ಬೆಂಗಳೂರು: ಹಸಿರು ಇಂಧನ ಬಳಕೆಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ʼಸೋಲಾರ್ ರೂಫ್‌ ಟಾಪ್ ಹಂತ-02ʼ ಯೋಜನೆಗೆ ಬೆಸ್ಕಾಂ ಚಾಲನೆ ನೀಡಿದ್ದು, ಗ್ರಾಹಕರು ತಮ್ಮ ಮನೆಯ ಮೇಲ್ಛಾವಣಿಗಳಲ್ಲಿ ಸೋಲಾರ್‌ ಘಟಕಗಳ ಅಳವಡಿಕೆಗೆ ಉತ್ಸುಕರಾಗಿದ್ದಾರೆ.


COMMERCIAL BREAK
SCROLL TO CONTINUE READING

ಭಾರತ ಸರ್ಕಾರದ ನವ ಮತ್ತು ನವೀಕರಿಸಬಹುದಾದ ಇಂಧನ ಇಲಾಖೆಯು ಸೌರ ಘಟಕಗಳ ಸ್ಥಾಪನೆಗಾಗಿ, ಬೆಸ್ಕಾಂಗೆ 10 ಮೆಗಾ ವ್ಯಾಟ್‌ ಸಾಮರ್ಥ್ಯವನ್ನು ಹಂಚಿಕೆ ಮಾಡಿದ್ದು, ಯೋಜನೆಯಡಿಯಲ್ಲಿ   ಸೋಲಾರ್‌ ಘಟಕಗಳನ್ನು ಅಳವಡಿಸಿಕೊಳ್ಳಲು ಬೆಸ್ಕಾಂಗೆ 1500ಅರ್ಜಿಗಳು ಸಲ್ಲಿಕೆಯಾಗಿವೆ. ʼಸೌರ ಗೃಹʼ ಹೆಸರಿನಲ್ಲಿ ಬೆಸ್ಕಾಂ ವ್ಯಾಪ್ತಿಯಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.


ಗ್ರಾಹಕರು ಪಡೆದಿರುವ ವಿದ್ಯುತ್‌ ಸಾಮರ್ಥ್ಯಕ್ಕೆ ಅನುಗುಣವಾಗಿ ಸೋಲಾರ್‌ ಘಟಕಗಳನ್ನು ಅಳವಡಿಸಿ, ಸೌರ ವಿದ್ಯುತ್‌ ಅನ್ನು ಬಳಸಿಕೊಂಡು ಹೆಚ್ಚುವರಿ ವಿದ್ಯುತ್‌ ಅನ್ನು ಗ್ರಿಡ್‌ಗೆ ಮಾರಾಟ ಮಾಡಿ ಹಣಗಳಿಸುವ ಮಹತ್ವದ ಯೋಜನೆ ಇದಾಗಿದೆ. ಇದಕ್ಕಾಗಿ ನೆಟ್‌ ಮೀಟರ್‌ ಅನ್ನು ಗ್ರಾಹಕರು ಅಳವಡಿಸಿಕೊಳ್ಳಬೇಕಾಗುತ್ತದೆ.


ಯೋಜನೆಯನ್ನು ಬೆಸ್ಕಾಂ ವ್ಯಾಪ್ತಿಯಲ್ಲಿ ಕಾರ್ಯಗತಗೊಳಿಸಲು ಶೀಘ್ರವೇ ಕ್ರಮ ಕೈಗೊಳ್ಳಬೇಕು ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್‌ ಕುಮಾರ್‌ ಅವರು ಇತ್ತೀಚೆಗೆ ನಡೆದ ಇಂಧನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದ್ದರು.


ಇದನ್ನೂ ಓದಿ: ಹಾಲಿ ಶಾಸಕರಿಗೆ ಟಿಕೆಟ್ ಫಿಕ್ಸ್...! ಬಿಜೆಪಿ, ಜೆಡಿಎಸ್ ಗೂ ಮೊದಲೇ ಪಟ್ಟಿ ರಿಲೀಸ್ ಮಾಡಿದ ಕಾಂಗ್ರೆಸ್


ಸೌರ ಗೃಹ ಯೋಜನೆಯ ಉಪಯೋಗ ಪಡೆಯುವ ಗ್ರಾಹಕರಿಗೆ ಗರಿಷ್ಟ 3 ಕಿ.ವ್ಯಾ. ಸಾಮರ್ಥ್ಯದ ಸೋಲಾರ್ ಘಟಕಗಳಿಗೆ ಶೇ. 40 ರಷ್ಟು ಸಹಾಯಧನ, 3 ಕಿ.ವ್ಯಾ ಸಾಮಾರ್ಥ್ಯಕ್ಕಿಂತ ಹೆಚ್ಚು ಮತ್ತು            10 ಕಿ. ವ್ಯಾ ಸಾಮಾರ್ಥ್ಯದವರೆಗಿನ ಸೋಲಾರ್ ಘಟಕಗಳಿಗೆ ಶೇ. 40 ಜತೆಗೆ ಶೇ.20ರಷ್ಟು ಹೆಚ್ಚುವರಿ ಸಹಾಯಧನವನ್ನು ಕೇಂದ್ರ ಸರ್ಕಾರದಿಂದ ನೀಡಲಾಗುವುದು ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.


ವಸತಿ ಸಮುಚ್ಛಯಗಳ ಮೇಲ್ಛಾವಣಿಗಳ  ಸಾಮಾನ್ಯ (ಕಾಮನ್‌ ಏರಿಯಾ ಮಾತ್ರ) ಸೌಲಭ್ಯಗಳಾದ ಲಿಫ್ಟ್‌, ಮೋಟರ್‌ ಮತ್ತು ಲೈಟ್‌ಗಳಿಗೆ  ಸೋಲಾರ ಘಟಕಗಳ ಸ್ಥಾಪನೆಯ ಸಾಮಾರ್ಥ್ಯವನ್ನು                  ಗರಿಷ್ಟ 500 ಕಿ.ವ್ಯಾ ಸೀಮಿತಗೊಳಿಸಲಾಗಿದೆ ಎಂದು ಬೆಸ್ಕಾಂ ಎಂಡಿ ತಿಳಿಸಿದರು.


ಬೆಸ್ಕಾಂನಲ್ಲಿ ನೋಂದಣಿಗೊಂಡಿರುವ (ಎಂಪ್ಯಾನಲ್ಡ್‌) ಏಜೆನ್ಸಿಗಳ ಮೂಲಕ ಸೋಲಾರ್‌ ಪ್ಯಾನೆಲ್‌ ಗಳನ್ನು ಅಳವಡಿಸಿಕೊಳ್ಳಬಹುದಾಗಿದೆ.  ಜೊತೆಗೆ ಸೋಲಾರ್‌ ಘಟಕಗಳನ್ನು ಅಳವಡಿಸಿ 5 ವರ್ಷಗಳ ಅವಧಿಗೆ ಏಜೆನ್ಸಿಗಳು ನಿರ್ವಹಣೆ ಮಾಡಬೇಕಾಗಿದೆ.


ಯೋಜನೆ ಅನುಷ್ಠಾನ ಹೇಗೆ?: ಸೌರ ಗೃಹ ಯೋಜನೆ ಪ್ರಯೋಜನ ಪಡೆಯಲು ಗ್ರಾಹಕರಿಗೆ ಎರಡು ಆಯ್ಕೆಗಳನ್ನು ನೀಡಲಾಗಿದೆ. ನವ ಮತ್ತು ನವೀಕರಿಸಬಹುದಾದ ಇಂಧನ ಇಲಾಖೆಯು ಯೋಜನೆ ಅನುಷ್ಠಾನವನ್ನು ಸರಳೀಕರಣಗೊಳಿಸಿದ್ದು, ಇಲಾಖೆ ಅಭಿವೃದ್ದಿ ಪಡಿಸಿರುವ ವೆಬ್ ಸಲೆ https://solarrooftop.gov.in ಮುಖಾಂತರ ಗ್ರಾಹಕರು ಅರ್ಜಿ  ಸಲ್ಲಿಸಬಹುದಾಗಿದೆ.


ಕೇಂದ್ರ ಸರ್ಕಾರದ ವೆಬ್‌ ಸೈಟ್‌ ಮೂಲಕ ಅರ್ಜಿ ಸಲ್ಲಿಸಿದರೆ, ಯೋಜನೆ ಅನುಷ್ಠಾನ ಇನ್ನಷ್ಟು ಸರಳ. ಸರಕಾರದ ಸಹಾಯಧನ ನೇರವಾಗಿ ಗ್ರಾಹಕರ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗುತ್ತದೆ. ಇಲಾಖೆಯಲ್ಲಿ ಎಂಪ್ಯಾನಲ್ಡ್‌ ಗೊಂಡಿರುವ ಏಜೆನ್ಸಿಗಳನ್ನು ಸಂಪರ್ಕಿಸಿ , ಸೋಲಾರ್‌ ಪ್ಯಾನೆಲ್‌ ಗಳನ್ನು ಗ್ರಾಹಕರು ತಮ್ಮ ಮನೆಯ ಮೇಲ್ಛಾವಣಿಗಳಲ್ಲಿ ಅಳವಡಿಸಿಕೊಳ್ಳಬಹುದಾಗಿದೆ.


ಹಾಗೆಯೇ ಬೆಸ್ಕಾಂನಲ್ಲಿ ನೋಂದಣಿಗೊಂಡಿರುವ ಏಜೆನ್ಸಿಗಳ ಮೂಲಕ ಸೋಲಾರ್‌ ಫಲಕಗಳನ್ನು ಅಳವಡಿಸಿಕೊಳ್ಳಲು https://bescom.karnataka.gov.in/ ಮೂಲಕ ಗ್ರಾಹಕರು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಬೆಸ್ಕಾಂ ಎಂಡಿ ತಿಳಿಸಿದ್ದಾರೆ.


ಬೆಸ್ಕಾಂ ಪೋರ್ಟಲ್‌ ಮೂಲಕ ಅರ್ಜಿ ಸಲ್ಲಿಸಿ ಸೋಲಾರ್‌ ಪ್ಯಾನಲ್‌ ಗಳನ್ನು ನೆಟ್‌ ಮೀಟರ್‌ ಅಡಿಯಲ್ಲಿ ಅಳವಡಿಸಿಕೊಂಡರೆ, ಕೇಂದ್ರ ಸರ್ಕಾರದಿಂದ ಬರುವ ಸಹಾಯಧನವನ್ನು ಬೆಸ್ಕಾಂ ನೇರವಾಗಿ ಸೋಲಾರ್‌ ಘಟಕ ಅಳವಡಿಸಿದ ಏಜೆನ್ಸಿಗೆ ಪಾವತಿಸುತ್ತದೆ, ಗ್ರಾಹಕರು ಸಹಾಯಧನ ಮೊತ್ತವನ್ನು ಬಿಟ್ಟು, ಉಳಿದ ಹಣವನ್ನು ಸಂಬಂಧಿಸಿದ ಏಜೆನ್ಸಿಗಳಿಗೆ ಪಾವತಿಸಬೇಕು ಎಂದು ಮಹಾಂತೇಶ ಬೀಳಗಿ ವಿವರಿಸಿದರು.


ವೆಬ್ ಪೋರ್ಟಲ್‌ ಮೂಲಕ ಗ್ರಾಹಕರಿಗೆ ಸೋಲಾರ್ ಮೇಲ್ಛಾವಣಿ ಘಟಕಗಳನ್ನು ಅಳವಡಿಸಲು ಬೆಸ್ಕಾಂನಲ್ಲಿ ಎಂಪ್ಯಾನಲ್ಡ್‌ ಆಗಿರುವ ಏಜೆನ್ಸಿಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.


ಭಾರತ ಸರ್ಕಾರದ ನವ ಮತ್ತು ನವೀಕರಿಸಬಹುದಾದ ಇಂಧನ ಇಲಾಖೆಯು ಜೂನ್‌ 10, 2022 ರಂದು ಯೋಜನೆ ಜಾರಿಗೆ ಸರಳೀಕೃತ ವಿಧಾನ  ಜಾರಿಗೊಳಿಸಿ ಆದೇಶ ಹೊರಡಿಸಿರುತ್ತದೆ.


ನೋಂದಾಯಿತ  ಏಜೆನ್ಸಿಗಳು ಫಲಾನುಭವಿಗಳ ಸೋಲಾರ್‌ ಪ್ಯಾನಲ್‌ ಸಾಮರ್ಥ್ಯವನ್ನು ನಿರ್ಣಯಿಸಲು ಸ್ಥಳ ಸಮೀಕ್ಷೆಯನ್ನು ಮಾಡಿ ಸೋಲಾರ ಘಟಕಗಳ ಸಾಮಾರ್ಥ್ಯವನ್ನು  ನಿಗದಿಪಡಿಸುತ್ತಾರೆ. ಫಲಾನುಭವಿಗಳ ಮನೆಯ ಮೇಲ್ಛಾವಣಿಯಲ್ಲಿ ಅಳವಡಿಸಬಹುದಾದ ಸೋಲಾರ್‌ ಪ್ಯಾನಲ್‌ ಸಾಮರ್ಥ್ಯದ ಕುರಿತು ಗ್ರಾಹಕರಿಗೆ (ಫಲಾನುಭವಿಗೆ) ಅಗತ್ಯ ಮಾರ್ಗದರ್ಶನ ನೀಡುತ್ತಾರೆ. ಹಾಗೆಯೆ ಯೋಜನೆಯನ್ನು ಪಡೆಯಲು ಬೇಕಾಗುವ ಅಗತ್ಯ ಅನುಮೋದನೆ, ನೆಟ್-ಮೀಟರ್ ಅಳವಡಿಕೆ ಮತ್ತು ಬೆಸ್ಕಾಂ ಅಧಿಕಾರಿಗಳಿಂದ ತಪಾಸಣೆ ನಡೆಸಲು ಸಹಾಯ ಮಾಡತ್ತಾರೆ.


ಇದನ್ನೂ ಓದಿ: "ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಾದರೆ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು"


ಯಾವುದೇ ಏಜೆನ್ಸಿಯ ಪ್ರತಿನಿಧಿಗಳು ಗ್ರಾಹಕರನ್ನು ತಪ್ಪುದಾರಿಗೆಳೆಯುವ ಮಾಹಿತಿಯನ್ನು ಒದಗಿಸಿದರೆ ಅಥವಾ ಪೋರ್ಟಲ್‌ ನಲ್ಲಿ ಉಲ್ಲೇಖಿಸಿರುವ ಷರತ್ತುಗಳನ್ನು ಉಲ್ಲಂಘಿಸಿದರೆ ಅವರನ್ನು ಕಪ್ಪುಪಟ್ಟಿಗೆ ಸೇರಿಸುವುದು ಮತ್ತು ಬ್ಯಾಂಕ್‌ ಗ್ಯಾರಂಟಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಮತ್ತು  ಏಜೆನ್ಸಿಯ ವಿರುದ್ದ ಎಸ್ಕಾಂಗಳು ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.


ಕೇಂದ್ರ ಸರ್ಕಾರದ ನವ ಮತ್ತು ನವೀಕರಿಸಬಹುದಾದ ಇಂಧನ ಇಲಾಖೆಯು, ಸೌರ ಮೇಲ್ಛಾವಣಿ ಘಟಕಗಳಿಂದ ಉತ್ಪಾದಿಸಲು ಉದ್ದೇಶಿಸಿರುವ  40  ಗಿಗಾ ವ್ಯಾಟ್ ಸಾಮರ್ಥ್ಯದಲ್ಲಿ 4 ಗಿಗಾ ವ್ಯಾಟ್ (4000 ಮೆಗಾ ವ್ಯಾಟ್‌)ನಷ್ಟು ವಿದ್ಯುತ್ ಅನ್ನು  ಗೃಹ ಬಳಕೆಯ ಗ್ರಾಹಕರ ಮೇಲ್ಛಾವಣಿಗಳಿಂದ ಉತ್ಪಾದಿಸಲು ಉದ್ದೇಶಿಸಲಾಗಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.