ಚಾಮರಾಜನಗರ: ಕಾಂಗ್ರೆಸ್ ಅವಧಿಯಲ್ಲಿ ಪ್ರತಿಷ್ಠಿತರಿಗೆ ಮಾತ್ರ ಭಾರತ ರತ್ನ ಸಿಗುತ್ತಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಅವಧಿಯಲ್ಲಿ ಪ್ರತಿಭಾವಂತರಿಗೆ ಭಾರತರತ್ನ ನೀಡಲಾಗುತ್ತಿದೆ ಎಂದು ಬಿಜೆಪಿ ಉಪಾಧ್ಯಕ್ಷ ಎನ್‌.ಮಹೇಶ್ ಹೇಳಿದರು.


COMMERCIAL BREAK
SCROLL TO CONTINUE READING

ಚಾಮರಾಜನಗರ: ಚಾಮರಾಜನಗರದಲ್ಲಿ ಮಾಧ್ಯಮವರೊಂದಿಗೆ ಅವರು ಮಾತನಾಡಿ, ಕಾಂಗ್ರೆಸ್ ಅವಧಿಯಲ್ಲಿ ನೆಹರೂ, ಇಂದಿರಾಗಾಂಧಿ, ರಾಜೀವ್ ಗಾಂಧಿ ಸೇರಿದಂತೆ ಪ್ರತಿಷ್ಠಿತರಿಗೆ ಭಾರತರತ್ನ ಸಿಗುತ್ತಿತ್ತು. ರಾಮಮಂದಿರ ನಿರ್ಮಾಣಕ್ಕೆ ಬುನಾದಿ ಹಾಕಿದ ಎಲ್.ಕೆ.ಅಡ್ವಾನಿ ಅವರಿಗೆ ಭಾರತರತ್ನ, ರಾಮಮಂದಿರ ವಿರೋಧಿಸಿದ ಮುಲಾಯಂ ಸಿಂಗ್ ಅವರಿಗೆ ಪದ್ಮ ಪ್ರಶಸ್ತಿ, ಸಮಾಜವಾದಿ ಹಿನ್ನೆಲೆಯ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ನೀಡಲಾಗಿದೆ ಎಂದು ಹೇಳಿದರು.


ಮಂದಿರವನ್ನು ಅಲ್ಲೆ ಕಟ್ಟುವೆವು ಎಂಬ ಘೋಷವಾಕ್ಯಕ್ಕೆ ಬುನಾದಿ ಹಾಕಿದ, ಜನಾಂದೋಲನವಾಗಿ ರೂಪಿಸಿದ ಅಡ್ವಾನಿ ಅವರ ಶ್ರಮಕ್ಕೆ, ಕಾರ್ಯಕ್ಕೆ ಭಾರತರತ್ನ ನೀಡುವ ಮೂಲಕ ಸೂಕ್ತ ಗೌರವ ನೀಡಲಾಗಿದೆ ಎಂದರು. 


ಇದನ್ನೂ ಓದಿ: Wi-Fi Router: ರಾತ್ರಿ ಮಲಗುವ ಮುನ್ನ Wi-Fi ರೂಟರ್ ಆಫ್ ಮಾಡಲ್ವಾ? ಇದೆಷ್ಟು ಡೇಂಜರಸ್ ಗೊತ್ತಾ?


ಬಿಜೆಪಿ ಕಾರ್ಯಕಾರಿಣಿ: 


ಇಂದು ಚಾಮರಾಜನಗರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕಾರ್ಯಕಾರಿಣಿ ಸಭೆ ನಡೆಯಿತು. ಈ ಕುರಿತು, ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್‌.ನಿರಂಜನಕುಮಾರ್ ಮಾತನಾಡಿ, ರಾಮಮಂದಿರ ನಿರ್ಮಾಣ ಮಾಡಿದ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುವ ಅಭಿನಂದಾನ ನಿರ್ಣಯ ಕೈಗೊಳ್ಳಲಾಯಿತು. ಜೊತೆಗೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ರೈತ ವಿರೋಧಿ, ದಲಿತ ವಿರೋಧಿಯಾಗಿ ಆಡಳಿತ ನಡೆಸುತ್ತಿರುವುದಕ್ಕೆ ರೈತ, ದಲಿತ ವಿರೋಧಿ ಸಿದ್ದರಾಮಯ್ಯ ಸರ್ಕಾರ ಎಂದು ಖಂಡನಾ ನಿರ್ಣಯ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.


ಕಾರ್ಯಕಾರಿಣಿ ನಡೆಯುವಾಗಲೇ ಅಡ್ವಾನಿ ಅವರಿಗೆ ಭಾರತರತ್ನ ಘೋಷಿಸಿದ ವಿಚಾರ ತಿಳಿದುಬಂದಿತು. ರಾಮ ಮಂದಿರ ನಿರ್ಮಾಣ ಮಾಡಲು ದೊಡ್ಡ ಹೋರಾಟವನ್ನೇ ರೂಪಿಸಿದ ಅಡ್ವಾನಿ ಅವರಿಗೆ ಭಾರತ ರತ್ನ ನೀಡಿರುವುದು ಸಂತೋಷದ ಸಂಗತಿ ಎಂದರು.


ಇದನ್ನೂ ಓದಿ: ಲೋಕಸಭೆ ಚುನಾವಣೆಗೂ Voter ID Card Correction  ಮಾಡಿಸಬೇಕೆ ? ಇಲ್ಲಿದೆ  ಆನ್‌ಲೈನ್ ಪ್ರಕ್ರಿಯೆಯ ಹಂತ ಹಂತದ ವಿವರ 


ಡಿಕೆಶಿ ಹೇಳಿಕೆ ಖಂಡಿಸಿ ಪ್ರತಿಭಟನೆ: 


ಪ್ರತ್ಯೇಕ ರಾಷ್ಟ್ರ ವಿಚಾರ ಖಂಡಿಸಿ ಇಂದು ಸಂಜೆ ಬಿಜೆಪಿ ನಾಯಕರು ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದರು. ಮಾಜಿ ಶಾಸಕರಾದ ಎನ್.ಮಹೇಶ್, ಬಾಲರಾಜು, ನಿರಂಜನಕುಮಾರ್ ನೇತೃತ್ವದಲ್ಲಿ ಚಾಮರಾಜೇಶ್ವರ ದೇಗುಲದಿಂದ ಭುವನೇಶ್ವರಿ ವೃತ್ತದ ತನಕ ಪ್ರತಿಭಟನಾ ಮೆರವಣಿಗೆ ನಡೆಸಿ ರಾಷ್ಟ್ರೀಯ ಹೆದ್ದಾರಿ ತಡೆದು ಆಕ್ರೋಶ ಹೊರಹಾಕಿದರು‌. 


ಮಾನವ ಸರಪಳಿ ನಿರ್ಮಿಸಿ ಕಾಂಗ್ರೆಸ್ ನಾಯಕರು ಹಾಗೂ ಡಿಕೆಸು ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಡಿ‌.ಕೆ.ಸುರೇಶ್ ವಿರುದ್ಧ ಶಿಸ್ತು ಸಮಿತಿ ಕ್ರಮ ಕೈಗೊಳ್ಳಬೇಕು, ಸಂಸತ್ತಿನಲ್ಲಿ ಅವರು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.