ಕನಕಪುರದ ರೌಡಿ ಸಹೋದರನ ಅಟ್ಟಹಾಸ: ಡಿ.ಕೆ.ಸುರೇಶ್ ವಿರುದ್ಧ ಬಿಜೆಪಿ ಆಕ್ರೋಶ

ಕನಕಪುರದ ನೈಸರ್ಗಿಕ ಸಂಪತ್ತೆಲ್ಲವೂ ಒಂದೇ ಕುಟುಂಬದ ಸ್ವತ್ತು ಎಂಬಂತೆ #ರೌಡಿಡಿಕೆಬ್ರದರ್ಸ್‌ ನೋಡಿಕೊಂಡಿದ್ದಾರೆ ಅಂತಾ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

Written by - Zee Kannada News Desk | Last Updated : Jan 4, 2022, 06:46 AM IST
  • ರಾಮನಗರ ಜಿಲ್ಲೆ ಎಂದರೆ ‘ಕನಕಪುರ ರಿಪಬ್ಲಿಕ್’ ಎಂದು ಡಿಕೆ ಸಹೋದರರು ಭಾವಿಸಿದಂತಿದೆ
  • ಕನಕಪುದ ರೌಡಿ ಸಹೋದರರಲ್ಲೊಬ್ಬರು ಮುಖ್ಯಮಂತ್ರಿಗಳಿದ್ದ ವೇದಿಕೆಯಲ್ಲೇ ಅಟ್ಟಹಾಸ ಮೆರೆದಿದ್ದಾರೆ
  • ಕ್ರಿಮಿನಲ್ ಮೊಕದ್ದಮೆಗಳೇ #ರೌಡಿಡಿಕೆಬ್ರದರ್ಸ್‌ ಗಳ ಇತಿಹಾಸ ಹೇಳುತ್ತದೆ ಅಂತಾ ಬಿಜೆಪಿ ಟೀಕಿಸಿದೆ
ಕನಕಪುರದ ರೌಡಿ ಸಹೋದರನ ಅಟ್ಟಹಾಸ: ಡಿ.ಕೆ.ಸುರೇಶ್ ವಿರುದ್ಧ ಬಿಜೆಪಿ ಆಕ್ರೋಶ title=
ಡಿ.ಕೆ.ಸುರೇಶ್ ವಿರುದ್ಧ ಬಿಜೆಪಿ ಆಕ್ರೋಶ

ಬೆಂಗಳೂರು: ರಾಮನಗರದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ(Basavaraj Bommai) ಸಮ್ಮುಖದಲ್ಲಿಯೇ ಸಂಸದ ಡಿ.ಕೆ.ಸುರೇಶ್ ಹಾಗೂ ಸಚಿವ ಸಿ.ಎನ್.ಅಶ್ವತ್ಥ್ ನಾರಾಯಣ(CN Ashwath Narayan) ಕೈ ಕೈ ಮಿಲಾಯಿಸಿರುವ ಘಟನೆ ನಡೆದಿದೆ. #ರೌಡಿಡಿಕೆಬ್ರದರ್ಸ್‌ ಹ್ಯಾಶ್ ಟ್ಯಾಗ್ ಬಳಿಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಡಿ.ಕೆ.ಸುರೇಶ್ ಹಾಗೂ ಡಿ.ಕೆ.ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

‘ರಾಮನಗರ ಜಿಲ್ಲೆ ಎಂದರೆ ‘ಕನಕಪುರ ರಿಪಬ್ಲಿಕ್’ ಎಂದು ಡಿಕೆ ಸಹೋದರರು ಭಾವಿಸಿದಂತಿದೆ. ನಿಮ್ಮ ಅಟ್ಟಹಾಸ, ದೌರ್ಜನ್ಯ, ರಾಜಕೀಯ ಮೇಲಾಟವನ್ನು ಎಲ್ಲ ಕಾಲಕ್ಕೂ ನೋಡಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ. ಸಾರ್ವಜನಿಕ ಸಭೆಯಲ್ಲಿ ಸಂಸದ #DKSuresh ಹಾಗೂ #MLCRavi ಅವರ ವರ್ತನೆ ಅಕ್ಷಮ್ಯವಾದುದು’ ಅಂತಾ ಬಿಜೆಪಿ ಕಿಡಿಕಾರಿದೆ.

‘ಬಂಡೆ ಕಲ್ಲುಗಳನ್ನೇ ನುಂಗಿ ನೀರು ಕುಡಿದ ಕನಕಪುದ ರೌಡಿ ಸಹೋದರರಲ್ಲೊಬ್ಬರು ಮುಖ್ಯಮಂತ್ರಿಗಳಿದ್ದ ವೇದಿಕೆಯಲ್ಲೇ ಅಟ್ಟಹಾಸ ಮೆರೆದಿದ್ದಾರೆ, ಹಾಗಾದರೇ ಭೂಗತರಾಗಿ ಏನೇನು ಮಾಡಿರಬಹುದು!? ಕೊತ್ವಾಲನ ಶಿಷ್ಯರ ವಿರುದ್ಧ ಅರಣ್ಯ ಇಲಾಖೆಯ ಅಧಿಕಾರಿಗಳು ಸಲ್ಲಿಸಿದ್ದ ಕ್ರಿಮಿನಲ್ ಮೊಕದ್ದಮೆಗಳೇ #ರೌಡಿಡಿಕೆಬ್ರದರ್ಸ್‌ ಗಳ ಇತಿಹಾಸ ಹೇಳುತ್ತದೆ’ ಅಂತಾ ಬಿಜೆಪಿ(BJP) ಟೀಕಿಸಿದೆ.

ಇದನ್ನೂ ಓದಿ: ಕಾಂಗ್ರೆಸ್ ನಾಯಕರು ತಾಲಿಬಾನಿಗಳಿಗೂ ಸ್ಪರ್ಧೆ ನೀಡುವ ರೀತಿ ವರ್ತಿಸುತ್ತಿದ್ದಾರೆ: ಸಿ.ಟಿ.ರವಿ

‘ಕನಕಪುರದ ನೈಸರ್ಗಿಕ ಸಂಪತ್ತೆಲ್ಲವೂ ಒಂದೇ ಕುಟುಂಬದ ಸ್ವತ್ತು ಎಂಬಂತೆ #ರೌಡಿಡಿಕೆಬ್ರದರ್ಸ್‌(DK Brothers) ನೋಡಿಕೊಂಡಿದ್ದಾರೆ. ಅಧಿಕಾರದ ರುಚಿ ನೋಡುವುದಕ್ಕೆ ಮುನ್ನವೇ ಶ್ರೀಗಂಧದ ಕಳ್ಳಸಾಗಣೆ ಮಾಡುತ್ತಿದ್ದವರು ಈಗ ಸರ್ಕಾರಿ ಯಂತ್ರವನ್ನೇ ಬೆದರಿಸುವ ಉಡಾಫೆತನ ತೋರಿದ್ದಾರೆ. ಕರ್ನಾಟಕ ಲಾಲೂ ಕಾಲದ ಬಿಹಾರವಲ್ಲ ಎಂಬುದು‌ ನೆನಪಿರಲಿ’ ಅಂತಾ ಬಿಜೆಪಿ ಎಚ್ಚರಿಕೆ ನೀಡಿದೆ.

‘ತೋಳ್ಬಲ, ಅಕ್ರಮ ಸಂಪತ್ತಿನ ಬಲದಿಂದ ಮೆರೆಯುತ್ತಿರುವ ಕನಕಾಸುರರು ಕರ್ನಾಟಕ(Karnataka)ದ ಅಧಿಕಾರ ಹಿಡಿದು ಶಾಂತಿ ಕದಡುವ ಯತ್ನ ನಡೆಸುತ್ತಿದ್ದಾರೆ. ಇವರು ಅಧಿಕಾರಕ್ಕೆ ಬಂದರೆ ಕಂಡ ಕಂಡ ಖಾಲಿ ಜಾಗಕ್ಕೆ ಬೇಲಿ ಹಾಕುವುದರಲ್ಲಿ ಯಾವುದೇ ಅನುಮಾನವಿಲ್ಲ. ರಾಜ್ಯದ ಜನರು #ರೌಡಿಡಿಕೆಬ್ರದರ್ಸ್‌ ಕೈಗೆ ಎಂದಿಗೂ ಅಧಿಕಾರ ನೀಡಲಾರರು’ ಅಂತಾ ಬಿಜೆಪಿ ಟ್ವೀಟ್ ಮಾಡಿದೆ.

ಇದನ್ನೂ ಓದಿ: ಲಂಚ ಪಡೆದ ಆರೋಪ: ಮಡಿವಾಳ ಠಾಣೆ ಇನ್ಸ್ ಪೆಕ್ಟರ್ ಸಸ್ಪೆಂಡ್..!

ರಣಾಂಗಣವಾದ ಸರ್ಕಾರಿ ಕಾರ್ಯಕ್ರಮ

ರಾಮನಗರದ ಜಿಲ್ಲಾ ಕಚೇರಿಗಳ ಸಂಕಿರ್ಣದ ಮುಂಭಾಗ ಸೋಮವಾರ ಪ್ರತಿಮೆಗಳ ಅನಾವರಣ ಹಾಗೂ ವಿವಿಧ ಕಾಮಗಾರಿಗಳಿಗೆ ಚಾಲನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಮಾಡುತ್ತಿದ್ದ ಭಾಷಣಕ್ಕೆ ಸಂಸದ ಡಿ.ಕೆ.ಸುರೇಶ್(DK Suresh)ತೀವ್ರ ವಿರೋಧ ವ್ಯಕ್ತಪಡಿಸಿದರು. ಸಚಿವರ ಮಾತುಗಳಿಂದ ಕೆರಳಿದ ಸುರೇಶ್ ಕುಳಿತ ಜಾಗದಿಂದ ಎದ್ದು ಅಶ್ವತ್ಥ್ ನಾರಾಯಣ ಬಳಿ ತೆರಳಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಇಬ್ಬರು ವೇದಿಕೆಯಲ್ಲಿ ಅದೂ ಸಿಎಂ ಬೊಮ್ಮಾಯಿ ಸಮ್ಮುಖದಲ್ಲಿಯೇ ಕೈ ಕೈ ಮಿಲಾಯಿಸಲು ಮುಂದಾದರು. ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ರವಿ ಕೋಪದಿಂದ ಮೈಕ್ ಕಿತ್ತೆಸೆದು ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದರು.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News