ಪಬ್ ಬಾರ್ ಹೋಟೆಲ್ ಗಳಿಗೆ ಬಿಬಿಎಂಪಿಯಿಂದ ಶೀಘ್ರದಲ್ಲೇ ಹೊಸ ಗೈಡ್ ಲೈನ್ಸ್
BBMP New Guidelines: ಸಿಲಿಕಾನ್ ಸಿಟಿಯಲ್ಲಿನ ಪ್ರತೀ ಉದ್ದಿಮೆಗಳು ಕೂಡ ಇನ್ಮುಂದೆ ಬಿಬಿಎಂಪಿಯ ಹೊಸ ರೂಲ್ಸ್ ಅನುಸರಿಸುವುದು ಕಡ್ಡಾಯವಾಗಿದೆ.
BBMP New Guidelines: ರಾಜ್ಯ ರಾಜಧಾನಿ ಬೆಂಗಳೂರಿನ ಪಬ್, ಬಾರ್, ಹೋಟೆಲ್ ಗಳಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಶೀಘ್ರದಲ್ಲೇ ಹೊಸ ಮಾರ್ಗಸೂಚಿ ಹೊರಡಿಸಲಿದ್ದು, ಪ್ರತೀ ಉದ್ದಿಮೆಗಳು ಪಾಲಿಕೆಯ ನಯಾ ರೂಲ್ಸ್ ಫಾಲೋ ಮಾಡುವುದು ಕಡ್ಡಾಯವಾಗಲಿದೆ.
ವಾಸ್ತವವಾಗಿ, ಇತ್ತೀಚೆಗೆ ಬೆಂಗಳೂರಿನ ಕೋರಮಂಗಲದಲ್ಲಿ ನಡೆದ ಅಗ್ನಿ ದುರಂತದ ಬಳಿಕ ಎಚ್ಚೆತ್ತಿರುವ ಬಿಬಿಎಂಪಿ ಬೆಂಗಳೂರಿನಲ್ಲಿ ಉದ್ದಿಮೆ ನಡೆಸುವವರಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲು ನಿರ್ಧರಿಸಿದೆ.
ಇದನ್ನೂ ಓದಿ- ಬೆಳಗಾವಿಯ ಹೈಡ್ರೋಪಾವರ್ ಕಂಪನಿಗೆ ದಂಡ ವಿಧಿಸಿ, ದೂರುದಾರರಿಗೆ ಪರಿಹಾರ ನೀಡಲು ಆದೇಶ
ಹೋಟೆಲ್, ಪಬ್, ಬಾರ್, ರೆಸ್ಟೋರೆಂಟ್, ಅಗ್ನಿಶಾಮಕ ಇಲಾಖೆ ಜೊತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಿದ್ದರು. ಬಳಿಕ ಹೋಟೆಲ್ ಅಸೋಸಿಯೇಶನ್ ಬಾರ್ ಆಂಡ್ ರೆಸ್ಟುರೆಂಟ್ ಅಸೋಸಿಯೇಶನ್ ಜೊತೆಗೆ ಸಭೆ ನಡೆಯಿಸಿದ ಬಿಬಿಎಂಪಿ ಅಧಿಕಾರಿಗಳು ಅಗ್ನಿ ಅವಘಡಗಳನ್ನು ತಪ್ಪಿಸಲು ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಲಾಗಿತ್ತು.
ಸಭೆಯಲ್ಲಿ ಭವಿಷ್ಯದಲ್ಲಿ ಈ ರೀತಿಯ ಅಗ್ನಿ ಅವಘಡಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಪಬ್, ಬಾರ್, ಹೋಟೆಲ್ ಗಳಲ್ಲಿ ಒಂದಷ್ಟು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಕ್ರಮ ಕೈಗೊಳ್ಳಲು ಚಿಂತನೆ ನಡೆಸಲಾಗಿದೆ.
ಇದನ್ನೂ ಓದಿ- ಈ ಏರಿಯಾದಲ್ಲಿ ಎಲ್ಲವೂ ಡಿಜಿಟಲ್
ಪಾಲಿಕೆ ಗೈಡ್ಲೈನ್ಸ್ ಏನು?
-ಪ್ರತೀ ಹೋಟೆಲ್ ಅಲ್ಲಿ ಇನ್ಮುಂದೆ ಫೈರ್ ಮ್ಯಾನ್ ನೇಮಕ ಕಡ್ಡಾಯ
-ಪ್ರತಿ ಹೋಟೆಲ್ ಸಿಬ್ಬಂದಿಗೆ ಅಗ್ನಿ ಸುರಕ್ಷತೆ ಬಗ್ಗೆ ಟ್ರೈನಿಂಗ್
-ಬೆಂಕಿ ನಂದಿಸಲು ಬಳಸುವ ವಾಟರ್ ಪೈಪ್ ಕಡ್ಡಾಯ ವಾಟರ್ ಜೆಟ್ ಮಾದರಿಯ ಹೋಗೆ ನಿವಾರಕ ಮಶೀನ್ ಕಡ್ಡಾಯ
-ಹೋಟೆಲ್ ಪಬ್ ಬಾರ್ ರೆಸ್ಟೋರೆಂಟ್ 5 ಭಾಗದಲ್ಲಿ ಬೆಂಕಿ ನಂದಿಸುವ ಮಶೀನ್ ಇರಬೇಕು
-ಅಗ್ನಿ ಸುರಕ್ಷತೆ ಕೈಗೊಂಡಿರುವ ಬಗ್ಗೆ ಅಗ್ನಿಶಾಮಕ ದಳದ ಕಡೆಯಿಂದ ಸರ್ಟಿಫಿಕೇಟ್ ಕಡ್ಡಾಯ
- 2 ಸಾವಿರಕ್ಕೂ ಅಧಿಕ ಪಬ್ ಬಾರ್ ರೆಸ್ಟೋರೆಂಟ್ ಇದೆ
- ರೂಲ್ಸ್ ಫಾಲೋ ಮಾಡದ ಉದ್ದಿಮೆ ಬಾಗಿಲು ಮುಚ್ಚಿಸುವ ಬಗ್ಗೆ ನಿರ್ಧಾರ
ಈ ರೀತಿ ಹಲವು ಕ್ರಮಗಳನ್ನು ಕೈಗೊಳ್ಳಲು ಬಿಬಿಎಂಪಿ ಚಿಂತನೆ ನಡೆಸಿದ್ದು ಕೆಲವೇ ದಿನದಲ್ಲಿ ಪಾಲಿಕೆಯಿಂದ ಈ ನೂತನ ಮಾರ್ಗ ಸೂಚಿ ಜಾರಿಯಾಗುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದುಬಂದಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.