ಬೆಂಗಳೂರು: ಮೊದಲ ಬಾರಿ ಗೆದ್ದ 22 ಶಾಸಕರ ಜೊತೆ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯಕ್ಕೆ ನಾಯಕರನ್ನು ಹೊರಗಿಟ್ಟು ಸಭೆ ನಡೆಸಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ವಿರೋಧಿ ಬಿಜೆಪಿ ಅಲ್ಲ, ಆರ್ ಎಸ್ ಎಸ್..! -ಬಿ.ಕೆ. ಹರಿಪ್ರಸಾದ್
ನಗರದ ಕೆಪಿಸಿಸಿ (KPCC) ಕಚೇರಿಯಲ್ಲಿ ಕಾರ್ಯಕರ್ತರನ್ನ ಉದ್ದೇಶಿಸಿ ಭಾಷಣ ಮುಗಿಸಿ, 22 ಚೊಚ್ಚಲ ಶಾಸಕರ ಸಭೆ ನಡೆಸಿದ ರಾಹುಲ್ ಗಾಂಧಿ, ಪಕ್ಷದಲ್ಲಿ ಏನು ಸಮಸ್ಯೆಯಿದೆ.ಯಾವ ಬದಲಾವಣೆ ಆಗಬೇಕು ಎಂದು ಮಾಹಿತಿ ಪಡೆದಿದ್ದಾರೆ. ಇದರ ಜೊತೆ ನೂತನ ಶಾಸಕರು ಆತ್ಮ ವಿಶ್ವಾಸದಿಂದ ಇರೀ,ಬಿಜೆಪಿ ಕಮ್ಯೂನಲ್ ವಿಷಯಗಳಿಗೆ ಎದೆ ಗುಂದಬೇಡಿ ಎಂದು ಧೈರ್ಯ ತುಂಬಿದ್ದಾರೆ.
ಇದನ್ನೂ ಓದಿ: ವಿಎಚ್‌ಪಿ ಅಲ್ಲ ‘ವಿಶ್ವ ವಿನಾಶಕ ಪರಿಷತ್': ಧರ್ಮೋದ್ಧಾರದ ಸೋಗಿನಲ್ಲಿ ಅಶಾಂತಿ ಸೃಷ್ಟಿ- ಎಚ್ಡಿಕೆ
ಎಲ್ಲಾ ಶಾಸಕರಿಗೆ ಮಾತನಾಡಲು ಅವಕಾಶ ನೀಡಿದ ರಾಹುಲ್ ಗಾಂಧಿ (Rahul Gandhi), ಶಾಸಕರು ಏನೆಲ್ಲಾ ಸಮಸ್ಯೆ ಹಾಗೂ ಸವಾಲುಗಳನ್ನ ಎದುರಿಸುತ್ತಿದ್ದಾರೆ.ಇದಕ್ಕೆ ಪಕ್ಷ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಿದೆ ಎಂದು ತಿಳಿದುಕೊಂಡಿದ್ದಾರೆ. ಇದಲ್ಲದೆ ರಾಹುಲ್ ಗಾಂಧಿ ಶಾಸಕರಿಗೆ ನಮ್ಮ ಸೈದ್ಧಾಂತಿಕ ನಿಲುವುಗಳನ್ನು ಪ್ರತಿಪಾದಿಸಿ.ಮತ್ತೊಂದು ಬಾರಿ ಗೆಲ್ಲಲು ತಯಾರಿ ನಡೆಸಿ ಎಂದು ಕಿವಿಮಾತು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.