ಬೆಳಗಾವಿಯ ಹೈಡ್ರೋಪಾವರ್ ಕಂಪನಿಗೆ ದಂಡ ವಿಧಿಸಿ, ದೂರುದಾರರಿಗೆ ಪರಿಹಾರ ನೀಡಲು ಆದೇಶ

ಹುಬ್ಬಳ್ಳಿ ಶೆಟ್ಟರ ಕಾಲನಿಯ ನಿವಾಸಿ ಅಶೋಕ ಶದ್ಮಾಕರ್ ರವರು ಎದುರುದಾರರಾದ ಬೆಳಗಾವಿಯ ನಿಖಿತಾರವರಿಂದ ಅಕ್ಟೋಬರ್-2022 ಹೈಡ್ರೋಪಾವರ್ ಉಪಕರಣ ಖರೀದಿಸಿದ್ದರು. ಅದಕ್ಕೆ ಅವರು ಒಟ್ಟು ರೂ.14,00,015/- ಹಣ ಎದುರುದಾರರಿಗೆ ಕೊಟ್ಟಿದ್ದರು.

Written by - Manjunath N | Last Updated : Nov 6, 2023, 09:37 PM IST
  • ಮಶೀನ ರಿಪೇರಿ ಮಾಡಿ ಅದು ಸರಿಯಾಗಿ ಕೆಲಸ ಮಾಡುವಂತೆ ನೋಡಿಕೊಳ್ಳಬೇಕೆಂದು ಆಯೋಗ ಎದುರುದಾರರಿಗೆ ತಿಳಿಸಿದೆ
  • ಒಂದು ತಿಂಗಳ ಒಳಗಾಗಿ ನೀಡುವಂತೆ ಎದುರುದಾರರಿಗೆ ಆಯೋಗ ತನ್ನ ತೀರ್ಪಿನಲ್ಲಿ ನಿರ್ದೇಶಿಸಿದೆ
 ಬೆಳಗಾವಿಯ ಹೈಡ್ರೋಪಾವರ್ ಕಂಪನಿಗೆ ದಂಡ ವಿಧಿಸಿ, ದೂರುದಾರರಿಗೆ ಪರಿಹಾರ ನೀಡಲು ಆದೇಶ title=

ಧಾರವಾಡ : ಹುಬ್ಬಳ್ಳಿ ಶೆಟ್ಟರ ಕಾಲನಿಯ ನಿವಾಸಿ ಅಶೋಕ ಶದ್ಮಾಕರ್ ರವರು ಎದುರುದಾರರಾದ ಬೆಳಗಾವಿಯ ನಿಖಿತಾರವರಿಂದ ಅಕ್ಟೋಬರ್-2022 ಹೈಡ್ರೋಪಾವರ್ ಉಪಕರಣ ಖರೀದಿಸಿದ್ದರು. ಅದಕ್ಕೆ ಅವರು ಒಟ್ಟು ರೂ.14,00,015/- ಹಣ ಎದುರುದಾರರಿಗೆ ಕೊಟ್ಟಿದ್ದರು.

ಹೈಡ್ರೋಪಾವರ್ ಉಪಕರಣ 70n ತ್ಯಾಜ್ಯ ಬಾಟಲಗಳನ್ನು ಪ್ರೆಸ್ ಮಶೀನ ಆಗಿತ್ತು. ಸದರಿ ಮಶೀನನ್ನು 4 ತಿಂಗಳ ತಡವಾಗಿ ಡೆಲಿವರಿ ಕೊಟ್ಟಿದ್ದರು. ದೂರುದಾರರು ಆ ಮಶೀನ ಖರೀದಿಸಲು ಹುಬ್ಬಳ್ಳಿಯ ಕೆನರಾ ಬ್ಯಾಂಕಿನಲ್ಲಿ ಸಾಲ ಪಡೆದಿದ್ದರು. ಎದುರುದಾರರು ಮಶೀನನ್ನು 4 ತಿಂಗಳ ತಡವಾಗಿ ಕೊಟ್ಟಿದ್ದರಿಂದ ದೂರುದಾರರಿಗೆ ಒಟ್ಟು 4 ತಿಂಗಳ ಕಂತುಕಟ್ಟುವ ಹೊಣೆಗಾರಿಕೆ ಬಂದಿತ್ತು. ದೂರುದಾರ ಆ ಮಶೀನ್ ಚಾಲೂ ಮಾಡಿದ ಮೇಲೆ ಅದರಲ್ಲಿ ಕೆಲವೊಂದು ನ್ಯೂನ್ಯತೆಗಳು ಕಂಡುಬಂದು ಆಯಿಲ್ ಸೋರುವಿಕೆಯಾಗಿ ಅವರಿಗೆ ಲುಕ್ಸಾನು ಆಯಿತು. ಅದರಿಂದ ತನಗೆ ಆರ್ಥಿಕ ನಷ್ಟವಾಗಿದೆ ಮತ್ತು ತನ್ನ ಉದ್ಯೋಗಕ್ಕೆ ತೊಂದರೆಯಾಗಿದೆ ಅಂತಾ ಹೇಳಿ ದೂರುದಾರ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಎದುರುದಾರರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಧಾರವಾಡ ಜಿಲ್ಲಾಗ್ರಾಹಕರ ಆಯೋಗಕ್ಕೆ ದಿ:11/07/2023 ರಂದು ದೂರು ಸಲ್ಲಿಸಿದ್ದರು.

ಇದನ್ನೂ ಓದಿ: ಭಾರತದ ನಿಜವಾದ ಮ್ಯಾಚ್ ವಿನ್ನರ್ ಶಮಿ, ಕೊಹ್ಲಿ, ಸಿರಾಜ್ ಅಲ್ಲ.. ಈ ಆಟಗಾರ!

ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ.ಭೂತೆ, ಸದಸ್ಯರುಗಳಾದ ವಿಶಾಲಾಕ್ಷಿ.ಅ. ಬೋಳಶೆಟ್ಟಿ ಹಾಗೂ ಪ್ರಭು .ಚ. ಹಿರೇಮಠ ಅವರು ದೂರುದಾರರು ಒದಗಿಸಿದ ದಾಖಲೆಗಳನ್ನು ಆಯೋಗ ಪರಿಶೀಲಿಸಿದಾಗ ಎದುರುದಾರರಿಂದ ಮಶೀನನ್ನು ಪಡೆದ ಬಗ್ಗೆ ಮತ್ತು ಹಣ ವರ್ಗಾಯಿಸಿದ ಬಗ್ಗೆ ದಾಖಲೆಗಳನ್ನು ಪರಿಗಣಿಸಿದೆ. ಮಶೀನ್ ಖರೀದಿಸಿದ ಕೆಲವೇ ದಿನದಲ್ಲಿ ಅದರಲ್ಲಿ ದೋಷಗಳು ಕಂಡು ಬಂದಿರುವುದರಿಂದ ಮತ್ತು ಎದುರುದಾರರು ರಿಪೇರಿ ಮಾಡಿದರೂ ಆ ದೋಷಗಳು ಸರಿಯಾಗದೇ ಇರುವುದರಿಂದ ಎದುರುದಾರರು ದೋಷಯುಕ್ತ ಹೈಡ್ರೋಪಾವರ್ ಮಶೀನ ದೂರುದಾರರಿಗೆ ಕೊಟ್ಟು ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಆಯೋಗವು ತನ್ನ ತೀರ್ಪಿನಲ್ಲಿ ಹೇಳಿದೆ.

ಇದನ್ನೂ ಓದಿ: ಈ 4 ರಾಶಿಗೆ ದೀಪಾವಳಿ ಮುಗಿಯುತ್ತಿದ್ದಂತೆ ಶುಕ್ರದೆಸೆ ಶುರು: ಮಹಾಲಕ್ಷ್ಮೀ ಒಲುಮೆಯಿಂದ ಅದೃಷ್ಟ-ಸಂಪತ್ತಿನ ಜೊತೆ ಕೈ ಸೇರಲಿದೆ ಸರ್ಕಾರಿ ನೌಕರಿ

ದೂರುದಾರರಿಗೆ ಆಗಿರುವ ತೊಂದರೆ ಮತ್ತು ವ್ಯವಹಾರಿಕ ನಷ್ಟ ಪರಿಗಣಿಸಿ ದೂರುದಾರರು ಹೇಳಿದಾಗ ಆ ಮಶೀನ ರಿಪೇರಿ ಮಾಡಿ ಅದು ಸರಿಯಾಗಿ ಕೆಲಸ ಮಾಡುವಂತೆ ನೋಡಿಕೊಳ್ಳಬೇಕೆಂದು ಆಯೋಗ ಎದುರುದಾರರಿಗೆ ತಿಳಿಸಿದೆ. ಮಶೀನಿಂದ ಆಯಿಲ್ ಸೋರುವಿಕೆ ಆಗಿ ದೂರುದಾರರಿಗೆ ಆದಂತಹ ನಷ್ಟಕ್ಕೆ ರೂ. 50,000/- ಪರಿಹಾರ ಕೊಡಲು ಆಯೋಗ ಆದೇಶಿಸಿದೆ. ಸೇವಾ ನ್ಯೂನ್ಯತೆಯಿಂದ ದೂರುದಾರರಿಗೆ ಆಗಿರುವ ಅನಾನುಕೂಲ ಹಾಗೂ ಮಾನಸಿಕ ತೊಂದರೆಗಾಗಿ ರೂ.50,000/-ಹಾಗೂ ಪ್ರಕರಣದ ಖರ್ಚು ವೆಚ್ಚ ಅಂತಾ ರೂ.10,000/- ಪರಿಹಾರವಾಗಿ ಒಂದು ತಿಂಗಳ ಒಳಗಾಗಿ ನೀಡುವಂತೆ ಎದುರುದಾರರಿಗೆ ಆಯೋಗ ತನ್ನ ತೀರ್ಪಿನಲ್ಲಿ ನಿರ್ದೇಶಿಸಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

\

Trending News