ಬೆಂಗಳೂರು: ಗ್ರಾಮೀಣ ಭಾಗದ ಗ್ರಾಹಕರ ವಿದ್ಯುತ್ ಸಂಬಂಧಿತ ಸಮಸ್ಯೆಗಳ ಶೀಘ್ರ ಪರಿಹಾರಕ್ಕಾಗಿ ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳ 87 ಹಳ್ಳಿಗಳಲ್ಲಿ ಶನಿವಾರ ಆಯೋಜಿಸಿದ್ದ ವಿದ್ಯುತ್ ಅದಾಲತ್‍ನಲ್ಲಿ 2513  ಗ್ರಾಹಕರು ಭಾಗವಹಿಸಿ  911  ಮನವಿಗಳನ್ನು ಸಲ್ಲಿಸಿದರು. ಗ್ರಾಹಕರಿಂದ ಸ್ವೀಕೃತವಾದ 755 ಮನವಿಗಳ ಪೈಕಿ 263 ಮನವಿಗಳಿಗೆ ಬೆಸ್ಕಾಂ ಅಧಿಕಾರಿಗಳು ಸ್ಥಳದಲ್ಲೇ ಪರಿಹಾರ ಒದಗಿಸಿದ್ದಾರೆ. ಇನ್ನುಳಿದ 492 ಮನವಿಗಳನ್ನು ಮುಂದಿನ ಕ್ರಮಕ್ಕಾಗಿ ಮೇಲಾಧಿಕಾರಿಗಳಿಗೆ ರವಾನಿಸಿದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ : Cyber Crime Cases: ಸೈಬರ್ ಖದೀಮರ ಪತ್ತೆ ಹಚ್ಚುವಲ್ಲಿ ಖಾಕಿ ವಿಫಲ: ಶೇ.10 ರಷ್ಟು ಮಾತ್ರ ಕೇಸ್ ಭೇದಿಸಿದ ಪೊಲೀಸರು


ಬೆಸ್ಕಾಂನ ನಿರ್ದೇಶಕ (ತಾಂತ್ರಿಕ) ಡಿ, ನಾಗಾರ್ಜುನ ಅವರು ತುಮಕೂರು ಜಿಲ್ಲೆಯ ಬೆಸ್ಕಾಂನ ಕುಣಿಗಲ್  ಉಪ ವಿಭಾಗದಲ್ಲಿ ನಡೆದ ಅದಾಲತ್ ನಲ್ಲಿ ಭಾಗವಹಿಸಿ,  ಗ್ರಾಹಕರ ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು ಅವರ ಬಳಿಗೆ ಹೋಗಿ ಆಲಿಸಿ ಸ್ಥಳದಲ್ಲೇ ಪರಿಹಾರ ಸೂಚಿಸುವುದೇ ವಿದ್ಯುತ್ ಅದಾಲತ್ ನ ಮುಖ್ಯ ಉದ್ದೇಶವಾಗಿದೆ ಎಂದರು.


ಇದು 7ನೇ ವಿದ್ಯುತ್ ಅದಾಲತ್ ಆಗಿದ್ದು ಪ್ರತಿ ತಿಂಗಳ ಮೂರನೇ ಶನಿವಾರದಂದು ವಿದ್ಯುತ್ ಅದಾಲತ್ ಅನ್ನು ಆಯೋಜಿಸಲಾಗುತ್ತಿದೆ. ಈ ಬಾರಿಯ ವಿದ್ಯುತ್ ಅದಾಲತ್ ನಲ್ಲಿ ಗ್ರಾಹಕರಿಂದ ಬೆಸ್ಕಾಂ ಅಧಿಕಾರಿಗಳು  ದೂರುಗಳನ್ನು ಸ್ವೀಕರಿಸಿ, ಕೆಲವು ಮನವಿಗಳನ್ನು ಸ್ಥಳದಲ್ಲೇ ವಿಲೇವಾರಿ ಮಾಡಿದ್ದಾರೆ.


ಇದನ್ನೂ ಓದಿ : ಗ್ರಾಮ ವಾಸ್ತವ್ಯ ಮಾಡುವ ಹಳ್ಳಿಗಳ ಅಭಿವೃದ್ಧಿಗೆ 1 ಕೋಟಿ ರೂ.ಗಳನ್ನು ಮಂಜೂರು: ಸಿಎಂ ಬೊಮ್ಮಾಯಿ 


ಅದಾಲತ್ ನಲ್ಲಿ ಗ್ರಾಹಕರು ಬಿಲ್ಲಿಂಗ್ ಸಮಸ್ಯೆಗಳು, ವಿದ್ಯುತ್ ಸಂಪರ್ಕ ನೀಡುವಲ್ಲಿ ವಿಳಂಬ, ವಿದ್ಯುತ್ ವ್ಯತ್ಯಯ, ಪರಿವರ್ತಕ ಸಮಸ್ಯೆಗಳು, ವಿದ್ಯುತ್ ಕಳ್ಳತನ, ವಿದ್ಯುತ್ ಮಾರ್ಗದಲ್ಲಿರುವ ಲೋಪಗಳು, ಹೆಚ್ಚುವರಿ ಕಂಬಗಳಿಗೆ ಬೇಡಿಕೆ ಹಾಗೂ ಇನ್ನಿತರ ಸಮಸ್ಯೆಗಳ ಕುರಿತು ಅಧಿಕಾರಿಗಳಿಗೆ ಮನವಿ ನೀಡಿದರು. 


ವಿದ್ಯುತ್ ಅದಾಲತ್ ನಲ್ಲಿ ಬೆಸ್ಕಾಂ ನಿಗಮ ಕಚೇರಿಗಳ ಅಧಿಕಾರಿಗಳು ಭಾಗವಹಿಸಿದ್ದು, ಸಂಸ್ಥೆಯು ಗ್ರಾಹಕರಿಗೆ ನೀಡುತ್ತಿರುವ ಯೋಜನೆಗಳು ಮತ್ತು ಸೇವೆಗಳ ಕುರಿತು ಮಾಹಿತಿ ನೀಡಿದರು ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.