Income Tax ಇಲಾಖೆಯಿಂದ ಭಾರಿ ಯಡವಟ್ಟು; ಒಂದೇ ಹೆಸರಿನ ಇಬ್ಬರು ವ್ಯಕ್ತಿಗಳಿಗೆ ಒಂದೇ ಪ್ಯಾನ್ ಕಾರ್ಡ್ ನಂಬರ್...!
ಸಾಮಾನ್ಯವಾಗಿ ಹಣಕಾಸಿನ ವಹಿವಾಟು ಹಾಗೂ ತೆರಿಗೆ ವಿಚಾರವಾಗಿ ನಿಗಾ ಇಡಲು ಆದಾಯ ತೆರಿಗೆ ಇಲಾಖೆ ಪ್ರತಿಯೊಬ್ಬರಿಗೆ ಪ್ಯಾನ್ ಕಾರ್ಡ್ ನನ್ನು ನೀಡುತ್ತದೆ,ಆದರೆ ಈಗ ಇಬ್ಬರು ಭಿನ್ನ ವ್ಯಕ್ತಿಗಳಿಗೆ ಒಂದೇ ಪ್ಯಾನ್ ಕಾರ್ಡ್ ನೀಡುವುದರ ಜೊತೆಗೆ ಜನ್ಮ ದಿನಾಂಕ, ಹಾಗೂ ಹೆಸರನ್ನು ಕಾರ್ಡ್ ನಲ್ಲಿ ಒಂದೇ ತೆರನಾಗಿ ಉಲ್ಲೇಖಿಸುವ ಮೂಲಕ ಆದಾಯ ತೆರಿಗೆ ಇಲಾಖೆ ಭಾರಿ ಯಡವಟ್ಟು ಮಾಡಿದೆ.
ಬೆಂಗಳೂರು : ನಾವು ಆಗಾಗ ಮಾಧ್ಯಮಗಳಲ್ಲಿ ಆಧಾರ್ ಕಾರ್ಡ್,ವೋಟಿಂಗ್ ಕಾರ್ಡ್ ನಲ್ಲಿ ಆಗುತ್ತಿರುವ ಅವಾಂತರಗಳ ಬಗ್ಗೆ ಕೇಳಿರುತ್ತವೆ.ಈಗ ಇಂತಹದ್ದೇ ಅವಾಂತರವೊಂದು ಪ್ಯಾನ್ ಕಾರ್ಡ್ ನಲ್ಲಾಗಿದೆ.
ಹೌದು, ಅಷ್ಟಕ್ಕೂ ಈ ಪ್ಯಾನ್ ಕಾರ್ಡ್ ನಲ್ಲಾಗಿರುವ ಈ ಅವಾಂತರ ಏನಂತೀರಾ? ನೀವು ಸಾಮಾನ್ಯವಾಗಿ ಪ್ಯಾನ್ ಕಾರ್ಡ್ ನಲ್ಲಿ ಹೆಸರು ಒಂದೇ ಇರುವುದನ್ನು ನೋಡಿರುತ್ತೀರಿ, ಆದರೆ ನೀವೆಂದಾದರೂ ಒಂದೇ ಹೆಸರಿನ ಜೊತೆಗೆ ಒಂದೇ ಜನ್ಮ ದಿನಾಂಕ, ಒಂದೇ ಪ್ಯಾನ್ ಕಾರ್ಡ್ ನಂಬರ್ ಇರುವುದನ್ನು ನೋಡಿರುತ್ತಿರಾ? ಇದಕ್ಕೆ ನಿಮ್ಮ ಉತ್ತರ ಖಂಡಿತಾ ಇಲ್ಲ, ಎನ್ನುವುದೇ ಆಗಿರುತ್ತದೆ.ಆದರೆ ಈಗ ಆದಾಯ ತೆರಿಗೆ ಇಲಾಖೆಯು ನೀಡಿರುವ ಎರಡು ಪ್ಯಾನ್ ಕಾರ್ಡ್ ನಲ್ಲಿ ಹೆಸರಿನ ಜೊತೆಗೆ ಜನ್ಮ ದಿನಾಂಕ, ಹಾಗೂ ಪ್ಯಾನ್ ಕಾರ್ಡ್ ನಂಬರ್ ಕೂಡ ಸೇಮ್ ಆಗಿದೆ.
ಇದನ್ನೂ ಓದಿ: ರಕ್ತನಾಳಗಳಲ್ಲಿ ಸೇರಿಕೊಂಡಿರುವ ಕೊಲೆಸ್ಟ್ರಾಲ್ ಕರಗಿಸಲು ಸುರಕ್ಷಿತವಾದ ಮನೆ ಮದ್ದು ಎಂದರೆ ಇದೊಂದೇ ಮಸಾಲೆ !
ಎರಡು ಕಾರ್ಡ್ ಗಳನ್ನು ಪರಿಶೀಲಿಸಿದಾಗ ಆದಾಯ ತೆರಿಗೆ ಇಲಾಖೆಯು ಬಿ.ಶಿವಣ್ಣ ಎನ್ನುವವರ ಹೆಸರಿನಲ್ಲಿ ಇಬ್ಬರು ವ್ಯಕ್ತಿಗಳಿಗೆ ಎರಡು ಪ್ಯಾನ್ ಕಾರ್ಡ್ ಗಳನ್ನು ನೀಡಿದ್ದು, ಇದರಲ್ಲಿ ಇಬ್ಬರ ಹೆಸರುಗಳು ಒಂದೇ ಆಗಿರುವುದಲ್ಲದೆ ಅವರ ಜನ್ಮ ದಿನಾಂಕ ಮೇ 5 1953 ಎಂದು ನಮೂದಿಸಲಾಗಿದೆ.ಅಚ್ಚರಿ ಏನೆಂದರೆ ಈ ಇಬ್ಬರೂ ಭಿನ್ನ ವ್ಯಕ್ತಿಗಳಾಗಿದ್ದರೂ ಅವರಿಬ್ಬರಿಗೂ ಒಂದೇ ಪ್ಯಾನ್ ಕಾರ್ಡ್ ನೀಡುವ ಮೂಲಕ ಭಾರಿ ಯಡವಟ್ಟು ಮಾಡಿದೆ.
ಸಾಮಾನ್ಯವಾಗಿ ಹಣಕಾಸಿನ ವಹಿವಾಟು ಹಾಗೂ ತೆರಿಗೆ ವಿಚಾರವಾಗಿ ನಿಗಾ ಇಡಲು ಆದಾಯ ತೆರಿಗೆ ಇಲಾಖೆ ಪ್ರತಿಯೊಬ್ಬರಿಗೆ ಪ್ಯಾನ್ ಕಾರ್ಡ್ ನನ್ನು ನೀಡುತ್ತದೆ. ಆದರೆ ಈಗ ಇಬ್ಬರು ಭಿನ್ನ ವ್ಯಕ್ತಿಗಳಿಗೆ ಒಂದೇ ಪ್ಯಾನ್ ಕಾರ್ಡ್ ನೀಡುವುದರ ಜೊತೆಗೆ ಜನ್ಮ ದಿನಾಂಕ, ಹಾಗೂ ಹೆಸರನ್ನು ಕಾರ್ಡ್ ನಲ್ಲಿ ಒಂದೇ ತೆರನಾಗಿ ಉಲ್ಲೇಖಿಸುವ ಮೂಲಕ ಆದಾಯ ತೆರಿಗೆ ಇಲಾಖೆ ಭಾರಿ ಯಡವಟ್ಟು ಮಾಡಿದೆ.
ಇದನ್ನೂ ಓದಿ: ಜಯದೇವ ಆಸ್ಪತ್ರೆ ಸಿಬ್ಬಂದಿಗಳ ರಕ್ಷಣೆಗೆ ರೆಡಿ ಆಯ್ತು ಆಪ್ :ಸೇಫ್ಟಿ ಆಪ್ ಕಂಡುಕೊಂಡ ಸರ್ಕಾರಿ ಸಾಮ್ಯದ ಮೊದಲ ಆಸ್ಪತ್ರೆ
ಈಗ ಈ ವಿಚಾರವಾಗಿ ಜೀ ಕನ್ನಡ ನ್ಯೂಸ್ ಜೊತೆ ಮಾತನಾಡಿದ ಶಿವಣ್ಣ ಬೋರೆಗೌಡ ಅವರು 'ಈಗ ಇಬ್ಬರಿಗೂ ಒಂದೇ ನಂಬರ್ ನೀಡಿರುವುದರಿಂದ ನನ್ನ ನಂಬರ್ ಆಕ್ಟಿವ್ ಅಗ್ತಾ ಇಲ್ಲಾ, ಆದಾಯ ತೆರಿಗೆ ಇಲಾಖೆ ನಂಬರ್ ಕೂಡ ಬದಲಾವಣೆ ಮಾಡಿಲ್ಲ, ಇದರಿಂದ ನಮ್ಮ ಹಣಕಾಸಿನ ವಹಿವಾಟಿಗೆ ಸಾಕಷ್ಟು ತೊಂದರೆಯಾಗಿದೆ' ಎನ್ನುತ್ತಾರೆ.
ಈಗ ಆದಾಯ ತೆರಿಗೆ ಮಾಡುವ ಇಂತಹ ಯಡವಟ್ಟುಗಳಿಂದ ಸಾಮಾನ್ಯ ಜನರು ಪ್ರತಿದಿನ ಪರದಾಡುವಂತಾಗಿದೆ.ಈಗಲಾದರೂ ಇಂತಹ ಅವಾಂತರಗಳಿಗೆ ಈ ಇಲಾಖೆ ಕೊನೆ ಹಾಡುತ್ತಾ ಎನ್ನುವುದನ್ನು ನಾವು ಕಾದು ನೋಡಬೇಕಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.