"ನಾರಾಯಣ ಗುರುಗಳ ಸ್ತಬ್ಧಚಿತ್ರ ವಿಚಾರದಲ್ಲಿ ಕೇರಳದ ಸಿಪಿಐಎಂ ಪಕ್ಷವನ್ನು ಪ್ರಶ್ನಿಸಬೇಕು, ಕೇಂದ್ರವನ್ನಲ್ಲ"

ಸಿದ್ದರಾಮಯ್ಯ (Siddaramaiah) ಹಾಗೂ ಕುಮಾರಸ್ವಾಮಿ (Kumaraswamy) ಅವರು ವಿವಾದವೇ ಅಲ್ಲದ ವಿಚಾರವನ್ನು ವಿವಾದಗೊಳಿಸಲು ಹೊರಟಿದ್ದಾರೆ. ಅವರು ಪ್ರಶ್ನಿಸಬೇಕಿರುವುದು ಕೇರಳದ ಸಿಪಿಐಎಂ ಪಕ್ಷವನ್ನೇ ಹೊರತು ಕೇಂದ್ರವನ್ನಲ್ಲ ಎಂದು ಬಿಜೆಪಿ ಟ್ವೀಟ್ (BJP Tweet) ಮಾಡಿದೆ. 

Edited by - Zee Kannada News Desk | Last Updated : Jan 17, 2022, 05:19 PM IST
  • ಗಣರಾಜ್ಯೋತ್ಸವ ಪರೇಡ್‌ನಲ್ಲಿ ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ಅವಕಾಶ ನಿರಾಕರಿಸಿರುವ ವಿಚಾರ
  • ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ವಿವಾದವೇ ಅಲ್ಲದ ವಿಚಾರವನ್ನು ವಿವಾದಗೊಳಿಸಲು ಹೊರಟಿದ್ದಾರೆ.
  • ಅವರು ಪ್ರಶ್ನಿಸಬೇಕಿರುವುದು ಕೇರಳದ ಸಿಪಿಐಎಂ ಪಕ್ಷವನ್ನೇ ಹೊರತು ಕೇಂದ್ರವನ್ನಲ್ಲ
  • ಕರ್ನಾಟಕ ಬಿಜೆಪಿ ಟ್ವೀಟ್
"ನಾರಾಯಣ ಗುರುಗಳ ಸ್ತಬ್ಧಚಿತ್ರ ವಿಚಾರದಲ್ಲಿ ಕೇರಳದ ಸಿಪಿಐಎಂ ಪಕ್ಷವನ್ನು ಪ್ರಶ್ನಿಸಬೇಕು, ಕೇಂದ್ರವನ್ನಲ್ಲ" title=
ಬಿಜೆಪಿ

ಬೆಂಗಳೂರು: ಸಿದ್ದರಾಮಯ್ಯ (Siddaramaiah) ಹಾಗೂ ಕುಮಾರಸ್ವಾಮಿ (Kumaraswamy) ಅವರು ವಿವಾದವೇ ಅಲ್ಲದ ವಿಚಾರವನ್ನು ವಿವಾದಗೊಳಿಸಲು ಹೊರಟಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಗಳ ಬಗ್ಗೆ ಬಿಜೆಪಿ ಪಕ್ಷ ಅಪಾರ ಗೌರವ ಹೊಂದಿದೆ. ಪಕ್ಷದ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಪ್ರತಿ ವರ್ಷ ನಾರಾಯಣ ಗುರು ಜಯಂತಿ ಆಚರಿಸಿ ಮಹಾನ್ ಸಮಾಜ ಸುಧಾರಕರಿಗೆ ಹೃದಯಪೂರ್ವಕ ಗೌರವ ನೀಡುತ್ತಿದ್ದೇವೆ ಎಂದು ಬಿಜೆಪಿ ಹೇಳಿದೆ.

ಗಣರಾಜ್ಯೋತ್ಸವ ಪರೇಡ್‌ನಲ್ಲಿ (Republic Day Parade) ಸಮಾಜ ಸುಧಾರಕ ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ (Narayana Guru tableau) ಅವಕಾಶ ನಿರಾಕರಿಸಿರುವ ವಿಚಾರವಾಗಿ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಇದಕ್ಕೆ ಪ್ರತಿಕ್ರಿಯಿಸಿರುವ ಕರ್ನಾಟಕ ಬಿಜೆಪಿ, ಕೇರಳ ಸರ್ಕಾರ (Kerala Government) ಮಾಡಿದ ತಪ್ಪಿಗೆ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರು ಪ್ರಶ್ನಿಸಬೇಕಿರುವುದು ಕೇರಳದ ಸಿಪಿಐಎಂ (CPM) ಪಕ್ಷವನ್ನೇ ಹೊರತು ಕೇಂದ್ರವನ್ನಲ್ಲ ಎಂದು ಟ್ವೀಟ್ ಮಾಡಿದೆ. 

 

 

ಮೊಸರಿನಲ್ಲೂ ಕಲ್ಲು ಹುಡುಕುವ ಜಾಯಮಾನ ಇಬ್ಬರು ಮಾಜಿ ಮುಖ್ಯಮಂತ್ರಿಗಳಿಗೆ ಹೊಸತೇನಲ್ಲ. ಆದರೂ ಸೂಕ್ಷ್ಮ ವಿಚಾರಗಳಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಸ್ತಬ್ಧ ಚಿತ್ರದ ವಿಚಾರದಲ್ಲಿ ಕೇಂದ್ರ ಸರ್ಕಾರ ಸೂಕ್ತ ಮಾರ್ಗದರ್ಶಿ ಸೂತ್ರವನ್ನು ಕೇರಳ ಸರ್ಕಾರಕ್ಕೆ ಕಳುಹಿಸಿತ್ತು. ಈ ಶಿಷ್ಟಾಚಾರವನ್ನು ಉಲ್ಲಂಘಿಸಿದ ಕೇರಳ ಸರ್ಕಾರದ ರಾಜಕೀಯ ಕುತಂತ್ರದಿಂದ ಈಗ ವಿವಾದ ಸೃಷ್ಟಿಯಾಗಿದೆ ಎಂದು ಹೇಳಿದೆ. 

ಮಾಜಿ ಮುಖ್ಯಮಂತ್ರಿಗಳಿಬ್ಬರು ಸತ್ಯದ ಪರವಾಗಿ ನಿಲ್ಲುವವರಾದರೆ ಈ ವಿಚಾರದಲ್ಲಿ ಮೋದಿಯವರನ್ನು ಬೆಂಬಲಿಸಬೇಕಲ್ಲವೇ? ಪ್ರಧಾನಿ ಮೋದಿ (PM Modi) ಅವರು ನಾರಾಯಣ ಗುರುಗಳ ವಿಚಾರದಲ್ಲಿ ಅಪಾರ ಗೌರವ ಹೊಂದಿದ್ದಾರೆ. ಶ್ರೀಗಳ ಐಕ್ಯ ಸ್ಥಳಕ್ಕೂ ಭೇಟಿ ನೀಡಿದ್ದಾರೆ. ತಮ್ಮ ಭಾಷಣದಲ್ಲಿ ನಾರಾಯಣ ಗುರುಗಳ ಸಾಧನೆಯನ್ನು ಪ್ರಸ್ತಾಪಿಸಿದ್ದಾರೆ. ಈ ಮಹಾನ್ ದಾರ್ಶನಿಕನ ಬಗ್ಗೆ ಪ್ರಧಾನಿ ಹೊಂದಿರುವ ಗೌರವವನ್ನು ಪ್ರಶ್ನಿಸುವುದು ಸಿದ್ದರಾಮಯ್ಯ ಅವರಿಗೆ ಶೋಭೆ ತರದು ಎಂದು ಅಸಮಾಧಾನ ಹೊರಹಾಕಿದೆ. 

ಇದನ್ನೂ ಓದಿ: ಬಹುತೇಕ ಸ್ಥಗಿತದ ಹಂತಕ್ಕೆ ಬಂದಿದೆ ದೇಶದ ಏಕೈಕ ಕನ್ನಡ ವಿವಿ, ಆದರೆ ಸಂಸ್ಕೃತ ವಿವಿಗೆ ಮಾತ್ರ ಅನುದಾನ!?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News