ಚಾಮರಾಜನಗರ: ಗ್ಯಾರಂಟಿ ಯೋಜನೆಗಳು ಜಾರಿಯಾಗುತ್ತಿರುವುದರಿಂದ ಬಿಜೆಪಿ ಅವರಿಗೆ ತಡೆದುಕೊಳ್ಳಲಾಗುತ್ತಿಲ್ಲ ಎಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಹೇಳಿದರು.


COMMERCIAL BREAK
SCROLL TO CONTINUE READING

ಚಾಮರಾಜನಗರದ ಡಾ.ರಾಜ್ ಕುಮಾರ್ ಕಿರು ರಂಗಮಂದಿರದಲ್ಲಿಸೆಸ್ಕ್ ಆಯೋಜಿಸಿದ್ದ ಗೃಹಜ್ಯೋತಿ ಯೋಜನೆ ಚಾಲನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಎಲ್ಲಾ ಗ್ಯಾರಂಟಿಗಳು ಜಾರಿಯಾಗುತ್ತಿರುವುದರಿಂದ ಬಿಜೆಪಿ ಅವರಿಗೆ ತಡೆದುಕೊಳ್ಳಲಾಗುತ್ತಿಲ್ಲ, ಸಣ್ಣ ವಿಚಾರವನ್ನು ದೊಡ್ಡದು ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.


ಇದನ್ನೂ ಓದಿ: ಫ್ಲೈಟ್‌ನಲ್ಲಿ ಬಂದು ಮನೆಗಳ್ಳತನ : ಗಡ್ಡ ಕೊಟ್ಟ ಕ್ಲೂನಲ್ಲಿ ಸಿಕ್ಕಿ ಬಿತ್ತು ಕಳ್ಳರ ಗ್ಯಾಂಗ್..!


ಕಾಂಗ್ರೆಸ್ ಗ್ಯಾರಂಟಿಗಳನ್ನು ಈಡೇರಿಸಲ್ಲ ಎಂದು ಬಿಜೆಪಿ ಹೇಳುತ್ತಿತ್ತು. ಈಗ, ಎಲ್ಲಾ ಯೋಜನೆಗಳು ಜಾರಿಯಾಗುತ್ತಿದೆ, ನರೇಂದ್ರ ಮೋದಿ ಅವರು ಕೊಟ್ಟ ಭರವಸೆಗಳು, ಕರ್ನಾಟಕದ ಡಬಲ್ ಎಂಜಿನ್ ಸರ್ಕಾರ ಯಾಕೆ ಕೊಟ್ಟ ಭರವಸೆ ಈಡೇರಿಸಲಿಲ್ಲ, ವರ್ಷಗಟ್ಟಲೆ ರೈತರು ಪ್ರತಿಭಟಿಸಿದರೂ ಮೋದಿ ಮಾತನಾಡಲಿಲ್ಲ, ನಮ್ಮದು ಸರ್ವ ಜನಾಂಗದ, ಸರ್ವರ ಅಭ್ಯುದಯದ ಸರ್ಕಾರ ಎಂದರು.


ನಾವು ಚಾಲನೆ ಕೊಡುತ್ತಿರುವ ಗ್ಯಾರಂಟಿ ಯೋಜನೆಗಳು ದೇಶದ ಬೇರೆ ಯಾವುದೇ ರಾಜ್ಯದಲ್ಲಿಲ್ಲ, ವರ್ಷಕ್ಕೆ 60 ಸಾವಿರ ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಾಗಿ ವ್ಯಯಿಸುತ್ತಿದ್ದೇವೆ, ಕೊಟ್ಟ ಭರವಸೆಗಳನ್ನು ಬಿಜೆಪಿ ಅವರೂ ಈಡೇರಿಸಲಿಲ್ಲ, ಜೆಡಿಎಸ್ ನವರೂ ಈಡೇರಿಸಲಿಲ್ಲ, ನಾವು ನುಡಿದಂತೆ ನಡೆಯುತ್ತಿದ್ದೇವೆ ಎಂದರು.


ಇದನ್ನೂ ಓದಿ: ಸ್ಟಾರ್​ ನಟನಿಂದ ಸಮಂತಾ 25 ಕೋಟಿ ಸಾಲ ಪಡೆದಿದ್ದು ನಿಜನಾ? ಸ್ಪಷ್ಟನೆ ನೀಡಿದ ಸ್ಯಾಮ್ ಹೇಳಿದ್ದೇನು?


ಶಕ್ತಿ ಯೋಜನೆಯಲ್ಲಿ ಈವರೆಗೆ 68ಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ, ಮಹಿಳೆಯರು ಶಕ್ತಿ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ,  ಅನ್ನಭಾಗ್ಯ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ 5ಕೆಜಿ ಸೇರಿ 10 ಕೆಜಿ ಕೊಡುವ ಭರವಸೆ ನೀಡಿದ್ದೆವು. 
ಆದರೆ, ಕೇಂದ್ರ ಸರ್ಕಾರ ಇದರಲ್ಲೂ ರಾಜಕೀಯ ಮಾಡಿದೆ, ನಾವು ದುಡ್ಡು ಕೊಟ್ಟರೂ ಕೇಂದ್ರ ಸರ್ಕಾರ ಅಕ್ಕಿ ಕೊಡಲು ಒಪ್ಪಲಿಲ್ಲ ಎಂದು ಆರೋಪಿಸಿದರು‌.


 ಅಕ್ಕಿಯ ಬದಲು ಅದರ ಹಣವನ್ನು ಫಲಾನುಭವಿಗಳ ಖಾತೆಗೆ ಹಾಕಿದ್ದೇವೆ, ಇದೀಗ ಮೂರನೆ ಗ್ಯಾರೆಂಟಿ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಿದ್ದೇವೆ. ನೊಂದಣಿ ಮಾಡಿಕೊಳ್ಳದವರು ಜಿಲ್ಲೆಯಲ್ಲಿ 18% ಇದ್ದಾರೆ, ನೊಂದಣಿ ಮಾಡಿಕೊಂಡ ಬಳಿಕ ಎಲ್ಲರಿಗೂ ಉಚಿತ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ. ಈಗಾಗಲೇ ಜಿಲ್ಲೆಯ 86% ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ನೊಂದಣಿ ಮಾಡಿಕೊಂಡಿದ್ದಾರೆ,ಉಳಿದ 14% ಮಹಿಳೆಯರು ಆದಷ್ಟು ಬೇಗ ನೊಂದಣಿ ಮಾಡಿಸಿಕೊಳ್ಳಿ ಎಂದು ಕರೆ ನೀಡಿದರು.


ಇದನ್ನೂ ಓದಿ: ಸ್ಟಾರ್​ ನಟನಿಂದ ಸಮಂತಾ 25 ಕೋಟಿ ಸಾಲ ಪಡೆದಿದ್ದು ನಿಜನಾ? ಸ್ಪಷ್ಟನೆ ನೀಡಿದ ಸ್ಯಾಮ್ ಹೇಳಿದ್ದೇನು?


ವಿರೋಧ ಪಕ್ಷದವರು ಸುಮ್ಮನೆ ಟೀಕೆ ಮಾಡುತ್ತಾರೆ, ನಮ್ಮ ಸರ್ಕಾರ ಎಲ್ಲಾ ಗ್ಯಾರೆಂಟಿ ಯೋಜನೆಗಳನ್ನು ಜಾರಿ ಮಾಡುತ್ತದೆ,ದೇಶದ ಪ್ರಧಾನಿಗಳು ರೈತರ ಕಷ್ಟ ಕೇಳಲಿಲ್ಲ,ನಿಮ್ಮೆಲ್ಲರ ಆಶೀರ್ವಾದ ಮುಂಬರುವ ಎಲ್ಲಾ ಚುನಾವಣೆಗಳಲ್ಲೂ ನಮ್ಮ ಮೇಲಿರಲಿ ಎಂದು ಮನವಿ ಮಾಡಿದರು.ಸಚಿವರು ಹಾಗೂ ಚಾಮರಾಜನಗರದ ನಾಲ್ವರು ಶಾಸಕರು ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಿಗೆ ಶೂನ್ಯ ದರದ ವಿದ್ಯುತ್ ಬಿಲ್ ನೀಡಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.