ಕವಿಪವಿ ಹಳೆ ವಿದ್ಯಾರ್ಥಿಗಳ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ
ಕವಿಪವಿ ಕೂಟದಲ್ಲಿ ಹಳೆ ಬೇರು ಹೊಸ ಚಿಗುರು ಕೂಡಿರಬೇಕು ಎಂಬ ಉದ್ದೇಶದಿಂದ ಈ ಹೊಸತನಕ್ಕೆ ನಾಂದಿ ಹಾಡಲಾಗಿದೆ. ತಮ್ಮ ಸಂಪೂರ್ಣ ಸಹಕಾರ ಹಾಗೂ ಬೆಂಬಲ ಹೀಗೆ ಹೊಸ ತಂಡಕ್ಕೆ ಮುಂದುವರಿಯಲಿ ಎಂದು ಈ ಮೂಲಕ ವಿನಂತಿಸಲಾಗಿದೆ.
ಬೆಂಗಳೂರು: ಕನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ (ಕವಿಪವಿ) ಹಳೆಯ ವಿದ್ಯಾರ್ಥಿಗಳ ಸಂಘದ ನೂತನ ಅಧ್ಯಕ್ಷರಾಗಿ ನೂತನ ಅಧ್ಯಕ್ಷರಾಗಿ ಚಂದ್ರಕಾಂತ ಸೊನ್ನದ ಹಾಗೂ ಉಪಾಧ್ಯಕ್ಷರಾಗಿ ಲಿಂಗರಾಜ್ ಬಡಿಗೇರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಇದೇ ಶನಿವಾರ (ಜುಲೈ 29, 2023) ನಡೆದ ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಬೆಂಗಳೂರು ಘಟಕದ ಸದಸ್ಯರ ಸಭೆಯಲ್ಲಿ ಹೊಸ ಪದಾಧಿಕಾರಿಗಳ ತಂಡದ ಆಯ್ಕೆ ಮಾಡಲಾಗಿದ್ದು, ಕವಿಪವಿ ಕೂಟದಲ್ಲಿ ಹಳೆ ಬೇರು ಹೊಸ ಚಿಗುರು ಕೂಡಿರಬೇಕು ಎಂಬ ಉದ್ದೇಶದಿಂದ ಈ ಹೊಸತನಕ್ಕೆ ನಾಂದಿ ಹಾಡಲಾಗಿದೆ. ತಮ್ಮ ಸಂಪೂರ್ಣ ಸಹಕಾರ ಹಾಗೂ ಬೆಂಬಲ ಹೀಗೆ ಹೊಸ ತಂಡಕ್ಕೆ ಮುಂದುವರಿಯಲಿ ಎಂದು ಈ ಮೂಲಕ ವಿನಂತಿಸಲಾಗಿದೆ.
ಈ ಸಭೆಯಲ್ಲಿ ಸಾಕ್ಷ್ಯಚಿತ್ರ ನಿರ್ದೇಶಕ ಚಂದ್ರಕಾಂತ ಸೊನ್ನದ ಅವರನ್ನು ಅಧ್ಯಕ್ಷರಾಗಿ, ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಗ್ರೂಪ್ನ ಕನ್ನಡಪ್ರಭ.ಕಾಮ್ ಚೀಫ್ ಕಂಟೆಂಟ್ ಎಡಿಟರ್ ಲಿಂಗರಾಜ್ ಬಡಿಗೇರ್ ಹಾಗೂ ಪ್ರಜಾವಾಣಿಯ ಹಿರಿಯ ಪತ್ರಕರ್ತೆ ಸುಶೀಲಾ ಡೋಣೂರ ಅವರನ್ನು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಖಾಸಗಿ ಕಂಪನಿಯಲ್ಲಿ ಪಿಆರ್ಒ ಆಗಿ ಕಾರ್ಯನಿರ್ವಹಿಸುತ್ತಿರುವ ಪ್ರವೀಣ್ ಶಿರಿಯಣ್ಣವರ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದ್ದು, ಜೀ ಕನ್ನಡ ನ್ಯೂಸ್ ಸಂಪಾದಕರಾದ ರವಿ ಎಸ್ ಹಾಗೂ ಪ್ರಜಾವಾಣಿ - ಹಿರಿಯ ಸುದ್ದಿ ಸಂಪಾದಕರಾದ ಮಂಜುನಾಥ ಭದ್ರಶೆಟ್ಟಿ ಅವರನ್ನು ಕಾರ್ಯದರ್ಶಿಯಾಗಿಯೂ, ಪ್ರಜಾಟಿವಿ ಸಂಪಾದಕರಾದ ಮುತ್ತುರಾಜ್ ಸುಳ್ಳದ ಹಾಗೂ ಪೊಲಿಟಿಕಲ್ 360 ವಾಹಿನಿಯ ಇನ್ಫುಟ್ ವಿನಾಯಕ ಲಿಮಯೆ ಅವರನ್ನು ಸದಸ್ಯರಾಗಿ ಕವಿಪವಿ ಬೆಂಗಳೂರು ಘಟಕದ ಪದಾಧಿಕಾರಿಗಳ ಪರವಾಗಿ ಸರ್ವಾನುಮತದಿಂದ ನೂತನ ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಗಿದೆ.
ಕರ್ನಾಟಕ ವಿವಿ: ಹಳೆ ವಿದ್ಯಾರ್ಥಿಗಳ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಸಲಹಾ ಸಮಿತಿ ಸದಸ್ಯರುಗಳು:
1. ಡಾ. ಹಾಲಸ್ವಾಮಿ
2. ಹನುಮೇಶ್ ಯಾವಗಲ್
3. ಬಸವರಾಜ್ ಬೊಸಾರೆ
4. ಸುನಿಲ್ ಶಿರಸಂಗಿ
5. ಶಂಕರ್ ಪಾಗೋಜಿ
6. ವಿಲಾಸ್ ನಾಂದೋಡ್ಕರ್
7. ಆನಂದ್ ಬೈದನಮನೆ
8. ಅನಿಲ್ ಗೆಜ್ಜಿ
9. ಅರುಣ ಎಂ ಪಿ
10. ಗೀತಾ ಚೌವ್ಹಾಣ್.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.