ಬೆಂಗಳೂರು: ಬಿಜೆಪಿ ಸರ್ಕಾರ ಎಸ್ ಸಿಪಿ/ ಟಿಎಸ್ ಪಿ ಕಾಯ್ದೆ ಪರ ಇದೆಯೇ?.‌ನಾನು ಸಿಎಂ ಆಗಿದ್ದಾಗ ಮಂಡಿಸಿದ್ದ ಬಜೆಟ್ 2 ಲಕ್ಷ 2 ಸಾವಿರ ಕೋಟಿ, ಆದರೆ ಬಿಜೆಪಿ ಸರ್ಕಾರ ಯಾರ ಪರ ಇದೆ.ಬರೀ ಕಾರ್ಪೊರೇಟ್ ಕಂಪನಿಗಳ ಪರ ಇದೆ ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಕಿಡಿ ಕಾರಿದರು.


COMMERCIAL BREAK
SCROLL TO CONTINUE READING

ದಲಿತ ಸಂಘರ್ಷ ಸಮಿತಿ ಸಂಘಟನೆಗಳ ಒಕ್ಕೂಟ (ದಸಂಸ ಒಕ್ಕೂಟ) ಬೆಂಗಳೂರಿನ ಲಿಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಎಸ್ ಸಿ ಪಿ/ ಟಿ ಎಸ್ ಪಿ ಕಡ್ಡಾಯ ಅನುಷ್ಠಾನ ಕುರಿತ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.


'ಬಿಜೆಪಿ ಸರ್ಕಾರ ಎಸ್ ಸಿಪಿ/ ಟಿಎಸ್ ಪಿ ಕಾಯ್ದೆ ಪರ ಇದೆಯೇ?.‌ನಾನು ಸಿಎಂ ಆಗಿದ್ದಾಗ ಮಂಡಿಸಿದ್ದ ಬಜೆಟ್ 2 ಲಕ್ಷ 2 ಸಾವಿರ ಕೋಟಿ.ಆದರೆ ಬಿಜೆಪಿ ಸರ್ಕಾರ ಯಾರ ಪರ ಇದೆ.ಬರೀ ಕಾರ್ಪೊರೇಟ್ ಕಂಪನಿಗಳ ಪರ ಇದೆ' ಎಂದು ಅವರು ಕುಟುಕಿದರು.


ಇದನ್ನೂ ಓದಿ: Russia-Ukraine conflict: 1991 ರ ನಂತರದ ಉಕ್ರೇನ್‌ನ ಪ್ರಕ್ಷುಬ್ಧ ಇತಿಹಾಸ...


ಇದೇ ವೇಳೆ ಪ್ರಧಾನಿ ಮೋದಿ ವಿರುದ್ಧ ಹರಿ ಹಾಯ್ದ ಸಿದ್ದರಾಮಯ್ಯ 'ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಅಂತಾರೆ ಮೋದಿ.ಕಹಾ ಹೈ ಮೋದಿ ಸಬ್ ಕಾ ಸಾತ್ ಸಬ್ ಕಾ ವಿನಾಶ್ ಎಂದು ವ್ಯಂಗ್ಯವಾಡಿದರು.'ಮತ ಹಾಕುವ ಸ್ವಾತಂತ್ರ್ಯ ಸಿಕ್ಕರೆ ಸಾಲದು.‌ಸಾಮಾಜಿಕ ಸ್ವಾತಂತ್ರ್ಯ ಸಿಗಬೇಕು ಎಂದು.ಆಗ ಮಾತ್ರ ಜಾತ್ಯಾತೀತ ಸಮಾಜ ನಿರ್ಮಾಣವಾಗುತ್ತೆ.ನಮ್ಮ ಸಮಾಜ ಅಸಮಾನತೆಯಿಂದ ಕೂಡಿದೆ.ಈ ಅಸಮಾನತೆ ಹೋಗಲಾಡಿಸಬೇಕು.‌ದೇಶದ ಸಂಪತ್ತು, ಶಿಕ್ಷಣ ಹಂಚಿಕೆಯಾಗಬೇಕು' ಎಂದು ಅವರು ಹೇಳಿದರು.


ಶಿಕ್ಷಣದ ಮಹತ್ವದ ಕುರಿತಾಗಿ ಅಂಬೇಡ್ಕರ್ ಮಾತನಾಡುತ್ತಾ ಸಮಾಜದಲ್ಲಿ ಸ್ವಾಭಿಮಾನದಿಂದ ಬದುಕಬೇಕು ಅಂದ್ರೆ ಶಿಕ್ಷಣ ಮುಖ್ಯ ಎಂದು ಹೇಳಿದ್ದರು ಎಂದು ಸಿದ್ಧರಾಮಯ್ಯ ತಿಳಿಸಿದರು.


'ಬಸವಣ್ಣನವರ ವಚನಗಳನ್ನ 800 ವರ್ಷಗಳಿಂದ ಹೇಳ್ತಾನೇ ಬಂದಿದ್ದಾರೆ.‌ಇವನಾರವ ಇವನಾರವ ಎಂದೆಣಿಸದಿರಯ್ಯ, ಇವ ನಮ್ಮವ ಇವ ನಮ್ಮವ, ನಮ್ಮ ಮನೆ ಮಗನೆಂದಿಣಸಯ್ಯ ಎಂದು ವಚನ ಹೇಳ್ತಾರೆ.. ನಂತರ ಪಕ್ಕಕ್ಕೆ ಬಂದು ನೀನು ಯಾವ ಜಾತಿ ಅಂತ ಕೇಳ್ತಾರೆ.‌ಮೇಲ್ ಜಾತಿನಾ, ಕೆಳ ಜಾತಿನಾ ಎಂದು ಕೇಳ್ತಾರೆ.ನಮ್ಮಲ್ಲಿ ಗುಲಾಮಗಿರಿ, ಜಾತಿ ವ್ಯವಸ್ಥೆ ಇದೆ, ಗುಲಾಮಗಿರಿ ಮನಸ್ಥಿತಿ ಹೋಗಬೇಕು.‌ ಮೇಲ್ಜಾತಿಯವರು  ಬಡವ ಆದ್ರೂ ಗೌರವದಿಂದ ಮಾತನಾಡಿಸುತ್ತಾರೆ.‌ ಆದ್ರೆ ದಲಿತ ಶ್ರೀಮಂತನಾದ್ರೂ ಅವ್ರನ್ನ ಬೇರೆಯದ್ದೇ ರೀತಿ ಮಾತನಾಡಿಸುತ್ತಾರೆ" ಎಂದು ಅವರು ವಿಷಾದ ವ್ಯಕ್ತಪಡಿಸಿದರು.


ಇದನ್ನೂ ಓದಿ: Russia Ukraine War: ವಿಶ್ವಸಂಸ್ಥೆಯಲ್ಲಿ ಭಾರತದ ಬೆಂಬಲ ಕೋರಿದ ಉಕ್ರೇನ್ ಅಧ್ಯಕ್ಷ..!


ಬಿಜೆಪಿ ಸರ್ಕಾರ ಬಂದಾಗಿನಿಂದ ಒಂದೇ ಒಂದು ಮನೆ ಮಂಜೂರು ಮಾಡಿಲ್ಲ. ಮನೆ ಇಲ್ಲದ ದಲಿತರು‌ ಅರ್ಜಿ ಹಾಕಿದಾಗ ಸೂರು ಕೊಡಬೇಕು ಅಂತ ನಾನು ಕಾನೂನು ಮಾಡಿದ್ದೆ.ಬಿಜೆಪಿ ಸರ್ಕಾರ, ಸಮ್ಮಿಶ್ರ ಸರ್ಕಾರ ಸೇರಿ ಅಧಿಕಾರಕ್ಕೆ ಬಂದು ಮೂರುವರೆ  ವರ್ಷ ಆಯ್ತು. ಬಜೆಟ್ ಈಗ ಏನ್ ಮಾಡ್ತಾರೊ ಗೊತ್ತಿಲ್ಲ. ಎಲ್ಲಾದಕ್ಕೂ ದುಡ್ಡು ಇಲ್ಲ ಅಂತಾರೆ.‌ ಏನೇ ಕೇಳಿದ್ರು ಕೋವಿಡ್ ಅಂತಾರೆ.ಆದರೆ ಕೋವಿಡ್ (Coronavirus) ಗೆ ಅವರು ಖರ್ಚು ಮಾಡಿದ್ದು  8 ಸಾವಿರ ಕೋಟಿಗಳಷ್ಟೇ ಎಂದು ಅವರು ಹೇಳಿದರು.


'ರಾಜ್ಯದಿಂದ ಮೂರು ಲಕ್ಷ ಕೋಟಿ ತೆರಿಗೆ ಸಂಗ್ರಹ ಆಗುತ್ತಿದೆ. ಆದರೆ ಕೇಂದ್ರ ಸರ್ಕಾರದಿಂದ ಬರುವ ಹಣಕಾಸು ನೆರವಿನ‌ ಪ್ರಮಾಣ ಕಡಿಮೆ ಆಗ್ತಿದೆ.‌ಮೋದಿ ಬಂದ ಮೇಲೆ ಹೀಗಾಗ್ತಿದೆ.ಅನುದಾನ ಸೇರಿ ಮೊದಲು ನಮಗೆ ಕೇಂದ್ರದ ಪಾಲು 80 ಸಾವಿರ ಕೋಟಿ ಬರ್ತಿತ್ತು.ಈಗ 40 ಸಾವಿರ ಕೋಟಿ ಬರ್ತದೆ. ಕೇಂದ್ರದಿಂದ ಹಣ ತರದೆ ಇಲ್ಲಿ ಕೋವಿಡ್ ಕಾರಣ ಹೇಳ್ತಾರೆ" ಎಂದು ಸಿದ್ಧರಾಮಯ್ಯ ಕಿಡಿ ಕಾರಿದರು.ನಮಗೆ ಕೇಂದ್ರದಿಂದ ಸರಿ ಸುಮಾರು 1ಲಕ್ಷ 20 ಸಾವಿರ ಕೋಟಿ ಬರಬೇಕು. ಆದರೆ ಮುಖ್ಯಮಂತ್ರಿ, ಮಂತ್ರಿಗಳು, ಸಂಸದರು ಪ್ರಧಾನಿಯವರನ್ನು ಕೇಳದೇ ಹೆದರಿಕೊಂಡು ಹೇಡಿಗಳ ತರ ಕುಳಿತಿದ್ದಾರೆ' ಎಂದು ಅವರು ಕುಟುಕಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.