾಲೆಂಟೆನ್ಸ್ ಡೇ ವಿಶ್ಸ್ ಎಂದ ಗಾಯಕಿ
ಐಸಿಸಿ ಆಲ್ ರೌಂಡರ್ ಏಕದಿನ ರ್‍ಯಾಂಕಿಂಗ್ : ಆಫ್ಘಾನಿಸ್ತಾನದ ಮೊಹಮ್ಮದ್ ನಬಿ ಅಗ್ರಸ್ಥಾನದಲ್ಲಿ
ಚೆನ್ನೈ ಬಂದರಿನ ಕಸ್ಟಮ್ಸ್ ಕೋಚ್‌ಗಳನ್ನು ಎತ್ತಲು ಅಗತ್ಯವಾದ ನಿರ್ಣಾಯಕ ಸಲಕರಣೆಗಳ ಕ್ಲಿಯರೆನ್ಸ್ ತಡ ವಾದದ್ದರಿಂದ ಗುರುವಾರಕ್ಕೆ ಚಾಲಕ ರಹಿತ ಬೋಗಿ ಪ್ರವೇಶ ಮುಂದೂಡಿಕೆಯಾಗಿತ್ತು ಇದೀಗ ಬೋಗಿ ಮಂಗಳವಾರ ರಾತ್ರಿ 8 ಗಂಟೆಗೆ ಕಸ್ಟಮ್ಸ್ ತೆರವು ಬಂದಿದ್ದು,ಬೆಂಗಳೂರಿಗೆ ಆಗಮಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ನಮ್ಮ ಮೆಟ್ರೋ ಮಾಹಿತಿ ನೀಡಿದ್ದು ಚಿತ್ರಗಳನ್ನು ಸಹ ಪೋಸ್ಟ್ ಮಾಡಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.