ಪೆಟ್ರೋಲ್ ದರಕ್ಕಿಂತ ವೇಗವಾಗಿ ಬಿಜೆಪಿ ಸರ್ಕಾರದ ಕಮಿಷನ್ ದರ ಏರಿಕೆಯಾಗುತ್ತಿದೆ: ಕಾಂಗ್ರೆಸ್
ಅಧಿಕಾರಿಗಳು ಮುಖ್ಯಮಂತ್ರಿಗಳ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡುತ್ತಿಲ್ಲ. ರಾಜ್ಯದಲ್ಲಿ ಸಿಎಂ ಮಾತು ನಡೆಯುತ್ತಿಲ್ಲ. ಸಿಎಂ ಆದೇಶಗಳನ್ನು ಅಧಿಕಾರಿಗಳು ಕಸದ ಬುಟ್ಟಿಗೆಸೆಯುತ್ತಾರೆ ಅಂತಾ ಕಾಂಗ್ರೆಸ್ ಟೀಕಿಸಿದೆ.
ಬೆಂಗಳೂರು: ಪೆಟ್ರೋಲ್ ದರಕ್ಕಿಂತ ವೇಗವಾಗಿ ಬಿಜೆಪಿ ಸರ್ಕಾರದ ಕಮಿಷನ್ ದರ ಏರಿಕೆಯಾಗುತ್ತಿದೆಯೇ? ಎಂದು ಕಾಂಗ್ರೆಸ್ ಟೀಕಿಸಿದೆ. #BJPBrastotsava ಹ್ಯಾಶ್ ಟ್ಯಾಗ್ ಬಳಸಿ ಬುಧವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದೆ.
‘ಬಿಬಿಎಂಪಿಯಲ್ಲಿ 50% ಕೆಲವೆಡೆ 40% ಇನ್ನು ಕೆಲವೆಡೆ 100%. ಹಲವು ಕಡೆ ಕೆಲಸವನ್ನೇ ಮಾಡದೆ ಸಂಪೂರ್ಣ ಹಣ ಬಿಡುಗಡೆಯಾಗಿದೆ ಎನ್ನುವುದು ಗುತ್ತಿಗೆದಾರರ ಆರೋಪ. ಅಲ್ಲಿಗೆ ಬಿಜೆಪಿಯ ಕಮಿಷನ್ 100%ಗೆ ತಲುಪಿದಂತಾಯ್ತು!’ ಅಂತಾ ಕಾಂಗ್ರೆಸ್ ಕುಟುಕಿದೆ. ‘ಬಿಬಿಎಂಪಿ ಗುತ್ತಿಗೆದಾರರ ಕಮಿಷನ್ 40% ರಿಂದ 50% ಏರಿಕೆಯಾಗಿದೆ, ರಸ್ತೆಗುಂಡಿಗಳಿಗೆ ಬಲಿಯಾಗುವವರ ಸಂಖ್ಯೆಯೂ ಏರುತ್ತಿದೆ. ಬೆಂಗಳೂರಿನ ರಸ್ತೆಗಳು ಪರಲೋಕದ ದಾರಿಗಳಾಗಿ ಬದಲಾಗಿರುವುದು #BJPBrashtotsavaದ ಪರಿಣಾಮದಿಂದ. ರಸ್ತೆ ಗುಂಡಿಗೆ ಆಗಿರುವ ಸಾವುಗಳೆಲ್ಲವೂ ಸರ್ಕಾರವೇ ಮಾಡಿದ ಕೊಲೆಯಲ್ಲವೇ, ಪರಿಹಾರ ನೀಡಬೇಕಲ್ಲವೇ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ನಕಲಿ ಡಿಗ್ರಿ-ಪಿಯುಸಿ ಮಾರ್ಕ್ಸ್ ಕಾರ್ಡ್ ಜಾಲ: ಇಬ್ಬರು ಆರೋಪಿಗಳ ಬಂಧನ
‘ಹಣ ವಸೂಲಿ ಮಾಡಿ ಕೊಡದಿದ್ದರೆ ಸಸ್ಪೆಂಡ್ ಮಾಡುತ್ತೇನೆಂದು ‘ಮನಿ’ರತ್ನ ಅಧಿಕಾರಿಗಳಿಗೆ ಬೆದರಿಕೆ ಹಾಕಿರುವ ಸಂಗತಿ ಗುತ್ತಿಗೆದಾರರಿಂದ ಹೊರಬಂದಿದೆ. ಸಿಎಂ ಬೊಮ್ಮಾಯಿಯವರೇ, ರೌಡಿಸಂ ಮೂಲಕ ಭ್ರಷ್ಟಾಚಾರ ನಡೆಸುತ್ತಿರುವ ಸಚಿವ ಮುನಿರತ್ನರ ರಾಜೀನಾಮೆ ಯಾವಾಗ ಪಡೆಯುವಿರಿ? ತನಿಖೆ ನಡೆಸಿ ತಮ್ಮ ಪಾರದರ್ಶಕತೆ ಯಾವಾಗ ತೋರಿಸುವಿರಿ? ಸ್ವತಃ ಗುತ್ತಿಗೆದಾರರಾಗಿದ್ದ ಸಚಿವ 'ಮನಿ'ರತ್ನ ಸಚಿವ ಸ್ಥಾನ ಸಿಕ್ಕಿದ್ದೇ ತಡ ಗುತ್ತಿಗೆದಾರರನ್ನೇ ದೋಚಲು ಶುರು ಮಾಡಿದ್ದಾರೆ. 40% ಕಮಿಷನ್ ಸರ್ಕಾರ ಅಧಿಕಾರಿಗಳನ್ನೇ ವಸೂಲಿಗೆ ಬಳಸಿಕೊಳ್ಳುತ್ತಿದೆ ಎಂದು ಗುತ್ತಿಗೆದಾರರ ಆರೋಪ. ರಾಜ್ಯದಲ್ಲಿ IAS, IPS ಅಧಿಕಾರಿಗಳ ಬಂಧನವಾಗಿದ್ದು ಇದಕ್ಕೆ ಪುಷ್ಠಿ ಕೊಡುತ್ತದೆ’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಗುತ್ತೇಗೆದಾರರ ಸಂಘ ಅಧ್ಯಕ್ಷರಿಂದ ಮತ್ತೊಂದು ಆರೋಪ
ಬೊಮ್ಮಾಯಿಯವರೇ, ಈ ಸವಾಲು ಸ್ವೀಕರಿಸಲು ಹಿಂದೇಟು ಏಕೆ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.