ಸ್ವಯಂ ನಿವೃತ್ತಿ ಬಳಿಕ ಭಾವನಾತ್ಮಕ ಟ್ವೀಟ್; ರಾಜಕೀಯಕ್ಕೆ ಬರ್ತಾರಾ ಭಾಸ್ಕರ್ ರಾವ್?
2021ರ ಸೆಪ್ಟೆಂಬರ್‌ನಲ್ಲಿ ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದ ಭಾಸ್ಕರ್ ರಾವ್ ಅವರು ಸರ್ಕಾರ ತಮ್ಮ ಮನವಿಯನ್ನು ಕೂಡಲೇ ಪರಿಗಣಿಸಬೇಕು ಎಂದು ಕೋರಿದ್ದರು.
ಬೆಂಗಳೂರು: ರೈಲ್ವೆ ವಿಭಾಗದ ಎಡಿಜಿಪಿ ಭಾಸ್ಕರ್ ರಾವ್ ಸ್ವಯಂ ನಿವೃತ್ತಿ(Bhaskar Rao Self-Retirement) ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೇಂದ್ರ ಸರ್ಕಾರ ಅಂಗೀಕರಿಸಿದೆ. ಈ ಬಗ್ಗೆ ಭಾವನಾತ್ಮಕವಾಗಿ ಟ್ವೀಟ್ ಮಾಡಿರುವ ಭಾಸ್ಕರ್ ರಾವ್ ‘ಆಫೀಸ್‍ನಿಂದ ಮನೆಯ ಕಡೆ ಕೊನೆಯ ಟ್ರಿಪ್’ ಎಂದು ಸಿಬ್ಬಂದಿ ಜೊತೆಗಿನ ಫೋಟೊ ಹಂಚಿಕೊಂಡಿದ್ದಾರೆ.
‘ಐಪಿಎಸ್‌ನಲ್ಲಿ 32 ವರ್ಷಗಳ ಸೇವೆ ಮುಗಿಸಿದ ನಂತರ ಆಫೀಸ್‍ನಿಂದ ಮನೆಗೆ ನನ್ನ ಕೊನೆಯ ಪ್ರವಾಸ. ನನ್ನ ಸಾರ್ವಜನಿಕ ಜೀವನದಲ್ಲಿ ಇಷ್ಟು ವರ್ಷಗಳ ಕಾಲ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟ ಕರ್ನಾಟಕದ ಜನತೆಗೆ, ನನ್ನ ಎಲ್ಲಾ ಸಹೋದ್ಯೋಗಿಗಳು, ಸ್ನೇಹಿತರು, ಹಿರಿಯರು ಮತ್ತು ಯುವಜನರಿಗೆ ಧನ್ಯವಾದಗಳು. ಪಕ್ಷಾತೀತವಾಗಿ ವಿವಿಧ ಪಕ್ಷಗಳ ಆಡಳಿದಲ್ಲಿದ್ದ ಸರ್ಕಾರಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿದ್ದಕ್ಕೆ ನಾನು ಕೃತಜ್ಞತೆಯನ್ನು ಸಲ್ಲಿಸುತ್ತೇನೆ’ ಎಂದು ಅವರು ಟ್ವೀಟ್(Bhaskar Rao Emotional Tweet) ಮಾಡಿದ್ದಾರೆ.
‘ಕುಮಾರಸ್ವಾಮಿ ರಾಜಕೀಯ ಜೀವನವೇ ಡ್ರಾಮಾ, ಅವರ ಕುಟುಂಬವೇ ದೊಡ್ಡ ಡ್ರಾಮಾ ಕಂಪನಿ’
2021ರ ಸೆಪ್ಟೆಂಬರ್‌ನಲ್ಲಿ ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದ ಭಾಸ್ಕರ್ ರಾವ್(Bhaskar Rao) ಅವರು ಸರ್ಕಾರ ತಮ್ಮ ಮನವಿಯನ್ನು ಕೂಡಲೇ ಪರಿಗಣಿಸಬೇಕು ಎಂದು ಕೋರಿದ್ದರು. ಆದರೆ, ಕಳೆದ 7 ತಿಂಗಳಿಂದ ಕೇಂದ್ರವು ಸ್ವಯಂ ನಿವೃತ್ತಿ ಅನುಮೋದನೆ ನೀಡಿರಲಿಲ್ಲ. 1954ರಲ್ಲಿ ಜನಿಸಿದ ಭಾಸ್ಕರ್ ರಾವ್ 1990ರ ಬ್ಯಾಚ್‌ನ ಐಪಿಎಸ್ ಅಧಿಕಾರಿ(IPS Officer). 2019-20ರ ಅವಧಿಯಲ್ಲಿ ಬೆಂಗಳೂರು ನಗರದ ಪೊಲೀಸ್ ಆಯುಕ್ತರಾಗಿದ್ದರು. ರಾಜ್ಯ ಮೀಸಲು ಪೊಲೀಸ್ ಪಡೆ, ಆಂತರಿಕ ಭದ್ರತಾ ವಿಭಾಗ ಸೇರಿ ವಿವಿಧೆಡೆ ಕಾರ್ಯ ನಿರ್ವಹಿಸಿದ್ದರು.
ಭಾಸ್ಕರ್ ರಾವ್ ರಾಜಕೀಯಕ್ಕೆ!?
ಸ್ವಯಂ ನಿವೃತ್ತಿ ಬಳಿಕ ಭಾವನಾತ್ಮಕ ಟ್ವೀಟ್ ಮಾಡಿರುವ ಭಾಸ್ಕರ್ ರಾವ್ ಪಾಲಿಟಿಕ್ಸ್‍ಗೆ ಎಂಟ್ರಿ ಕೊಡುತ್ತಾರೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ. ಆದರೆ, ಬಾಸ್ಕರ್ ರಾವ್(Bhaskar Rao) ಈ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂಬುದು ಆಪ್ತ ವಲಯದ ಮಾತು. ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಭಾಸ್ಕರ್ ರಾವ್ ಅವರು ಆಮ್ ಆದ್ಮಿ ಪಕ್ಷ(Aam Aadmi Party)ಕ್ಕೆ ಸೇರಿ ಸ್ಪರ್ಧಿಸಲಿದ್ದಾರೆ ಅನ್ನೋ ಮಾತುಗಳು ಕೂಡ ಹರಿದಾಡುತ್ತಿವೆ. ಇದಕ್ಕೆ ಅವರೇ ಸ್ಪಷ್ಟನೆ ನೀಡಬೇಕಾಗಿದೆ.
ಇದನ್ನೂ ಓದಿ: ‘ಕರ್ನಾಟಕ ನಮ್ಮದು, ಧರ್ಮದ ಹೆಸರಿನಲ್ಲಿ ಜನರನ್ನು ಒಡೆಯುವ ದ್ರೋಹಿಗಳದ್ದಲ್ಲ’
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.