ಮೆಕ್ಯಾನಿಕ್ ಕರೆತರುವಷ್ಟರಲ್ಲಿ ಮಿಂಚಿನಂತೆ ಬೈಕ್ ಕಳ್ಳತನ: ಆರೋಪಿಯ ಬಂಧನ
ಸಯ್ಯದ್ ಮಜರ್ ಎಂಬಾತನ್ನು ಬಂಧಿಸಿ 5.5 ಲಕ್ಷ ರೂ. ಮೌಲ್ಯದ 5 ಬೈಕ್ ಹಾಗೂ ಒಂದು ಆಟೊ ಜಪ್ತಿ ಮಾಡಿಕೊಳ್ಳಲಾಗಿದೆ.
ಬೆಂಗಳೂರು: ಕೆಟ್ಟು ನಿಂತಿದ್ದ ಬೈಕ್ ರಿಪೇರಿ ಮಾಡಿಸಲು ಮೆಕ್ಯಾನಿಕ್ ಕರೆತರುವಷ್ಟರಲ್ಲಿ ಮಿಂಚಿನಂತೆ ಬೈಕ್ ಕಳ್ಳತನ ಮಾಡಿದ್ದ ಆರೋಪಿ(Bike Thief Arrested)ಯನ್ನು ಚಂದ್ರಾಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಸಯ್ಯದ್ ಮಜರ್ ಎಂಬಾತನ್ನು ಬಂಧಿಸಿ 5.5 ಲಕ್ಷ ರೂ. ಮೌಲ್ಯದ 5 ಬೈಕ್ ಹಾಗೂ ಒಂದು ಆಟೊ ಜಪ್ತಿ ಮಾಡಿಕೊಳ್ಳಲಾಗಿದೆ. ಜನವರಿ ತಿಂಗಳ 4ರಂದು ರಾತ್ರಿ ವ್ಯಕ್ತಿಯೊಬ್ಬರು ಚಂದ್ರಾಲೇಔಟ್ ಠಾಣಾ(Chandra Layout Police Station) ವ್ಯಾಪ್ತಿಯಲ್ಲಿ ಹೋಗುವಾಗ ಬೈಕ್ ರಸ್ತೆಯಲ್ಲೇ ಕೆಟ್ಟು ನಿಂತಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
"ನಾರಾಯಣ ಗುರುಗಳ ಸ್ತಬ್ಧಚಿತ್ರ ವಿಚಾರದಲ್ಲಿ ಕೇರಳದ ಸಿಪಿಐಎಂ ಪಕ್ಷವನ್ನು ಪ್ರಶ್ನಿಸಬೇಕು, ಕೇಂದ್ರವನ್ನಲ್ಲ"
ರಸ್ತೆ ಬದಿಯಲ್ಲಿ ಬೈಕ್ ನಿಲ್ಲಿಸಿ ಮನೆಗೆ ಹೋಗಿ ಮಾರನೇ ದಿನ ಬರುವಾಗ ಬೈಕ್(Two Wheelers Bike) ಕಳ್ಳತನವಾಗಿತ್ತು. ಈ ಸಂಬಂಧ ದೂರು ಬಂದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯ ವಿರುದ್ಧ ಬ್ಯಾಟರಾಯನಪುರ, ಕೆಂಗೇರಿ, ಹೊಸಕೋಟೆ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು(Bengaluru Police) ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬಹುತೇಕ ಸ್ಥಗಿತದ ಹಂತಕ್ಕೆ ಬಂದಿದೆ ದೇಶದ ಏಕೈಕ ಕನ್ನಡ ವಿವಿ, ಆದರೆ ಸಂಸ್ಕೃತ ವಿವಿಗೆ ಮಾತ್ರ ಅನುದಾನ!?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.