ಬೆಂಗಳೂರು: ಕಾಂಗ್ರೆಸ್ ಸಂಸ್ಕೃತಿಯನ್ನು ರಾಜ್ಯದ ಜನರಿಗೆ ಪರಿಚಯಿಸಿದ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್(DK Suresh) ರವರಿಗೆ ಧನ್ಯವಾದವೆಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ(CT Ravi) ಹೇಳಿದ್ದಾರೆ. ಮಂಗಳವಾರ ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

‘ಇಂದಿನ ಯುವಜನತೆ ಕಾಂಗ್ರೆಸ್(Congress) ಸಂಸ್ಕೃತಿ ಅಂದರೆ ಭ್ರಷ್ಟಾಚಾರ, ಹೊಣೆಗೇಡಿತನ ಅಂದುಕೊಂಡಿದ್ದರು, ರೌಡಿಸಂ ಕೂಡಾ ಅದರ ಅವಿಭಾಜ್ಯ ಅಂಗ ಅನ್ನುವುದು ಈಗ ಜಗಜ್ಜಾಹೀರಾಗಿದೆ. ಮುಜುಗರವಿಲ್ಲದೆ ಈ ‘ರಿಪಬ್ಲಿಕ್ ಆಫ್ ರೌಡಿಸಂ’ಅನ್ನು ಸಮರ್ಥಿಸಿಕ್ಕೊಳ್ಳುವ ವ್ಯಕ್ತಿಗಳು ಕೂಡಾ ಕಾಂಗ್ರೆಸ್ ಕುಸಂಸ್ಕೃತಿಯ ಪಾಲುದಾರರು. ನಮ್ಮ ರಕ್ತವೇ ಬೇರೆ ಅನ್ನುವ KPCC ಅಧ್ಯಕ್ಷರೇ(DK Shivakumar) ನಿಮ್ಮ ರಕ್ತದ ಮಾದರಿ ಪರೀಕ್ಷೆಗೆ ಸಮಯ ವ್ಯಯ ಮಾಡಬೇಡಿ! ನಿಮ್ಮ ರಕ್ತದ ಗುಣ ನಿನ್ನೆ ನಿಮ್ಮ ಸಹೋದರ ಸಾರ್ವಜನಿಕವಾಗಿ ತೋರಿಸಿದ್ದಾರೆ. ನಿನ್ನೆಯೇ ಅದರ  ಪರೀಕ್ಷೆ ಮತ್ತು ಫಲಿತಾಂಶ ರಾಜ್ಯದ ಜನತೆಗೆ ಸಿಕ್ಕಿದೆ’ ಅಂತಾ ಸಿ.ಟಿ.ರವಿ ಕುಟುಕಿದ್ದಾರೆ.


ನನ್ನ ರಾಜಕೀಯ ಆರಂಭ, ಅಂತ್ಯ ಬಿಜೆಪಿಯಲ್ಲೇ: ಶಾಸಕ ಎಂ.ಪಿ.ಕುಮಾರಸ್ವಾಮಿ


‘ಕಾಂಗ್ರೆಸ್ ಸಂಸ್ಕೃತಿಯನ್ನು ರಾಜ್ಯದ ಜನರಿಗೆ ಪರಿಚಯಿಸಿದ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್(DK Suresh) ರವರಿಗೆ ಧನ್ಯವಾದ. ಸಾರ್ವಜನಿಕವಾಗಿ ತೋಳೇರಿಸಿ ಸಚಿವರ ಕಡೆ ನುಗ್ಗುವ ನಿಮ್ಮ ರಾಜಕೀಯ ದಾರ್ಷ್ಟ್ಯ ಪ್ರಜಾಪ್ರಭುತ್ವಕ್ಕೆ ಸೂಕ್ತವೇ? ಸುಳ್ಳರೆಲ್ಲ ಸೇರಿ ಕಟ್ಟುತ್ತಿರುವ ಸಾಮ್ರಾಜ್ಯದ ಒಂದು ಮುಖ ಸಿದ್ದರಾಮಯ್ಯ(Siddaramaiah)ನವರ ರೂಪದಲ್ಲಿ ಮತಾಂತರ ನಿಷೇಧ ಕಾಯಿದೆಯ ಸಂದರ್ಭದಲ್ಲಿ ಹೊರಬಿತ್ತು. ಸುಪ್ರೀಂಕೋರ್ಟ್ ಹಾಗೂ NGT ತೀರ್ಪಿಗಾಗಿ ಕಾಯುತ್ತಿರುವ ಮೇಕೆದಾಟು ಯೋಜನೆ ಪಾದಯಾತ್ರೆಯ ನಾಟಕದಲ್ಲಿ ಹೊರಬಿದ್ದದ್ದು ನಿಮ್ಮ ರಾಜಕೀಯ ಪಾದಯಾತ್ರೆ ಗಿಮಿಕ್ಕಿನ 2ನೇ ಮುಖ’ವೆಂದು ಅವರು ಟೀಕಿಸಿದ್ದಾರೆ.


#ಕಾಂಗ್ರೆಸ್‌ಗೂಂಡಾಗಿರಿ, "ಕಾಂಗ್ರೆಸ್‌ ಗೂಂಡಾಗಳನ್ನು ತಯಾರು ಮಾಡುವ ಫ್ಯಾಕ್ಟರಿ": ಬಿಜೆಪಿ ಟ್ವೀಟಾಸ್ತ್ರ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.