ಬೆಂಗಳೂರು: ಕನ್ನಡ ನಾಡಿನ ಶ್ರೀಮಂತ ಪರಂಪರೆ, ಸಾಹಿತ್ಯ ಸಿರಿ ಸಂಪತ್ತಿನ ಹೆಗ್ಗುರುತು ನಾಡಹಬ್ಬ ಮೈಸೂರು ದಸರಾ ಬಗ್ಗೆ ರಾಜ್ಯ ಬಿಜೆಪಿ ಸರಕಾರದ ನೀತಿ ಅತ್ಯಂತ ಖಂಡನೀಯ. ಕನ್ನಡ ಭಾಷೆ, ಸಂಸೃತಿಯ ಕುರಿತು ಆಡಳಿತ ನಡೆಸುವವರ ದಿವ್ಯನಿರ್ಲಕ್ಷ್ಯ ಮಾತೃಭಾಷೆಗೆ ಮಾಡಿರುವ ಅಪಮಾನ ಮತ್ತು ದ್ರೋಹ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.


COMMERCIAL BREAK
SCROLL TO CONTINUE READING

ಮೈಸೂರು ದಸರೆಯಲ್ಲಿ ಕನ್ನಡ ಪುಸ್ತಕ ಪ್ರದರ್ಶನ ಅನಾದಿ ಕಾಲದಿಂದ ಅವಿಚ್ಛಿನ್ನವಾಗಿ ನಡೆದುಕೊಂಡು ಬರುತ್ತಿರುವ ಕನ್ನಡ ತಾಯಿಯ ಸೇವಾ ಕೈಂಕರ್ಯ.ಆದರೆ, ರಾಜ್ಯ ಸರಕಾರ ಕನ್ನಡ ಪುಸ್ತಕ ಪ್ರದರ್ಶನಕ್ಕೇ ಕೊಕ್ ಕೊಟ್ಟು, ತನ್ನ ಕನ್ನಡ ವಿರೋಧಿ ನೀತಿಯನ್ನು ಮತ್ತೊಮ್ಮೆ ಸಾರಿದೆ. ಪುಸ್ತಕ ಸಂಸ್ಕೃತಿಗೆ ಧಕ್ಕೆ ತಂದಿದೆ.


ಇದನ್ನೂ ಓದಿ: IOCL ನಲ್ಲಿ 1500 ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ : ವಿವರಗಳಿಗೆ ಇಲ್ಲಿ ಪರಿಶೀಲಿಸಿ


ಮೈಸೂರು ಸಾಂಸ್ಕೃತಿಕ ನಗರಿ. ದಸರಾ, ಜಗದ್ವಿಖ್ಯಾತ  ಸಾಂಸ್ಕೃತಿಕ ಉತ್ಸವ.ಹೀಗಿದ್ದೂ ರಾಜ್ಯ ಬಿಜೆಪಿ ಸರಕಾರವು ಕನ್ನಡವನ್ನು ಧಿಕ್ಕರಿಸಿ ತನ್ನ ʼರಹಸ್ಯ ಕಾರ್ಯಸೂಚಿʼಯನ್ನು ಹೇರಲು ಹೊರಟಿದೆ. ಹಿಂದಿ ಭಾಷೆಯ ವಕ್ತಾರಿಕೆ ಮಾಡುವ ಬಿಜೆಪಿ ಪಕ್ಷದಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ? ಎಂದು ಅವರು ಪ್ರಶ್ನಿಸಿದ್ದಾರೆ.


ಸಾಧು ಹೇಳಿದ ಅಂತಾ 6 ಅಡಿ ಆಳದ ಸಮಾಧಿ ತೋಡಿ ಅದರೊಳಗೆ ಕುಳಿತ ಭೂಪ: ಮುಂದೇನಾಯ್ತು ಗೊತ್ತಾ?


ಕನ್ನಡವನ್ನು ಮುಗಿಸುವುದನ್ನೇ ರಾಜ್ಯ ಬಿಜೆಪಿ ಸರಕಾರ ನಿತ್ಯಕಾಯಕ ಮಾಡಿಕೊಂಡಿದೆ. ಸಮಯ ಸಿಕ್ಕಾಗಲೆಲ್ಲಾ ಕನ್ನಡಕ್ಕೆ ಕೊಡಲಿಪೆಟ್ಟು ಕೊಡುವ ಕೆಲಸ ಮಾಡುತ್ತಲೇ ಇದೆ. ಕನ್ನಡಿಗರ ಶಾಂತಿ, ಸಹನೆಯನ್ನು ಬಿಜೆಪಿ ಪರೀಕ್ಷೆ ಮಾಡುತ್ತಿದೆ.


ಬೇಕೆಂದೇ, ಉದ್ದೇಶಪೂರ್ವಕವಾಗಿ ಕನ್ನಡ ಪುಸ್ತಕ ಪ್ರದರ್ಶನವನ್ನು ಕೈಬಿಟ್ಟಂತೆ ಕಾಣುತ್ತಿದೆ. ರಾಜ್ಯ ಬಿಜೆಪಿ ಸರಕಾರ ಮತ್ತು ಕನ್ನಡ ಸಂಸ್ಕೃತಿ ಖಾತೆ ಸಚಿವ ಶ್ರೀ @karkalasunil ಅವರೇ ಈ ಬಗ್ಗೆ ಕನ್ನಡಿಗರಿಗೆ ಉತ್ತರ ಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.