ಬೆಂಗಳೂರು: ‘ಹಸಿವು ಮುಕ್ತ ಕರ್ನಾಟಕ’ ಧ್ಯೇಯದೊಂದಿಗೆ 2013ರಲ್ಲಿ ಸಿದ್ದರಾಮಯ್ಯರ ಸರ್ಕಾರ ಜಾರಿಗೆ ತಂದ ‘ಅನ್ನಭಾಗ್ಯ’ ಯೋಜನೆ(Anna Bhagya scheme) ವಿಚಾರವಾಗಿ ಇಂದು ವಿಧಾನಸಭಾ ಕಲಾಪದಲ್ಲಿ ಶಾಸಕ ಅವವಿಂದ್ ಬೆಲ್ಲದ್ ಮಾತನಾಡಿದ್ದು, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.


COMMERCIAL BREAK
SCROLL TO CONTINUE READING

ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ವಿರುದ್ಧ ಟೀಕಾಪ್ರಹಾರ ನಡೆಸಿದ ಅರವಿಂದ್ ಬೆಲ್ಲದ್, ‘ಕೇಂದ್ರದ ಸಬ್ಸಿಡಿ ಜೊತೆ ರಾಜ್ಯದಿಂದಲೂ ಸ್ವಲ್ಪ ಸಬ್ಸಿಡಿ ಕೊಟ್ಟು ಅನ್ನಭಾಗ್ಯ ಜಾರಿಗೆ ತಂದರು. ಕೇಂದ್ರದ ಮೇಜರ್ ಸಬ್ಸಿಡಿ ಇದ್ರೂ ರಾಜ್ಯದ ಜನತೆಗೆ ನಾವೇ ಉಚಿತ ಅಕ್ಕಿ ಕೊಟ್ವಿ ಅಂತಾ ಕಾಂಗ್ರೆಸ್ ನವರು ಹೇಳಿಕೊಂಡ್ರು ಎಂದು ಕುಟುಕಿದರು.


ಇದನ್ನೂ ಓದಿ: ಕಾಂಗ್ರೆಸ್ ಯುವನಾಯಕ ಈಗ ಪೂರ್ಣಕಾಲಿಕ ನಿರುದ್ಯೋಗಿ: ರಾಹುಲ್ ಗಾಂಧಿ ಬಗ್ಗೆ ಬಿಜೆಪಿ ವ್ಯಂಗ್ಯ


ಈ ವೇಳೆ ಬೆಲ್ಲದ್(Arvind Bellad) ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕ ಯು.ಟಿ.ಖಾದರ್, ‘ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಪ್ರತಿಜ್ಞೆ ಸ್ವೀಕರಿಸಿದ್ದಾಗಲೇ ‘ಅನ್ನಭಾಗ್ಯ’ ಘೋಷಿಸಿದರು. ಈ ಯೋಜನೆ ಇಡೀ ದೇಶಕ್ಕೆ ಮಾದರಿಯಾಗಿದೆ. ರೈಟ್ ಟು ಫುಡ್ ಆಕ್ಟ್ ಗಿಂತಲೂ 1 ವರ್ಷ ಮುಂಚೆ ಅನ್ನಭಾಗ್ಯ ಜಾರಿಗೆ ಬಂತು. ಆದಾದ ಒಂದು ವರ್ಷದ ಬಳಿಕ ಪ್ರಧಾನಿ ಮೋದಿ ಯೋಜನೆ ತಂದರು’ ಎಂದು ಹೇಳಿದರು.


ಬೆಲ್ಲದ್ ಮಾತಿನ ವೇಳೆ ಮಧ್ಯೆಪ್ರವೇಶಿದ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah), ‘ಹಳ್ಳಿಗಳಲ್ಲಿ ಬೇರೆ, ಪಟ್ಟಣಗಳಲ್ಲಿ ಬೇರೆ ಆಹಾರ ಪದ್ಧತಿ ಇತ್ತು. ಮೈಸೂರು ಭಾಗದ ಹಳ್ಳಿಗಳಲ್ಲಿ ಅನ್ನ ತಿನ್ನುತ್ತಿದ್ದದ್ದು ಕೇವಲ ಹಬ್ಬ ಅಥವಾ ನೆಂಟರು ಬಂದಾಗ ಮಾತ್ರ. ಅಕ್ಕಿ ಇಲ್ಲದೆ ಹೋಗಿದ್ರೆ ರಾಗಿ ಮುದ್ದೆ ಅಥವಾ ಜೋಳದ ರೊಟ್ಟಿ ತಿನ್ನುತ್ತಾ ಇದ್ವಿ. ಬಡ ಕುಟುಂಬಗಳಲ್ಲಿ ಅನ್ನವನ್ನು ಮಾಡುತ್ತಲೇ ಇರಲಿಲ್ಲ. ಸಣ್ಣ ಮಕ್ಕಳಿಗೆ ಖಾಯಿಲೆ ಬಂದಾಗ ರಾಗಿ ಮುದ್ದೆ, ಜೋಳದ ರೊಟ್ಟಿ ಕೊಡೋದಕ್ಕೆ ಆಗ್ತಾ ಇರಲಿಲ್ಲ. ಆಗ ಚೆನ್ನಾಗಿ ಬೇಯಿಸಿರುವ ಅನ್ನ ಕೊಡಬೇಕಾಗಿತ್ತು. ಪಾಪ ಇದಕ್ಕಾಗಿ ಯಾರ ಮನೆಯಲ್ಲಿ ಅನ್ನ ಮಾಡ್ತಾರೆ? ಬೇರೆಯವರ ಮನೆ ಬಳಿ ತುತ್ತು ಅನ್ನಕ್ಕಾಗಿ ಹೋಗಿ ನಿಲ್ತಾ ಇದ್ರು. ನಾನು ಇದನ್ನು ಕಣ್ಣಾರೆ ನೋಡಿದ್ದೇನೆ’ ಎಂದರು.


ಇದನ್ನೂ ಓದಿ: ಸಿದ್ದರಾಮಯ್ಯನವರೇ ಕಾಂಗ್ರೆಸ್ ಪಕ್ಷದಲ್ಲಿ ಎಷ್ಟು ಬಣವಿದೆ?: ಬಿಜೆಪಿ


ಈ ಕಾರಣಕ್ಕಾಗಿಯೇ ಪ್ರಣಾಳಿಕೆಯಲ್ಲಿ 1 ರೂ.ಗೆ ಒಂದು ಕೆಜಿ ಅಕ್ಕಿ(Anna Bhagya scheme) ಕೊಡಬೇಕೆಂದು ನಿರ್ಧಾರ ಮಾಡಿದ್ದೇವು. 2 ವರ್ಷಗಳ ಬಳಿಕ ಉಚಿತವಾಗಿ ಅಕ್ಕಿ ಕೊಟ್ಟೆವು. 7 ಕೆಜಿ ಅಕ್ಕಿಯನ್ನು ಬಡವರಿಗೆ ಉಚಿತವಾಗಿ ನೀಡಿದ್ದೇವು. ಇದರಲ್ಲಿ ಕೇಂದ್ರ ಸರ್ಕಾರದ ಪಾಲು ಇದೆ, ಇಲ್ಲವೆಂದು ನಾವು ಹೇಳಲ್ಲ. ಫುಡ್ ಸೆಕ್ಯುರಿಟಿ ಅನ್ನೋದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸರ್ಕಾರ ಇದ್ದಾಗ ಜಾರಿಗೆ ತಂದಿದ್ದು. ಇದರಲ್ಲಿ 3 ರೂ.ಗೆ ಕೇಂದ್ರ ಸರ್ಕಾರ ಕೆಜಿ ಅಕ್ಕಿ ಕೊಡ್ತಾರೆ. ಆ 3 ರೂ.ವನ್ನು ರಾಜ್ಯ ಸರ್ಕಾರವೇ ಭರಿಸಬೇಕು‌. ಅವರು 5 ಕೆಜಿಗೆ ಮಾತ್ರ ಕೊಡ್ತಾಯಿದ್ರು, ಈ ಪೈಕಿ ಮತ್ತೆ 2 ಕೆಜಿಗೆ ನಾವೇ ಹಣ ಕೊಡಬೇಕಿತ್ತು. ಆ 2 ಕೆಜಿಗೆ ಮಾರುಕಟ್ಟೆಯಲ್ಲಿ ಏನ್ ರೇಟ್ ಇದೆ ಅಷ್ಟು ಹಣ ಕೊಟ್ಟು ಖರೀದಿ ಮಾಡಬೇಕಾಯ್ತು. ನಾವು 4 ಸಾವಿರ ಕೋಟಿ ರೂ. ಫುಡ್ ಸಬ್ಸಿಡಿ ಕೊಡ್ತಾಯಿದ್ವಿ. ನಾನು ಪ್ರಮಾಣವಚನ ಸ್ವೀಕಾರ ಮಾಡಿದ ಒಂದೇ ಗಂಟೆಯಲ್ಲಿ ಈ ಯೋಜನೆ ಘೋಷಣೆ ಮಾಡಿದ್ದೆ ಎಂದು ಮಾಹಿತಿ ನೀಡಿದರು.


ನಾವು 7 ಕೆಜಿ ಅಕ್ಕಿ ಕೊಡ್ತಾ ಇದ್ವಿ, ಈಗ ನೀವು 5 ಕೆಜಿ ಅಕ್ಕಿ ಮಾಡಿದ್ದೀರಿ. ಬೆಲ್ಲದ್(Arvind Bellad) ಅವರೇ 7 ಕೆಜಿ ಅಕ್ಕಿ ಕೊಡುವಂತೆ ನೀವು ಒತ್ತಾಯ ಮಾಡಿ. 1 ಕೆಜಿ ಅಕ್ಕಿ ಕೊಡ್ತೀವಿ ಎಂದು ರಾಜ್ಯಪಾಲರ ಬಳಿ ಹೇಳಿಸಿದ್ದೀರಾ? ಅಕ್ಕಿ-ಗೋದಿ ತಿಂದರೆ ಕಾಯಿಲೆ ಬರುತ್ತೆ ಅಂತಾ ಹೇಳ್ತಾ ಇದ್ದೀರಾ? ಇದು ವೈಜ್ಞಾನಿಕವಾಗಿ ಫ್ರೂವ್ ಆಗಿಲ್ಲವೆಂದು ಬೆಲ್ಲದ್ ಮಾತಿಗೆ ಸಿದ್ದರಾಮಯ್ಯ ತಿರುಗೇಟು ನೀಡಿದರು.  


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.