ಫ್ಲೈಟ್‌ನಲ್ಲಿ ಬಂದು ಮನೆಗಳ್ಳತನ : ಗಡ್ಡ ಕೊಟ್ಟ ಕ್ಲೂನಲ್ಲಿ ಸಿಕ್ಕಿ ಬಿತ್ತು ಕಳ್ಳರ ಗ್ಯಾಂಗ್..!

ಉತ್ತರ ಪ್ರದೇಶದಿಂದ ಫ್ಲೈಟ್ ನಲ್ಲಿ ಬರುತಿದ್ದ ಇವರು ಯಶವಂತಪುರದ ಲಾಡ್ಜ್ ವೊಂದರಲ್ಲಿ ರೂಂ ಮಾಡಿಕೊಳ್ತಾರೆ.. ಬಳಿಕ ಒಬ್ಬೊಬ್ಬರು ಒಂದೊಂದು ಬೈಕ್ ಏರಿ ಪ್ರತಿಷ್ಠಿತ ಏರಿಯಾ ಸುತ್ತಾಡುತ್ತಾರೆ.. ಈ ವೇಳೆ ಕೈ ಬೀಗ ಹಾಕಿದ ಮನೆಗಳ ಪಾಯಿಂಟ್ ಮಾಡಿ ತಮ್ಮ ಗ್ರೂಪ್ ನಲ್ಲಿ ಲೊಕೇಷನ್ ಷೇರ್ ಮಾಡಿಕೊಳ್ಳುತಿದ್ರು.. ನಂತರ...

Written by - Krishna N K | Last Updated : Aug 5, 2023, 06:44 PM IST
  • ಒಂದುವರೆ ಕೆಜಿ ಚಿನ್ನ ಕದ್ದು ಬಸ್ ನಲ್ಲಿ ಪ್ರಯಾಣ, ದೆಹಲಿ ತಲುಪುತಿದ್ದಂತೆ ಲಾಕ್.
  • ಬೀಗ ಹಾಕಿದ ಮನೆಗಳೇ ಚಾಲಕಿಗಳ ಟಾರ್ಗೆಟ್‌.
  • ಗಡ್ಡ ಕೊಟ್ಟ ಕ್ಲೂನಲ್ಲಿ ಸಿಕ್ಕಿ ಬಿತ್ತು ಕಳ್ಳರ ಗ್ಯಾಂಗ್.
ಫ್ಲೈಟ್‌ನಲ್ಲಿ ಬಂದು ಮನೆಗಳ್ಳತನ : ಗಡ್ಡ ಕೊಟ್ಟ ಕ್ಲೂನಲ್ಲಿ ಸಿಕ್ಕಿ ಬಿತ್ತು ಕಳ್ಳರ ಗ್ಯಾಂಗ್..! title=

ಬೆಂಗಳೂರು : ಅದು ಅಂತಿಂತ ಸಾಮಾನ್ಯ ಗ್ಯಾಂಗ್ ಅಲ್ಲ, ಪಕ್ಕ ಐನಾತಿ ಗುಂಪು. ಕಳ್ಳತನಕ್ಕೆ ಅಂತ ಫ್ಲೈಟ್ ನಲ್ಲಿ ಬರುತಿದ್ದ ಅವರು ಪ್ರತಿಷ್ಠಿತ ಏರಿಯಾಗಳಲ್ಲಿ ಬೀಗ ಹಾಕಿದ ಮನೆಗಳ ಟಾರ್ಗೆಟ್ ಮಾಡುತಿದ್ದರು. ಸರಿಯಾದ ಸಮಯ ನೋಡಿ ಆ ಮನೆಯ ಕೊಳ್ಳೆ ಹೊಡೆದು ದೆಹಲಿಗೆ ಪರಾರಿಯಾಗ್ತಿದ್ರು. ಹೀಗೆ ಹಲವು ರಾಜ್ಯಗಳಲ್ಲಿ ಸಾಲು ಸಾಲು ಕೃತ್ಯ ಎಸಗಿ ಬೆಂಗಳೂರಲ್ಲಿ ಬಾಲ ಬಿಚ್ಚಿದ್ದ ಆ ಗ್ಯಾಂಗ್ ಈಗ ಪೊಲೀಸರಿಗೆ ತಗಲಾಕಿಕೊಂಡಿದೆ. ಗಡ್ಡ ಕೊಟ್ಟ ಕ್ಲ್ಯೂಗೆ ಇಡಿ ಗ್ಯಾಂಗ್ ಖೆಡ್ಡಾಕೆ ಬಿದ್ದಿದೆ.

ಯೆಸ್‌, ಈ ಪೋಟೊಗಳನ್ನೊಮ್ಮೆ ಸರಿಯಾಗಿ ನೊಡ್ಕೊಂಬಿಡಿ. ಇವರು ಮುಂದೊಂದು ದಿನ ನಿಮ್ಮ ಮನೆ ಬಳಿ ಬಂದ್ರು ಆಶ್ಚರ್ಯವಿಲ್ಲ. ಅಂದಹಾಗೆ ಇವರ ಹೆಸರು ಮಿಂಟು ವಿಶ್ವಾಸ್, ಹರೀಶ್ ಚಂದ್ರ, ಚಂದ್ರಬಾನು, ಜಸ್ವೀರ್ ಅಂತಾ. ಮೂಲತಃ ಉತ್ತರ ಪ್ರದೇಶದವರಾದ ಇವರು ಸಾಮಾನ್ಯರಲ್ಲ. ಹೈಫೈ ಮಂದಿತರ ಬೆಂಗಳೂರಿಗೆ ಎಂಟ್ರಿ ಕೊಟ್ಟು ಕೋಟಿ ಕುಳಗಳ ಮನೆ ಲೂಟಿ ಮಾಡಿ ಎಸ್ಕೇಪ್ ಆಗುತ್ತಿದ್ರು.. ಇದೇ ತರ ಟೆಕ್ಕಿಯೊಬ್ಬರ ಮನೆಯಲ್ಲಿ ಒಂದುವರೆ ಕೆಜಿ ಚಿನ್ನ ಕದ್ದು ಸದ್ಯ ಸಂಜಯ್ ನಗರ ಪೊಲೀಸರ ಅತಿಥಿಗಳಾಗಿದ್ದಾರೆ. 

ಇದನ್ನೂ ಓದಿ:ತಾಕತ್ತಿದ್ದರೆ ದೇಶದ ಎಲ್ಲಾ ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಬಿಜೆಪಿ ಜಾರಿ ಮಾಡಲಿ : ಸಿಎಂ ಚಾಲೆಂಜ್

ಅಸಲಿಗೆ ಈ ಖದೀಮರ ಕೃತ್ಯವೇ ಡಿಫ್ರೆಂಟ್.. ಉತ್ತರ ಪ್ರದೇಶದಿಂದ ಫ್ಲೈಟ್ ನಲ್ಲಿ ಬರುತಿದ್ದ ಇವರು ಯಶವಂತಪುರದ ಲಾಡ್ಜ್ ವೊಂದರಲ್ಲಿ ರೂಂ ಮಾಡಿಕೊಳ್ತಾರೆ.. ಬಳಿಕ ಒಬ್ಬೊಬ್ಬರು ಒಂದೊಂದು ಬೈಕ್ ಏರಿ ಪ್ರತಿಷ್ಠಿತ ಏರಿಯಾ ಸುತ್ತಾಡುತ್ತಾರೆ.. ಈ ವೇಳೆ ಕೈ ಬೀಗ ಹಾಕಿದ ಮನೆಗಳ ಪಾಯಿಂಟ್ ಮಾಡಿ ತಮ್ಮ ಗ್ರೂಪ್ ನಲ್ಲಿ ಲೊಕೇಷನ್ ಷೇರ್ ಮಾಡಿಕೊಳ್ಳುತಿದ್ರು.. ನಂತರ ರಾತ್ರಿ ವೇಳೆ ಆ ಮನೆ ಬಳಿ ಬಂದು ಮತ್ತೊಮ್ಮೆ ಚೆಕ್ ಮಾಡುತಿದ್ರು.. ಈ ವೇಳೆ ಹ್ಯಾಂಡ್ ಲಾಕ್ ಹಾಗೆ ಇದ್ದರೇ ಆ ಮನೆ ಕಳ್ಳತನ ಮಾಡುತಿದ್ರು.. ಇನ್ನು ಇದೇ ರೀತಿ ಸಂಜಯ್ ನಗರದ ಡಾಲರ್ಸ್ ಕಾಲೋನಿಯ ಟೆಕ್ಕಿಯೋರ್ವರ ಮನೆಯಲ್ಲಿ ಕಳ್ಳತನ ಮಾಡಿದ್ದ ಗ್ಯಾಂಗ್ ಬರೊಬ್ಬರಿ 1.4 ಕೆಜಿ ಚಿನ್ನ ಎಗರಿಸಿ ಪರಾರಿಯಾಗಿದ್ರು.

ಇನ್ನು ಹೀಗೆ ಪರಾರಿಯಾದ ಗ್ಯಾಂಗ್ ನ ಕೃತ್ಯದ ಬಗ್ಗೆ ಮರುದಿನ ಬಂದ ಮನೆ ಮಾಲೀಕರು ದೂರು ನೀಡ್ತಾರೆ.. ಈ ವೇಳೆ ಸಿಸಿಟಿವಿ ಪರಿಶೀಲಿಸಿದ ಪೊಲೀಸರಿಗೆ ಅದೊಂದು ನಿರ್ಮಾಣ ಹಂತದ ಕಟ್ಟಡದ ಬಳಿ ಗಡ್ಡ ಬಿಟ್ಟಿದ್ದ ಹರೀಶನ ಚಹರೆ ಸಿಗುತ್ತದೆ.. ಈ ವೇಳೆ ಆತನ ಫುಲ್ ಹಿಸ್ಟರಿ ಸಂಗ್ರಹಿಸಿದ ಪೊಲೀಸರಿಗೆ ಇಡಿ ಗ್ಯಾಂಗ್ ನ ಸಂಪೂರ್ಣ ಮಾಹಿತಿ ಲಭ್ಯವಾಗುತ್ತೆ.. ಇತ್ತ ಬರೊಬ್ಬರಿ ೭೦ ಲಕ್ಷ ಮೌಲ್ಯದ ಚಿನ್ನ ಹಿಡಿದುಕೊಂಡು ಆರೋಪಿಗಳು ಬೆಂಗಳೂರಿನಿಂದ ಹೈದ್ರಾಬಾದ್, ಬಳಿಕ ಅಲ್ಲಿಂದ ದೆಹಲಿಗೆ ಬಸ್ ನಲ್ಲಿ ತೆರಳಿದ್ರು.. ಆದ್ರೆ ಅದಾಗಲೇ ಇವರ ಹೆಜ್ಜೆ ಗುರುತು ಲೆಕ್ಕ ಹಾಕಿದ್ದ ಪೊಲೀಸರು ದೆಹಲಿಯಲ್ಲಿ ಆರೋಪಿಗಳು ಬಸ್ ನಿಂದ ಇಳಿಯುತಿದ್ದಂತೆ ಲಾಕ್ ಮಾಡಿ ಕದ್ದ ಚಿನ್ನಾಭರಣ ಸೀಜ್‌ ಮಾಡಿದ್ದಾರೆ. 

ಇದನ್ನೂ ಓದಿ: "ನಾವು ಈಗ ಕೊಟ್ಟಿರುವ 5 ಗ್ಯಾರಂಟಿಗಳನ್ನು ಇಡೀ ದೇಶವೇ ಮೆಚ್ಚಿದೆ"

ಅಸಲಿಗೆ ಬಂಧಿತರಲ್ಲಿ ಮಿಂಟು ವಿಶ್ವಾಸ್ ನಟೋರಿಯಸ್ ಆಗಿದ್ದು, ಈತನ ವಿರುದ್ಧ ಉತ್ತರಪ್ರದೇಶದಲ್ಲಿ ಗ್ಯಾಂಗ್ ಸ್ಟರ್ ಆ್ಯಕ್ಟ್ ಅಡಿ ಪ್ರಕರಣ ಸಹ ಇದೆಯಂತೆ.. ಇನ್ನು ಉಳಿದಂತೆ ಈ ಎಲ್ಲಾ ಆರೋಪಿಗಳು ಸಹ ಜೊತೆಯಾಗಿ ಇದೇ ಮಾದರಿ ಕೇರಳ,ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೃತ್ಯ ಎಸಗಿ ಬಂಧನವಾಗಿದ್ರು..ಕಳೆದ ವರ್ಷ ಸಹ ನಗರದ ಅನ್ನಪೂರ್ಣೇಶ್ವರಿ ನಗರ ಪೊಲೀಸರ ಬಲೆಗೆ ಬಿದಿದ್ದ ಈ ಗ್ಯಾಂಗ್ ಬಿಡುಗಡೆ ಬಳಿಕ ಊರು ಬಿಟ್ಟೊರು ಮತ್ತೆ ಬಾಲ ಬಿಚ್ಚಿ ಈಗ ಲಾಕ್ ಆಗಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News