Viral Video: ಸಾಧು ಹೇಳಿದ ಅಂತಾ 6 ಅಡಿ ಆಳದ ಸಮಾಧಿ ತೋಡಿ ಅದರೊಳಗೆ ಕುಳಿತ ಭೂಪ: ಮುಂದೇನಾಯ್ತು ಗೊತ್ತಾ?

ನವರಾತ್ರಿ ಉತ್ಸವಗಳು ಪ್ರಾರಂಭವಾಗುವ ಒಂದು ದಿನ ಮೊದಲು 'ಸಮಾಧಿ' ತೋಡಿಕೊಂಡರೆ ಜ್ಞಾನೋದಯವಾಗುತ್ತದೆ ಎಂದು ಸಾಧು ಯುವಕನಿಗೆ ಹೇಳಿದ್ದಾನೆ. ಈ ವಿಷಯ ತಿಳಿದ ಗ್ರಾಮದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಯುವಕರನ್ನು ರಕ್ಷಿಸಿದ್ದಾರೆ.

Written by - Bhavishya Shetty | Last Updated : Sep 28, 2022, 06:24 PM IST
    • ಸಾಧುವಿನ ಸಲಹೆಯ ಮೇರೆಗೆ ಸಮಾಧಿ ತೋಡಿ ಕುಳಿತ ವ್ಯಕ್ತಿ
    • ಸ್ಥಳಕ್ಕೆ ಧಾವಿಸಿದ ಪೊಲೀಸರು ಯುವಕರನ್ನು ರಕ್ಷಿಸಿದ್ದಾರೆ
    • ಅಸಿವಾನ್ ಪೊಲೀಸ್ ಠಾಣೆ ವ್ಯಾಪ್ತಿಯ ತಾಜ್‌ಪುರ ಗ್ರಾಮದಲ್ಲಿ ಘಟನೆ
Viral Video: ಸಾಧು ಹೇಳಿದ ಅಂತಾ 6 ಅಡಿ ಆಳದ ಸಮಾಧಿ ತೋಡಿ ಅದರೊಳಗೆ ಕುಳಿತ ಭೂಪ: ಮುಂದೇನಾಯ್ತು ಗೊತ್ತಾ? title=
Man Buries Himself

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅಗಾಧವಾದ ಪ್ರಗತಿಯನ್ನು ಸಾಧಿಸುತ್ತಿದ್ದರೂ, ಭಾರತವು ಇನ್ನೂ ಮೂಢ ನಂಬಿಕೆಗಳು ಮತ್ತು ಆಚರಣೆಗಳಿಂದ ಹಿಡಿದಿಟ್ಟುಕೊಂಡಿದೆ. ಇತ್ತೀಚೆಗೆ, ಉತ್ತರ ಪ್ರದೇಶದ ಉನ್ನಾವೊದಲ್ಲಿ ವ್ಯಕ್ತಿಯೊಬ್ಬರು ಸ್ಥಳೀಯ ಹಿಂದೂ ಪುರೋಹಿತರ ಸಲಹೆಯ ಮೇರೆಗೆ ಸುಮಾರು 6 ಅಡಿ ಆಳದ ಸಮಾಧಿ ತೋಡಿ ಅದರೊಳಗೆ ಕೂತುಕೊಂಡಿದ್ದಾರೆ.

ಇದನ್ನೂ ಓದಿ: ಯುವತಿ ಜಸ್ಟ್ ಟಚ್ ಮಾಡಿದಕ್ಕೆ ಉರಿದು ಕೆಂಡವಾದ್ರು ದಿನೇಶ್ ಕಾರ್ತಿಕ್: ಮುಂದೇನಾಯ್ತು!

ನವರಾತ್ರಿ ಉತ್ಸವಗಳು ಪ್ರಾರಂಭವಾಗುವ ಒಂದು ದಿನ ಮೊದಲು 'ಸಮಾಧಿ' ತೋಡಿಕೊಂಡರೆ ಜ್ಞಾನೋದಯವಾಗುತ್ತದೆ ಎಂದು ಸಾಧು ಯುವಕನಿಗೆ ಹೇಳಿದ್ದಾನೆ. ಈ ವಿಷಯ ತಿಳಿದ ಗ್ರಾಮದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಯುವಕರನ್ನು ರಕ್ಷಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆಯ ವೀಡಿಯೊದಲ್ಲಿ, ಪೊಲೀಸರು ವ್ಯಕ್ತಿಯನ್ನು ಬಿದಿರಿನ ಹೊದಿಕೆಯಿಂದ ಮಾಡಿದ 6 ಅಡಿ ಆಳದ ಹೊಂಡದಿಂದ ಹೊರ ತೆಗೆಯುತ್ತಿರುವುದು ಕಾಣಬಹುದು. ಯುವಕನನ್ನು ಅಸಿವಾನ್ ಪೊಲೀಸ್ ಠಾಣೆ ವ್ಯಾಪ್ತಿಯ ತಾಜ್‌ಪುರ ಗ್ರಾಮದ ನಿವಾಸಿ ಶುಭಂ ಗೋಸ್ವಾಮಿ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: Diabetes: ಅಡುಗೆಮನೆಯಲ್ಲಿರುವ ಈ ಮಸಾಲೆ ಮಧುಮೇಹಿಗಳ ಪಾಲಿನ ಸಂಜೀವಿನಿ.!

ಉನ್ನಾವೊ ಜಿಲ್ಲೆಯ ತಾಜ್‌ಪುರ ಗ್ರಾಮದ ಮೂವರು ಪುರೋಹಿತರು ಧಾರ್ಮಿಕ ಆಚರಣೆಯ ಹೆಸರಲ್ಲಿ ಹಣ ಗಳಿಸುವ ಉದ್ದೇಶದಿಂದ ಯುವಕರನ್ನು ಸಮಾಧಿ ತೋಡಿ ಅದರಲ್ಲಿ ಕುಳಿತುಕೊಳ್ಳುವಂತೆ ಹೇಳಿದ್ದಾರೆ. ಸದ್ಯ ಸಮಾಧಿಯಾಗಿದ್ದ ಯುವಕ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News