ವಿಜಯಪುರ: ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪಯವ್ರು ನೂತನ ಸಚಿವರ ಅಂತಿಮ ಪಟ್ಟಿಯನ್ನ ಬಿಡುಗಡೆ ಮಾಡಿದ್ದು, ರಾಜ್ಯಭವನಕ್ಕೆ ಕಳಿಹಿಸಿಕೊಟ್ಟಿದ್ದಾರೆ. ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ, ಬಿಜೆಪಿಯಲ್ಲಿ ಅಸಮಾಧಾನದ ಹೊಗೆ ಎದ್ದಿದ್ದು,‌ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಸಿಡಿದೆದ್ದಿದ್ದಾರೆ.


COMMERCIAL BREAK
SCROLL TO CONTINUE READING

ನಗರದಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್(B.S.Yeddyurappa)‌, 'ಮೊದಲೆಲ್ಲಾ ಪಕ್ಷಕ್ಕೆ ದುಡಿದವರ ಕೋಟಾ, ಜಾತಿವಾರು ಕೋಟಾ, ಜಿಲ್ಲಾವಾರು ಕೋಟಾ ಅಂತಾ ಇತ್ತು. ಆದ್ರೆ, ಸಧ್ಯ ಇರುವುದು ಬ್ಲ್ಯಾಕ್‌ ಮೇಲ್‌ ಕೋಟಾ, ಹಣದ ಕೋಟಾ. ಹೌದು, ಸಿ.ಡಿಯದ್ದು ಒಂದು ಕೋಟಾವಾದ್ರೆ, ಸಿ.ಡಿ ಮತ್ತು ಹಣ ಕೊಟ್ಟವರದ್ದು ಮತ್ತೊಂದು ಕೋಟಾ. ಮುಖ್ಯಮಂತ್ರಿ ಯಡಿಯೂರಪ್ಪ ಅವ್ರ ಸಿಡಿ ಇಟ್ಟುಕೊಂಡು ಯಾರೆಲ್ಲಾ ಬ್ಲ್ಯಾಕ್‌ ಮೇಲ್‌ ಮಾಡ್ತಾರೋ ಅವ್ರಿಗೆ ಮಂತ್ರಿಗಿರಿ ನೀಡಿದ್ದಾರೆ' ಎಂದು ಯತ್ನಾಳ್ ಆರೋಪಿಸಿದ್ದಾರೆ.


Ramesh Jarkiholi: ಮಾರ್ಚ್- ಏಪ್ರಿಲ್‌ನಲ್ಲಿ ಮತ್ತೆ ಸಂಪುಟ ಪುನಃರಚನೆ: ಹೊಸಬಾಂಬ್ ಸಿಡಿಸಿದ ಜಾರಕಿಹೊಳಿ‌


ಇನ್ನು 'ಯಡಿಯೂರಪ್ಪ ಅವ್ರ ರಕ್ತ ಸಂಬಂಧಿಯೊಬ್ಬರ ಮುಖಾಂತರ ಯಡಿಯೂರಪ್ಪ ಅವ್ರ ಸಿಡಿ ವಿಚಾರ ಇಟ್ಟುಕೊಂಡು ಬ್ಲ್ಯಾಕ್‌ ಮೇಲ್‌ ಮಾಡಿ ಮಂತ್ರಿಗಿರಿ ಗಿಟ್ಟಿಸಿಕೊಂಡಿದ್ದಾರೆ. ಇನ್ನು ಕೆಲವೊಬ್ಬರು ಹಣ ನೀಡಿ ಮಂತ್ರಿ ಸ್ಥಾನ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.


BJP: ಸಿಎಂ ಬಿಎಸ್ ವೈಗೆ ಸಂಕಟ: ಬಿಜೆಪಿ ಪಕ್ಷದೊಳಗೆ ಅಸಮಾಧಾನ ಸ್ಪೋಟ!


ಈ ಮೂಲಕ ರಾಜ್ಯ ರಾಜಕೀಯದಲ್ಲಿ ಮತ್ತೆ ಸಿಡಿಯ ಕುರಿತು ಚರ್ಚೆ ಶುರು ಮಾಡಿದ್ದಾರೆ. ಇನ್ನು ಇದಕ್ಕೂ ಮುನ್ನ ಶಾಸಕ ವಿಶ್ವನಾಥ್‌ ಕೂಡ ಇದೇ ಮಾತುಗಳನ್ನ ಆಡಿದ್ದು, ಯಾರು ಈ ಸೈನಿಕ. ಆತನ ಸಾಧನೆ ಏನ್ರಿ? ಆತನೊಬ್ಬ 420. ನಿಮ್ಮ ಮಾಜಿ ಪಿಎ ಸಂತೋಷ್‌ ಮತ್ತು ಸಿ.ಪಿ ಯೋಗೇಶ್ವರ್‌ ನಿಮ್ಮನ್ನ ಏನಾದ್ರು ಬ್ಲ್ಯಾಕ್‌ ಮೇಲ್‌ ಮಾಡುತ್ತಿದ್ದಾರಾ? ಎಂದು ಪ್ರಶ್ನಿಸಿದರು.


B.S.Yediyurappa: ಏಳು ಮಂದಿಗೆ ಮಂತ್ರಿ ಭಾಗ್ಯ: ನೂತನ ಸಚಿವರ ಹೆಸರು ಪ್ರಕಟಿಸಿದ ಸಿಎಂ ಬಿಎಸ್​ವೈ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ