ಬೆಂಗಳೂರು : ಬೆಂಗಳೂರಿನ ಮೊದಲ ಉಕ್ಕಿನ ಫ್ಲೈ ಓವವರ್ ಗೆ ಅಪ್ಪು ಹೆಸರಿಡುವ ಸಾಧ್ಯತೆ ಇದೆ. ಉಕ್ಕಿನ ಫ್ಲೈ ಓವವರ್ ಗೆ ಪುನೀತ್ ರಾಜ್ ಕುಮಾರ್ ಹೆಸರಿಡುವಂತೆ  ಬಿಜೆಪಿ ಮುಖಂಡ  ರಮೇಶ್ ಎನ್ ಆರ್ ಬಿಬಿಎಂಪಿ ಕಮಿಷನರ್ ಗೆ ಪತ್ರ ಬರೆದಿದ್ದಾರೆ. ಈ ಸೇತುವೆಗೆ ಡಾ. ಪುನೀತ್ ರಾಜ್ ಕುಮಾರ್ ಫ್ಲೈ ಓವರ್  ಎಂದು ನಾಮಕರಣ ಮಾಡುವಂತೆ ಆಗ್ರಹಿಸಿದ್ದಾರೆ. 


COMMERCIAL BREAK
SCROLL TO CONTINUE READING

ಶಿವಾನಂದ ಸರ್ಕಲ್ ಬಳಿ ಬೆಂಗಳೂರಿನ ಮೊದಲ ಉಕ್ಕಿನ ಫ್ಲೈ ಓವರ್ ನಿರ್ಮಾಣವಾಗಿದೆ. ಈ ಫ್ಲೈ ಓವರ್ ಕಾಮಗಾರಿಗೆ ಈ ಹಿಂದೆ ಶಿವಾನಂದ ಸ್ಟೋರ್ ನವರು ಅಡ್ಡಿಪಡಿಸಿದ್ದರು.  ಇದೀಗ ಫ್ಲೈ ಓವರ್ ಕಾಮಗಾರಿ  ಮುಕ್ತಾಯವಾಗಿದೆ.  ಆದುದರಿಂದ  ಈ ಸೇತುವೆಗೆ ಯಾವುದೇ ಕಾರಣಕ್ಕೂ ಶಿವಾನಂದ ಫ್ಲೈ ಓವರ್ ಎಂದು ನಾಮಕರಣ ಆಗಬಾರದು ಎಂದು ಬಿಜೆಪಿ ಮುಖಂಡ  ರಮೇಶ್ ಎನ್ ಆರ್  ಪತ್ರ ಬರೆದಿದ್ದಾರೆ. ಬದಲಾಗಿ ಈ ಮೇಲ್ಸೆತುವೆಗೆ  ಪುನೀತ್ ರಾಜ್ ಕುಮಾರ ಹೆಸರಿಸುವಂತೆ ಆಗ್ರಹಿಸಿದ್ದಾರೆ. 


ಇದನ್ನೂ ಓದಿ : Crime News: ಚಿಕ್ಕ ಕೋಣೆಗಾಗಿ ಅತ್ತೆಯನ್ನೇ ಹೊಡೆದು ಕೊಂದ ಸೊಸೆ..!


ಔನೀತ ರಾಜ್ ಕುಮಾರ್ ಕನ್ನಡ ಸಿನಿರಂಗದಲ್ಲಿ ಸೇವೆ ಸಲ್ಲಿಸಿರುವುದು ಮಾತ್ರವಲ್ಲ, ಸಾಮಾಜಿಕ ಕಳಕಳಿ ಇದ್ದ ವ್ಯಕ್ತಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಉಕ್ಕಿನ ಮೇಲ್ಸೆತುವೆಗೆ ಈ ಬಗ್ಗೆ ಬಿಬಿಎಂಪಿ ಕಮಿಷನರ್ ಗೆ ಪತ್ರ ಬರೆದ ಬಿಜೆಪಿ ಮುಖಂಡ ಡಾ. ಪುನೀತ್ ರಾಜ್ ಕುಮಾರ್ ಫ್ಲೈ ಓವರ್ ಎಂದು  ನಾಮಕರಣ ಮಾಡುವಂತೆ ಪತ್ರ ಬರೆದಿದ್ದಾರೆ. 


[[{"fid":"261722","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]


ಈಗಾಗಲೇ ಬಿಬಿಎಂಪಿ ವ್ಯಾಪ್ತಿಯ ವಾರ್ಡ್ ಒಂದಕ್ಕೆ ಅಪ್ಪು ಹೆಸರಿಡಲಾಗಿದೆ. ಅದರಂತೆ ನೂತನ ಉಕ್ಕಿನ ಸೇತುವೆಗೂ ಅಪ್ಪು ಹೆಸರು ಇಡುವಂತೆ  ಬಿಬಿಎಂಪಿ ಆಯುಕ್ತರು ಹಾಗೂ ಆಡಳಿತಾಧಿಕಾರಿಗೆ ಪತ್ರದ ಮೂಲಕ ಮನವಿ ಸಲ್ಲಿಸಿದ್ದಾರೆ. 


ಇದನ್ನೂ ಓದಿ : ಕಾಂಗ್ರೆಸ್ ಪಕ್ಷಕ್ಕೆ ಪ್ರಧಾನಿ ಮೋದಿ ರಾಮನಾಮ ಜಪಿಸುವಂತೆ ಮಾಡಿದ್ದಾರೆ: ಬಿಜೆಪಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.