ಬೆಂಗಳೂರು: ಶೀಘ್ರದಲ್ಲಿಯೇ ಕೋಪ-ದ್ವೇಷ(Hate and Anger)ದ ಪಟ್ಟಿಯಲ್ಲಿ ಭಾರತವು ಅಗ್ರಸ್ಥಾನಕ್ಕೇರಲಿದೆ ಎಂದು ಹೇಳಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi)ಗೆ ಬಿಜೆಪಿ ತಿರುಗೇಟು ನೀಡಿದೆ. ‘ಕಾಂಗ್ರೆಸ್ ಪಕ್ಷದ ‘ಹಿರಿಯ’ ಯುವನಾಯಕ ಈಗ ಪೂರ್ಣಕಾಲಿಕ ನಿರುದ್ಯೋಗಿ’ ಅಂತಾ ಬಿಜೆಪಿ ವ್ಯಂಗ್ಯವಾಡಿದೆ.
‘ಅನೇಕ ಹಿರಿಯ ನಾಯಕರು ಟ್ವೀಟ್ ಮಾಡುವುದರಿಂದ ಪಕ್ಷಕ್ಕೇನು ಲಾಭವಿಲ್ಲ ಎಂದು ರಾಹುಲ್ ಗಾಂಧಿ(Rahul Gandhi)ಗೆ ಪರೋಕ್ಷವಾಗಿ ತಿವಿದಿದ್ದಾರೆ. ಆದರೂ ರಾಹುಲ್ಗೆ ಬುದ್ಧಿ ಬಂದಿಲ್ಲ. ಕೋಪ ಮತ್ತು ದ್ವೇಷ(Hate and Anger)ದಲ್ಲಿ ಭಾರತ ಅಗ್ರಸ್ಥಾನ ಗಳಿಸಲಿದೆ ಎಂದು ಮಾತೃಭೂಮಿಯನ್ನೇ ಹೀಯಾಳಿಸಿದ್ದಾರೆ!’ ಎಂದು ಕುಟುಕಿದೆ.
Dear @RahulGandhi,
These rankings are the result of your family's corrupt rule of 48 years.
Remember your father Rajiv's words - "of every rupee spent by the Govt, only 15 paise reached intended Beneficiary".
People's hate & anger have reduced your party to just 53 LS seats. https://t.co/bv4p4hrPr5
— BJP Karnataka (@BJP4Karnataka) March 20, 2022
ಇದನ್ನೂ ಓದಿ: Shamanur Shivashankarappa : 'ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ನಾನೇ ಮುಖ್ಯಮಂತ್ರಿ'
‘ರಾಹುಲ್ ಗಾಂಧಿ(Rahul Gandhi)ಯವರೇ ಈ ಶ್ರೇಯಾಂಕಗಳು ನಿಮ್ಮ ಕುಟುಂಬದ 48 ವರ್ಷಗಳ ಭ್ರಷ್ಟ ಆಡಳಿತದ ಫಲಿತಾಂಶವಾಗಿದೆ. ‘ಸರ್ಕಾರ ಖರ್ಚು ಮಾಡುವ ಪ್ರತಿ ರೂಪಾಯಿಯಲ್ಲಿ, ಉದ್ದೇಶಿತ ಫಲಾನುಭವಿಗೆ ತಲುಪುವುದು ಕೇವಲ 15 ಪೈಸೆ’ ಎಂಬ ನಿಮ್ಮ ತಂದೆ ರಾಜೀವ್ ಗಾಂಧಿ(Rajiv Gandhi)ಯವರ ಮಾತುಗಳನ್ನು ನೆನಪಿಸಿಕೊಳ್ಳಿ. ಜನರ ದ್ವೇಷ ಮತ್ತು ಕೋಪದ ಪರಿಣಾಮ ನಿಮ್ಮ ಪಕ್ಷ ಲೋಕಸಭೆಯಲ್ಲಿ ಕೇವಲ 53 ಸ್ಥಾನಗಳಿಗೆ ಇಳಿದಿದೆ’ ಎಂದು ಟೀಕಿಸಿದೆ.
ರಾಹುಲ್ ಗಾಂಧಿ ಹೇಳಿದ ಕೋಪ ಮತ್ತು ದ್ವೇಷ ವಿಷಯಗಳಿಗೆ ಅವರದೇ ಪಕ್ಷ ವಾರೀಸುದಾರರಾಗಿದ್ದಾರೆ.
√ ಕಾಂಗ್ರೆಸ್ ಪಕ್ಷಕ್ಕೆ ಹಿಂದೂಗಳ ಮೇಲೆ ದ್ವೇಷ
√ ಹಿಂದೂ ಆಚರಣೆಗಳ ಮೇಲೆ ಕೋಪ
√ ಹಿಂದೂ ಸಂತರ ಮೇಲೆ ದ್ವೇಷ
√ ಭಾರತದ ಮೇಲೆ ಕೋಪ
√ ಅಭಿವೃದ್ಧಿ ರಾಜಕಾರಣದ ಮೇಲೆ ದ್ವೇಷಎಷ್ಟಾದರೂ ಇಟಲಿ ವಂಶಸ್ಥರಲ್ಲವೇ!?
— BJP Karnataka (@BJP4Karnataka) March 20, 2022
‘ರಾಹುಲ್ ಗಾಂಧಿ(Rahul Gandhi) ಹೇಳಿದ ಕೋಪ ಮತ್ತು ದ್ವೇಷ(Hate and Anger) ವಿಷಯಗಳಿಗೆ ಅವರದೇ ಪಕ್ಷ ವಾರೀಸುದಾರರಾಗಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಹಿಂದೂಗಳ ಮೇಲೆ ದ್ವೇಷ, ಹಿಂದೂ ಆಚರಣೆಗಳ ಮೇಲೆ ಕೋಪ, ಹಿಂದೂ ಸಂತರ ಮೇಲೆ ದ್ವೇಷ, ಭಾರತದ ಮೇಲೆ ಕೋಪ ಮತ್ತು ಅಭಿವೃದ್ಧಿ ರಾಜಕಾರಣದ ಮೇಲೆ ದ್ವೇಷ. ಎಷ್ಟಾದರೂ ಇಟಲಿ ವಂಶಸ್ಥರಲ್ಲವೇ!?’ ಅಂತಾ ಬಿಜೆಪಿ ಟ್ವೀಟ್ ಮಾಡಿದೆ.
ಇದನ್ನೂ ಓದಿ: ‘ಮುಂದೊಂದು ದಿನ ಕೇಸರಿ ಧ್ವಜವೇ ನಮ್ಮ ರಾಷ್ಟ್ರಧ್ವಜವಾದೀತು’
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.