40% ಸರ್ಕಾರದ ಬಿಜೆಪಿ ಭ್ರಷ್ಟೋತ್ಸವ ನಿಲ್ಲುವುದು ಯಾವಾಗ?: ಕಾಂಗ್ರೆಸ್ ಪ್ರಶ್ನೆ

ಕಮಿಷನ್ ಸರ್ಕಾರದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರೇ, ನಿಮಗೆ ಸಂತೋಷ್ ಪಾಟೀಲ್‌ರಂತೆ ಇನ್ನೆಷ್ಟು ಬಲಿ ಬೇಕು?’ ಎಂದು ಪ್ರಶ್ನಿಸಿದೆ.

Written by - Zee Kannada News Desk | Last Updated : Aug 24, 2022, 03:22 PM IST
  • ಕಮಿಷನ್ ಕಾಟದಿಂದ ಬೇಸತ್ತ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಿಎಂಗೆ ಪತ್ರ ಬರೆದಿದ್ದಾರೆ
  • ಕಮಿಷನ್ ಸರ್ಕಾರದ ಸಿಎಂ ಬೊಮ್ಮಾಯಿಯವರೇ ನಿಮಗೆ ಸಂತೋಷ್ ಪಾಟೀಲ್‌ರಂತೆ ಇನ್ನೆಷ್ಟು ಬಲಿ ಬೇಕು?
  • 40% ಸರ್ಕಾರದ #BJPBrashtotsava ನಿಲ್ಲುವುದು ಯಾವಾಗ? ಎಂದು ಕಾಂಗ್ರೆಸ್ ಪ್ರಶ್ನೆ
40% ಸರ್ಕಾರದ ಬಿಜೆಪಿ ಭ್ರಷ್ಟೋತ್ಸವ ನಿಲ್ಲುವುದು ಯಾವಾಗ?: ಕಾಂಗ್ರೆಸ್ ಪ್ರಶ್ನೆ  title=
#BJPBrashtotsava ನಿಲ್ಲುವುದು ಯಾವಾಗ?

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಮತ್ತೆ 40% ಕಮಿಷನ್ ಆರೋಪ ಕೇಳಿಬಂದಿದ್ದು, ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಗಂಭೀರ ಆರೋಪ ಮಾಡಿದ್ದಾರೆ. ಇದೇ ವಿಚಾರವಾಗಿ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ‘40% ಸರ್ಕಾರದ #BJPBrashtotsava ನಿಲ್ಲುವುದು ಯಾವಾಗ? ಎಂದು ಪ್ರಶ್ನಿಸಿದೆ.

ಕಮಿಷನ್ ಕಾಟದಿಂದ ಬೇಸತ್ತು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಗುತ್ತಿಗೆದಾರರ ಸಂಘ ಸಿಎಂಗೆ ಪತ್ರ ಬರೆದಿದೆ. ಕಮಿಷನ್ ಸರ್ಕಾರದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರೇ, ನಿಮಗೆ ಸಂತೋಷ್ ಪಾಟೀಲ್‌ರಂತೆ ಇನ್ನೆಷ್ಟು ಬಲಿ ಬೇಕು?’ ಎಂದು ಪ್ರಶ್ನಿಸಿದೆ.

ಇದನ್ನೂ ಓದಿ: ಸಚಿವ ಮುನಿರತ್ನ ಕಲೆಕ್ಷನ್ ಆರೋಪ: ದಾಖಲೆ ಜೊತೆಗೆ ಲೋಕಾಯುಕ್ತಕ್ಕೆ ದೂರು ನೀಡಲಿ- ಸಿಎಂ ಬೊಮ್ಮಾಯಿ

ಲೂಟಿಗ್ಯಾಂಗ್‍ನ ಅಮೋಘ ಕೊಡುಗೆಗಳು!

ಇನ್ನು ರಾಜ್ಯದಲ್ಲಿ ನಡೆದಿರುವ ಪರೀಕ್ಷಾ ಅಕ್ರಮಗಳ ವಿರುದ್ಧ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಹೇಳಿಕೆ ಉಲ್ಲೇಖಿಸಿ ಕಾಂಗ್ರೆಸ್ ಟ್ವೀಟ್ ಮಾಡಿದೆ. ‘ಬಿಜೆಪಿ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರದ ಆಳ-ಅಗಲ ಬಗೆದಷ್ಟು ಬಯಲಾಗುತ್ತಿದೆ. KPTCL ಪರೀಕ್ಷೆಯಲ್ಲಿ ಸ್ಮಾರ್ಟ್‍ವಾಚ್ ಮೂಲಕ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿ "ಡಿಜಿಟಲ್ ಇಂಡಿಯಾ" ಕಾರ್ಯಕ್ರಮವನ್ನು ಬಿಜೆಪಿ ಅಕ್ಷರಶಃ ಯಶಸ್ವಿಗೊಳಿಸಿದೆ. PSI ಹಗರಣ, KPTCL ಹಗರಣ, ಬಿಟ್ ಕಾಯಿನ್ ಹಗರಣಗಳು 40% ಸರ್ಕಾರದ ಲೂಟಿಗ್ಯಾಂಗ್‍ ನ ಅಮೋಘ ಕೊಡುಗೆಗಳು’ ಅಂತಾ ಸುರ್ಜೆವಾಲಾ ಟೀಕಿಸಿದ್ದಾರೆ.

‘ಕೋಟಿ ಕನಸು ಹೊತ್ತು ಪರೀಕ್ಷೆ ಬರೆದ ಬಡಮಕ್ಕಳ ಕನಸನ್ನು ತಮ್ಮ 40% ಕಮಿಷನ್ ದಾಹಕ್ಕೆ ನುಚ್ಚುನೂರುಗೊಳಿಸಿದೆ ಬಿಜೆಪಿ. ರಾಜ್ಯದಲ್ಲಿ ಅಭಿವೃದ್ಧಿಯ ಪರ್ವ ನಡೆಸಬೇಕಾದ ಬಿಜೆಪಿ "ಭ್ರಷ್ಟಾಚಾರದ ಮಹಾಪರ್ವ" ನಡೆಸುತ್ತಾ ಜನರ ಜೀವನದ ಜೊತೆ ಆಟವಾಡುತ್ತಿದೆ. ಈ ಭ್ರಷ್ಟ 40% ಕಮಿಷನ್ ಸರ್ಕಾರಕ್ಕೆ ಕರ್ನಾಟಕದ ಜನ ಆದಷ್ಟು ಬೇಗ ಮುಕ್ತಿ ನೀಡಲಿದ್ದಾರೆ’ ಎಂದು ಸುರ್ಜೆವಾಲಾ ಕುಟುಕಿದ್ದಾರೆ.

ಇದನ್ನೂ ಓದಿ: ಪಕ್ಷ ಬದಲಾಯಿಸಲು 4 ಶಾಸಕರಿಗೆ ಬಿಜೆಪಿ ತಲಾ 20 ಕೋಟಿ ರೂ. ಆಫರ್!: AAP ಸಂಸದ ಸಂಜಯ್ ಸಿಂಗ್ ಆರೋಪ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News