ಮಳೆಗೆ ಹತ್ತಿ ಬೆಳೆ ಸಂಪೂರ್ಣ ಹಾಳು, ವಿಷದ ಬಾಟಲಿ ಹಿಡಿದು ರೈತ ಕಣ್ಣೀರು

ಮಳೆಯಿಂದಾಗಿ ಉತ್ತಮ ಇಳುವರಿ ಬಂದಿದ್ದ ಹತ್ತಿ ಬೆಳೆ ಸಂಪೂರ್ಣ ನೀರು ಪಾಲಾಗಿದೆ.  ಕಣ್ಣ ಮುಂದೆಯೇ ಬೆಲೆ ನೀರು ಪಾಲಾಗುತ್ತಿರುವುದನ್ನು ಕಂಡು ರೈತ ಕಣ್ಣೀರಿಟ್ಟಿದ್ದಾನೆ.  

Written by - Ranjitha R K | Last Updated : Oct 14, 2022, 01:40 PM IST
  • ರಾಯಚೂರು ಜಿಲ್ಲೆಯಲ್ಲಿ ಧಾರಾಕಾರ ಮಳೆ
  • ರೈತ ಬೆಳೆದಿದ್ದ ಹತ್ತಿ ಬೆಲೆ ನಾಶ
  • ಬೆಳೆ ನೀರಿನಲ್ಲಿ ಕೊಚ್ಚಿ ಹಿಒಗುತ್ತಿರುವುದನ್ನು ಕಂಡು ಮರುಗಿದ ರೈತ
ಮಳೆಗೆ ಹತ್ತಿ ಬೆಳೆ ಸಂಪೂರ್ಣ ಹಾಳು, ವಿಷದ ಬಾಟಲಿ ಹಿಡಿದು ರೈತ ಕಣ್ಣೀರು  title=
Crop Lose

ರಾಯಚೂರು : ಜಿಲ್ಲೆಯಲ್ಲಿ ಕಳೆದ ಎರಡು ಮೂರು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದೆ. ಜಿಲ್ಲೆಯಲ್ಲಿ ಸುರಿದ ಮಳೆ ಆವಾಂತರವನ್ನೇ ಸೃಷ್ಟಿಸಿದೆ. ಮಳೆಯಿಂದಾಗಿ ಉತ್ತಮ ಇಳುವರಿ ಬಂದಿದ್ದ ಹತ್ತಿ ಬೆಳೆ ಸಂಪೂರ್ಣ ನೀರು ಪಾಲಾಗಿದೆ.  ಕಣ್ಣ ಮುಂದೆಯೇ ಬೆಳೆ  ನೀರು ಪಾಲಾಗುತ್ತಿರುವುದನ್ನು ಕಂಡು ರೈತ ಕಣ್ಣೀರಿಟ್ಟಿದ್ದಾನೆ.   ಕೈಯಲ್ಲಿ ವಿಷದ ಬಾಟಲಿ ಹಿಡಿದು  ಗೋಳಾಡಿದ್ದಾನೆ. 

ರಾಯಚೂರು ಜಿಲ್ಲೆಯಾದ್ಯಂತ ಸುರಿದ ಭಾರೀ ಮಳೆಗೆ ರೈತ ಕಂಗೆಟ್ಟಿದ್ದಾನೆ. ಜಿಲ್ಲೆಯಾದ್ಯಂತ ಸಾವಿರಾರು ಹೆಕ್ಟರ್ ಪ್ರದೇಶದಲ್ಲಿ ಬೆಳೆದಿದ್ದ ಹತ್ತಿ ಬೆಳೆ ಸಂಪೂರ್ಣ ಹಾಳಾಗಿದೆ. ನೀರಮಾನ್ವಿಯ ರೈತ ಶಿವರಾಜ್ ತನ್ನ ಜಮೀನಿನಲ್ಲಿ ಬೆಳೆದಿದ್ದ ಹತ್ತಿ  ಹಾಳಾಗಿರೋದನ್ನ ಕಂಡು ಕಣ್ಣೀರಿಟ್ಟಿದ್ದಾರೆ. ರೈತ ಶಿವರಾಜ್ ಸುಮಾರು 
10 ಎಕರೆಯಲ್ಲಿ ಹತ್ತಿ ಬೆಳೆದಿದ್ದರು . ಆದರೆ ಮಳೆಯ ನೀರು ತೋಟಕ್ಕೆ ನುಗ್ಗಿರುವ ಕಾರಣ ಸಂಪೂರ್ಣ ಬೆಳೆ ನೀರಿನಲ್ಲಿ ಕೊಚ್ಚಿ ಹೋಗಿದೆ.  

ಇದನ್ನೂ ಓದಿ :  ಕಾಂಗ್ರೆಸ್ ನವರದ್ದು 85 % ಸರ್ಕಾರ. : ಸಿಎಂ ಬೊಮ್ಮಾಯಿ

10 ಎಕರೆಯಲ್ಲಿ ಬೆಳೆದಿದ್ದ ಹತ್ತಿ, ಇನ್ನೇನು ಕಾಯಿ ಒಡೆಯುವ ಹಂತದಲ್ಲಿತ್ತು. ಆದರೆ ಮಳೆ ಎಲ್ಲವನ್ನೂ ನಾಶ ಮಾಡಿದೆ. ಕಣ್ಣ ಮುಂದೆಯೇ ತಾನು ಬೆಳೆದಿರುವ ಬೆಳೆ ಹಾಳಾಗಿದ್ದನ್ನ ಕಂಡು, ರೈತ  ಶಿವರಾಜ್ ಗೋಳಾಡಿದ್ದಾರೆ. ಕೈಯಲ್ಲಿ ವಿಷದ ಬಾಟಲಿ ಹಿಡಿದುಕೊಂಡು ಕಣ್ಣೀರು ಹಾಕಿದ್ದಾರೆ. ಮೊಣಕಾಲುದ್ದ ನೀರು ಜಮೀನಿನಲ್ಲಿ ಹರಿಯುತ್ತಿರೋದನ್ನ ಕಂಡು ರೈತ ಮರುಗಿದ್ದಾನೆ. 

ಇದನ್ನೂ ಓದಿ :  "ಹಿಜಾಬ್ ಪ್ರಕರಣ ವಿಚಾರದಲ್ಲಿ ಸುಪ್ರೀಂಕೋರ್ಟ್ ನ ಅಂತಿಮ ತೀರ್ಪು ಬಹಳ ಮುಖ್ಯ"

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News